Advertisement

BPL; ಢಾಕಾ ಕೀಪರ್ ಜತೆ ಜಗಳವಾಡಿದ ಬಾಬರ್ ಅಜಂ; ವಿಡಿಯೋ ನೋಡಿ

10:58 AM Jan 28, 2024 | Team Udayavani |

ಸಿಲ್ಹೆಟ್: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) 2024 ರ ಪಂದ್ಯದಲ್ಲಿ ದುರ್ದಂತೋ ಢಾಕಾ ವಿರುದ್ಧದ ಪಂದ್ಯದಲ್ಲಿ ರಂಗ್‌ ಪುರ್ ರೈಡರ್ಸ್‌ ಬ್ಯಾಟರ್ ಬಾಬರ್ ಅಜಂ ಕೋಪಗೊಂಡ ಘಟನೆ ಶನಿವಾರದಂದು ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ.

Advertisement

ಢಾಕಾ ವಿಕೆಟ್‌ ಕೀಪರ್ ಇರ್ಫಾನ್ ಸುಕ್ಕೂರ್ ಅವರ ವಿರುದ್ಧದ ಬಾಬರ್ ಕೋಪಗೊಂಡಿದ್ದಾರೆ. ಢಾಕಾ ಬ್ಯಾಟರ್ ಮೊಹಮ್ಮದ್ ನಯಿಮ್ ಶೇಖ್ ಅವರು ಇರ್ಫಾನ್ ಅವರನ್ನು ಶಾಂತಗೊಳಿಸುತ್ತಿರುವುದು ಕಂಡುಬಂದಿತು.

ಬಾಬರ್ ಅಜಂ ಅವರು ಇರ್ಫಾನ್ ವಿರುದ್ಧ “ನಾನು ನಿಮ್ಮೊಂದಿಗೆ ಮಾತನಾಡುತ್ತಿಲ್ಲ” ಎಂದು ಪದೇ ಪದೇ ಹೇಳುವುದು ಕೇಳಿಸಿತು.

ಈ ಮಧ್ಯೆ ಬಾಬರ್ ಅವರು ತಮ್ಮ ಬ್ಯಾಟಿಂಗ್ ಜೊತೆಗಾರ ಮೊಹಮ್ಮದ್ ನಬಿ ಅವರೊಂದಿಗಿನ ಅಸಮಾಧಾನದ ಬಗ್ಗೆ ಮಾತನಾಡಿದರು. ನಂತರ, ಆನ್-ಫೀಲ್ಡ್ ಅಂಪೈರ್‌ ಗಳು ಮಧ್ಯಪ್ರವೇಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next