Advertisement

ಬಾಲಿವುಡ್ ದಂತಕಥೆ ಬಿ.ಆರ್.ಛೋಪ್ರಾ ಜುಹು ಬಂಗ್ಲೆ 183 ಕೋಟಿ ರೂಪಾಯಿಗೆ ಮಾರಾಟ

12:07 PM Jun 18, 2022 | Team Udayavani |

ಮುಂಬಯಿ: ಬಾಲಿವುಡ್ ನ ದಂತಕಥೆ ನಿರ್ಮಾಪಕ, ನಿರ್ದೇಶಕ ಬಿಆರ್ (ಬಲ್ ದೇವ್ ರಾಜ್) ಛೋಪ್ರಾ ಅವರ ಮುಂಬೈಯ ಜುಹುವಿನಲ್ಲಿರುವ ಬಂಗ್ಲೆಯನ್ನು ಅಂದಾಜು 183 ಕೋಟಿ ರೂಪಾಯಿ ಮಾರಾಟ ಮಾಡಲಾಗಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

Advertisement

ಇದನ್ನೂ ಓದಿ:ಪಿಯುಸಿ ಫಲಿತಾಂಶ: ದ.ಕನ್ನಡ ಪ್ರಥಮ, ಉಡುಪಿ ದ್ವಿತೀಯ; ಇಲ್ಲಿದೆ ಜಿಲ್ಲಾವಾರು ಫಲಿತಾಂಶ

ವಾಣಿಜ್ಯ ನಗರಿಯ ಪ್ರಸಿದ್ಧ ರಿಯಲ್ ಎಸ್ಟೇಟ್ ಡೆವಲಪರ್ ಕೆ.ರಹೇಜಾ ಕಾರ್ಪ್ ಛೋಪ್ರಾ ಅವರ 25,000 ಚದರ ಅಡಿ ವಿಸ್ತೀರ್ಣದ ಮನೆಯನ್ನು ಖರೀದಿಸಿದೆ. ದಿವಂಗತ ಬಿ.ಆರ್ ಛೋಪ್ರಾ ಅವರ ಸೊಸೆ ರೇಣು ರವಿ ಛೋಪ್ರಾ (ರವಿ ಛೋಪ್ರಾ ಪತ್ನಿ) ಅವರಿಂದ ಮನೆಯನ್ನು ಖರೀದಿಸಲಾಗಿದೆ ಎಂದು ವರದಿ ವಿವರಿಸಿದೆ.

ಎಕಾನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಭೂಮಿ ಮತ್ತು ಮನೆ ಸೇರಿದಂತೆ 182.76 ಕೋಟಿ ರೂಪಾಯಿ ಹಣ ಪಾವತಿಸಲಾಗಿದ್ದು, ಇದರಲ್ಲಿ ರಿಜಿಸ್ಟ್ರೇಶನ್ ನ 11 ಕೋಟಿ ರೂಪಾಯಿ ಮೊತ್ತವೂ ಸೇರಿರುವುದಾಗಿ ವರದಿ ತಿಳಿಸಿದೆ.

ಸ್ವಾಧೀನಪಡಿಸಿಕೊಂಡ ಆಸ್ತಿಯಲ್ಲಿ ಕೆ.ರಹೇಜಾ ಕಾರ್ಪ್ ಐಶಾರಾಮಿ ವಸತಿ ಸಮುಚ್ಛಯ ನಿರ್ಮಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ. ಬಿ.ಆರ್ ಛೋಪ್ರಾ ಅವರು ಬಾಲಿವುಡ್ ನಲ್ಲಿ ನಯಾ ದೌರ್ (1957), ಸಾಧನಾ (1958), ಕಾನೂನ್ 91961), ಗುಮ್ರಾಹ್ (1963), ಇನ್ಸಾಫ್ ಕಾ ತಾರಾಝ್ (1980), ನಿಕಾಹ್ (1982), ಅವಾಮ್ (1987) ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಅವರದ್ದಾಗಿದೆ.

Advertisement

ಬಳಿಕ ಬಿ.ಆರ್. ಛೋಪ್ರಾ ಅವರು 1988ರಲ್ಲಿ ಮಹಾಭಾರತ ಟಿವಿ ಸೀರಿಯಲ್ ಮೂಲಕ ಜನಪ್ರಿಯರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಬಿ.ಆರ್. ಛೋಪ್ರಾ ಅವರಿಗೆ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದರು. 1998ರಲ್ಲಿ ಪ್ರತಿಷ್ಠಿತ ಪದ್ಮಭೂಷಣ್ ಪ್ರಶಸ್ತಿ ಕೂಡಾ ಇವರ ಮುಡಿಗೇರಿತ್ತು. 2008, ನವೆಂಬರ್ 5ರಂದು ಛೋಪ್ರಾ ನಿಧನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next