ಲಕ್ನೋ: ಯೋಗಿ ಆದಿತ್ಯ ನಾಥ್ ನಾಯಕತ್ವದ ಉತ್ತರ ಪ್ರದೇಶದ ಬಿಜೆಪಿ ಸರಕಾರ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಹೆಸರಿಗೆ ಹೊಸ ಸೇರ್ಪಡೆ ಮಾಡಿದೆ.
ಅಂಬೇಡ್ಕರ್ ಅವರ ಹೆಸರಿನ ನಡುವಿನಲ್ಲಿ ‘ರಾಮ್ ಜೀ’ ಎನ್ನುವ ಹೆಸರನ್ನು ಸೇರಿಸಲು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸರ್ಕಾರ ಶಿಫಾರಸು ಮಾಡಿದೆ.
ಇನ್ನುಮುಂದೆ ಉ.ಪ್ರ ಸರಕಾರದ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಈ ಹೆಸರು ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ ಎಲ್ಲಾ ಇಲಾಖೆ ಗಳಿಗೆ ಹೆಸರು ಬದಲಾಯಿಸಿಕೊಳ್ಳುವಂತೆ ಆದೇಶ ನೀಡಿದ್ದು, ಅಲಹಾಬಾದ್ ಹೈ ಕೋರ್ಟ್ ಮತ್ತು ಲಕ್ನೋ ಪೀಠದ ಅನುಮತಿಯನ್ನು ಕೋರಿದೆ.
ಈ ಬಗ್ಗೆ ದಲಿತ ನಾಯಕರನ್ನು ರಾಜಕೀಯಕರಣ ಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಎಸ್‌ಪಿ ಕಿಡಿ ಕಾರಿದೆ.
ಅಂದ ಹಾಗೆ ರಾಮಜೀ ಎನ್ನುವುದು ಅಂಬೇಡ್ಕರ್ ಅವರ ತಂದೆಯ ಹೆಸರು.