Advertisement

ಮೋದಿ ಢೋಂಗಿತನ ಬಯಲು: ಬಿಆರ್‌

03:03 PM Aug 09, 2017 | Team Udayavani |

ಕಲಬುರಗಿ: ಕರ್ನಾಟಕದ ಸಚಿವ ಡಿ.ಕೆ.ಶಿವಕುಮಾರ ಮೇಲೆ ಐಟಿ ದಾಳಿ ಮಾಡಿರುವುದರ ಹಿಂದೆ ಕೇಂದ್ರ ಸರಕಾರದ ಪಿತೂರಿ ಇದೆ. ಇದು ಸಂಪೂರ್ಣ ರಾಜಕೀಯ ತಂತ್ರಗಾರಿಕೆ ಭಾಗವಾಗಿದೆ. ಇದರಿಂದ ಪ್ರಧಾನಿ ಮೋದಿ ಅವರ ಢೋಂಗಿತನ ಬಯಲಾಗಿದೆ ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಧಿಕ್ಕರಿಸಿ ಬಿಹಾರದಲ್ಲಿನ ಸರಕಾರ ಕೈಬಿಟ್ಟು ಪುನಃ ಬಿಜೆಪಿಯೊಂದಿಗೆ ಸೇರಿ ಹೊಸ ಸರಕಾರ ರಚನೆ ಮಾಡಿದ್ದನ್ನು ಸ್ವಾಗತಿಸಿರುವ ಮೋದಿ, ನಿತೀಶ ಅವರೇ ಭ್ರಷ್ಟಾಚಾರವನ್ನು ನೀವು ತಾಳಲಿಲ್ಲ.. ಜನರಿಗೆ ಪ್ರಜಾಸತ್ತೆಯನ್ನು ಮರಳಿಸಿದ್ದಿರಿ ಎಂದು ಶಹಬ್ಟಾಸಗಿರಿ ನೀಡಿ ಬೆನ್ನು ತಟ್ಟಿದ್ದರು. ಆದರೆ, ಕರ್ನಾಟಕದಲ್ಲಿ ಮಾತ್ರ ಭ್ರಷ್ಟ ಯಡಿಯೂರಪ್ಪ ಹಾಗೂ ಜನಾರ್ದನ ರೆಡ್ಡಿ ಅವರ ಮುಖ ಮಾಡಿ ಚುನಾವಣೆಗೆ ರಣತಂತ್ರ ಹೂಡುತ್ತಿದ್ದಾರೆ. ಇದ್ಯಾವ ನೈತಿಕತೆಯನ್ನು ದೇಶದ ಜನತೆಗೆ ತೋರಿಸಬಯಸಿದ್ದಾರೆ ಎಂದರು. ಮೋದಿ ಅವರೇ ನಿಮಗೆ ನಿಜಕ್ಕೂ ದೇಶದಲ್ಲಿ ಸುಧಾರಣೆ, ಭ್ರಷ್ಟತನ ತಡೆಯುವ ಆಲೋಚನೆ ಇದ್ದರೆ ಅರ್ಬನ್‌ ಸೀಲಿಂಗ್‌ ಆ್ಯಕ್ಟ್ ಜಾರಿಗೆ ತನ್ನಿ. ಇದರಿಂದ ಕ್ರಾಂತಿ ಆಗಲಿ, ಇಂದಿರಾಜೀ ಇದ್ದಾಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಅಂದು ಹಲವಾರು ಬುದ್ಧಿವಂತರು ಇದ್ದು ಅವರಿಗೆ
ತಿಳಿವಳಿಕೆ ನೀಡಿ ದೇಶದ ಹಿತ ಕಾಯ್ದರು. ಅದರಂತೆ ನೀವು ಮಾಡಿ. ನೀವು ಅಮಿತ್‌ಶಾ ಅಂತಹವರನ್ನು ನಿಮ್ಮ ತಂಡದಲ್ಲಿ ಇರಿಸಿಕೊಂಡಿದ್ದಿರಿ ಅವರು ಅಂಬಾನಿ ಗೆಳೆಯರಾಗಿದ್ದಾರೆ ಎಂದು ಛೇಡಿಸಿದರು.

Advertisement

ಲಿಂಗಾಯತ ಸ್ವತಂತ್ರ ಧರ್ಮ ಪಡೆಯೋಣ: ಲಿಂಗಾಯತ ಸ್ವತಂತ್ರ ಧರ್ಮ ಕುರಿತು ತಮ್ಮ ನಿಲುವು ಸ್ಪಷ್ಟ ಪಡಿಸಿದ ಅವರು, ತಾಂತ್ರಿಕವಾಗಿ ವೀರಶೈವವು ಪ್ರತ್ಯೇಕ ಧರ್ಮದ ಸ್ಥಾನ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಅನ್ಯ ಮನಸ್ಕರಾಗದೇ ಲಿಂಗಾಯತ ಹೆಸರಿನಲ್ಲಿ ಸ್ವತಂತ್ರ ಧರ್ಮವನ್ನು ಪಡೆಯೋಣ ಎಂದರು. ನಮ್ಮೊಳಗೆ ಜಗಳವಿಲ್ಲ, ಆದರೆ, ವೈಚಾರಿಕ ಭಿನ್ನಮತವಿದೆ. ಆದರೆ, ಮತಬೇಧವಿಲ್ಲ. ಆದರೆ, ಕೆಲವರು ಇಲ್ಲದ್ದನ್ನು ಮಾಡಲು ಹೋಗಿ ಭಾರತದ ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ
ಸಿಗಬಹುದಾಗಿದ್ದ ಮೀಸಲಾತಿಯಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಮಠಾಧೀಶರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆ. 10ರಂದು ಸಭೆ ನಡೆಯಲಿದೆ. ಬಳಿಕ ಏಕಾಭಿಪ್ರಾಯ ಬಂದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಇಲ್ಲದಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಗಣೇಶ ಪಾಟೀಲ, ಶರಣಬಸಪ್ಪ ಭೂಸನೂರು, ಶರಣು ಪಾಟೀಲ ಇನ್ನೂ ಹಲವರು ಇದ್ದರು.

110 ಕೋಟಿ ರೂ. ವೆಚ್ಚದ 26 ಕಾಮಗಾರಿಗೆ ಚಾಲನೆ
ಕಲಬುರಗಿ: ಇದೇ ತಿಂಗಳ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಳಂದ ಪಟ್ಟಣಕ್ಕೆ ಆಗಮಿಸಿ, 110 ಕೋಟಿ ರೂ.ವೆಚ್ಚದ 26 ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾ ನದಿಯಿಂದ ಅಮರ್ಜಾಕ್ಕೆ ನೀರು ಒದಗಿಸುವ ಮೂಲಕ ಈ ಭಾಗದ
ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಇದರಿಂದಾಗಿ ಇಡೀ ಕ್ಷೇತ್ರದ ಜನರು ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು. ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಪ್ರವಾಸೋದ್ಯಮ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ವಸತಿ ಸಚಿವ ಬಿ. ಕೃಷ್ಣಪ್ಪ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು, ಹೌಸಿಂಗ್‌ ಬೋರ್ಡ್‌ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಚಿಂಚೋಳಿ ಶಾಸಕ ಉಮೇಶ ಜಾಧವ್‌, ರಾಮಕೃಷ್ಣ ಆಗಮಿಸಲಿದ್ದಾರೆ ಎಂದರು. ಇದೆ ವೇಳೆ ಜಯಪ್ರಕಾಶ ನಾರಾಯಣ ಪುತ್ಥಳಿಯನ್ನು ಮುಖ್ಯಮಂತ್ರಿಗಳು ಅನಾವರಣ
ಮಾಡುವರು. ಸರಕಾರಿ ಜೂನಿಯರ್‌ ಕಾಲೇಜು ಆವರಣದಲ್ಲಿ ಬೃಹತ್‌ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕೌಶಲ್ಯಾಭಿವೃದ್ಧಿ ಕೇಂದ್ರ
ಸೇರಿದಂತೆ ಸುಮಾರು 26 ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುವರು ಎಂದು ಹೇಳಿದರು.

ಕಪಾಳಮೋಕ್ಷ: ಆಳಂದ ಮಿನಿ ವಿಧಾನಸೌಧದ ನಿರ್ಮಾಣಕ್ಕೆ ಸಂಬಂ ಧಿಸಿದಂತೆ ರಾಜ್ಯವ್ಯಾಪಿ ನಡೆದ ಚರ್ಚೆ ಇಲ್ಲಿಯವರೆಗೆ ಎಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ನಡೆದಿಲ್ಲ. ವಿರೋ ಧಿಗಳಿಗೆ ಸುಪ್ರಿಂಕೋರ್ಟ್‌ ಕಪಾಳಮೋಕ್ಷ ಮಾಡುವ ಮೂಲಕ ರಿಯಲ್‌ ಎಸ್ಟೇಟ್‌ ದಂಧೆಕೋರರಿಗೆ ತಕ್ಕ ಪಾಠ ಕಲಿಸಿದೆ ಎಂದರು. ಸುಪ್ರಿಂಕೋರ್ಟ್‌ ಸಾಮಾಜಿಕ ಕಾರ್ಯಕರ್ತ ಟಿ.ಎ. ಅಬ್ರಾಹಂ ಅವರಿಗೆ 25 ಲಕ್ಷ ರೂ. ದಂಡ ವಿಧಿಸಿದೆ. ಅವರೂ ಸಹ ಮೇಲ್ಮನವಿ ಸಲ್ಲಿಸಿದ್ದು, ದಂಡ ಕಡಿಮೆ ಮಾಡಲು ಹಾಗೂ ಕಾಲಾವಕಾಶ
ಕೋರಿದ್ದಾರೆ. ಆ ಕುರಿತಾದ ನೋಟಿಸ್‌ ನನಗೂ ಬಂದಿದೆ ಎಂದು ತಿಳಿಸಿದರು. ಆಳಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶರಣಬಸಪ್ಪ ಭೂಸನೂರು, ಗಣೇಶ ಪಾಟೀಲ, ಶರಣಬಸಪ್ಪ ಪಾಟೀಲ ಹಾಜರಿದ್ದರು.

ಅಭಿನಂದನಾ ಸಮಾರಂಭ
ಪಾತಾಳಗಂಗೆ ಯೋಜನೆಯನ್ನು ಆಳಂದಕ್ಕೆ ಜಾರಿ ಮಾಡುತ್ತಿಲ್ಲ. ಬದಲಾಗಿ ಅಂತರ್ಜಲಮಟ್ಟ ಹೆಚ್ಚಿಸಲು ಈಗಾಗಲೇ 60 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. 20 ಕೋಟಿ ರೂ.ಗಳ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ. ಪೂರಕ ಬಜೆಟ್‌ನಲ್ಲಿ ಉಳಿದ ಹಣ
ಒದಗಿಸಲಾಗುತ್ತಿದೆ. ಮಹಾರಾಷ್ಟ್ರದ ಸಿರಪುರ ಮಾದರಿಯಲ್ಲಿಯೇ ಅಂತರ್ಜಲಮಟ್ಟ ಹೆಚ್ಚಳಕ್ಕೆ 176 ತಾಲೂಕುಗಳಲ್ಲಿ ಹಾಗೂ ಆಳಂದನಲ್ಲಿ ಒಂದು ಪೈಲೆಟ್‌ (ಪ್ರಾಯೋಗಿಕ) ಯೋಜನೆಯನ್ನಾಗಿ ರೂಪಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರಿಗೆ ಇನ್ನೊಮ್ಮೆ ಬೃಹತ್‌ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು 

Advertisement
Advertisement

Udayavani is now on Telegram. Click here to join our channel and stay updated with the latest news.

Next