Advertisement

ಹುಡುಗರು ಹೊಣೆಗಾರಿಕೆ ಅರಿತು ಬಾಳಿ: ಶ್ರೀನಿವಾಸ ಪೂಜಾರಿ

08:00 AM Apr 12, 2018 | Team Udayavani |

ಕೋಟ: ಜೀವನದ ಎಳವೆಯಲ್ಲಿ ಹುಡುಗಾಟ ಸ್ವಾಭಾವಿಕ.  ಈ  ಕಾಲದಲ್ಲೂ ಹೊಣೆಗಾರಿಕೆ ಅರಿತು ಬಾಳಿದರೆ ಸಂಸಾರ, ಸಮಾಜಕ್ಕೆ ಒಳಿತಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದರು. 

Advertisement

ಅವರು ಎ.10ರಂದು ಕೋಟತಟ್ಟುವಿ ನಲ್ಲಿ ಜರಗಿದ ಕಲ್ಮಾಡಿ ಯುವಕ ಮಂಡಲದ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಬದುಕಿನಲ್ಲಿ ನಾವು ಸುಂದರ ನಾಳೆಗಳ ಕುರಿತು ಕನಸು ಕಂಡು  ಆ ಕನಸನ್ನು ನನಸುಗೈಯುವ ನಿಟ್ಟಿನಲ್ಲಿ  ಶ್ರಮಿಸಬೇಕು.  ಪದ್ಮ ಶ್ರೀ ಪ್ರಶಸ್ತಿ  ಪುರಸ್ಕೃತೆ ಸುಕ್ರಿ ಬೊಮ್ಮಗೌಡರಿಗೆ ಈ ಯುವಕ ಮಂಡಲದ ಪ್ರಶಸ್ತಿ ನೀಡುವ ಮೂಲಕ ತನ್ನ ಗೌರವ  ಹೆಚ್ಚಿಸಿಕೊಂಡಿದೆ ಎಂದರು. 

ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.  ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡರಿಗೆ ಕಲ್ಮಾಡಿ ಯುವಕ ಮಂಡಲದ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಸಮಾಜ ಸೇವಕ ಜೀವನ್‌ ಮಿತ್ರ ನಾಗರಾಜ್‌ ಪುತ್ರನ್‌, ಕುಲುಮೆ ವೃತ್ತಿಯ ಸತ್ಯಮ್ಮ ಆಚಾರ್‌, ಕ್ರೀಡಾ ಕ್ಷೇತ್ರದಲ್ಲಿ  ಸಾಧನೆಗೆ„ದ ರಂಜಿತ್‌ ಜಿ., ಭರತ್‌ ಕೋಟ ಅವರನ್ನು  ಸಮ್ಮಾನಿಸಲಾಯಿತು. 

ಯುವಕ ಮಂಡಲದ ಅಧ್ಯಕ್ಷ ಭರತ್‌ ಶ್ರೀಯಾನ್‌  ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ವರದರಾಜ್‌ ಶೆಟ್ಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್‌. ನಾಯಕ್‌ ಶುಭಾಶಂಸನೆಗೆ„ದರು. 

Advertisement

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ  ಎಚ್‌. ಪ್ರಮೋದ್‌ ಹಂದೆ, ಜಯಕರ್ನಾಟಕ ಸಂಸ್ಥೆಯ ರಾಜ್ಯ ಸಂಘಟನ  ಕಾರ್ಯದರ್ಶಿ ಸತೀಶ್‌ ಪೂಜಾರಿ ಸಾಲಿಗ್ರಾಮ, ಉದ್ಯಮಿ ಮಹೇಶ್‌ ಪೂಜಾರಿ ಕೋಟೇಶ್ವರ, ರೋಟರಿ ಕ್ಲಬ್‌ ಕೋಟ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ, ಭಗತ್‌ ಸಿಂಗ್‌ ಕ್ರಾಂತಿಕಾರಿ ಬಳಗದ ರಾಜೇಶ್‌ ಕೋಟೇಶ್ವರ, ರಾಜೇಂದ್ರ ಸಂಗಮ್‌, ಕೋಶಾಧಿ ಕಾರಿ ಉಮೇಶ್‌ ಪೂಜಾರಿ , ಸಲಹಾ ಸಮಿತಿಯ ಅಧ್ಯಕ್ಷ ಶೇವ ಧಿ ಸುರೇಶ್‌ ಗಾಣಿಗ, ಮನೋಹರ ಪೂಜಾರಿ ಉಪಸ್ಥಿತರಿದ್ದರು. 

ಯುವಕ ಮಂಡಲದ ಗೌರವಾಧ್ಯಕ್ಷ ಲಿಯಾಕಾತ್‌ ಅಲಿ ಪ್ರಾಸ್ತಾವನೆಗೈದು, ಕಾರ್ಯದರ್ಶಿ ಪ್ರಸಾದ್‌ ಬಿಲ್ಲವ ಸ್ವಾಗತಿಸಿ, ಚಿತ್ರಪಾಡಿ ಹಿ.ಪ್ರಾ.ಶಾಲೆ ದೆ„ಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿ, ಶಮಂತ್‌ ಕುಮಾರ್‌ ಕೆ.ಎಸ್‌. ವಂದಿಸಿದರು. ಕಲ್ಮಾಡಿ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಮೂಲ್ಕಿ ಯುವವಾಹಿನಿ ಕಲಾವಿದರಿಂದ ತುಳುನಾಡ ವೈಭವ ಜರಗಿತು.

ಯುವಕರು ಕಣ್ಣುಗಳಿದ್ದಂತೆ
ಪ್ರತಿಯೊಂದು ಕುಟುಂಬಕ್ಕೂ ಯುವಕರು ಕಣ್ಣುಗಳಿದ್ದಂತೆ. ಅವರು ಸಂಸಾರದ ಜವಾಬ್ದಾರಿ ಅರಿತು ಬಾಳಿ ಉತ್ತಮ ಸ್ಥಾನಮಾನದಲ್ಲಿ ಗುರುತಿಸಿಕೊಳ್ಳಬೇಕು. ಉತ್ಸಾಹಿ ತರುಣರಿಂದ ಕೂಡಿರುವ ಕಲ್ಮಾಡಿ ಯುವಕ ಮಂಡಲ ಈ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಲಿ ಎಂದು  ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next