ವಿಪಕ್ಷಗಳ ನಿರ್ಧಾರವನ್ನು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್(ಎನ್‌ಬಿಡಿಎ) ಖಂಡಿಸಿದ ಬೆನ್ನಲ್ಲೇ ವಿಪಕ್ಷಗಳ ಒಕ್ಕೂಟದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ವಿಪಕ್ಷಗಳು ಬಹಿಷ್ಕರಿಸಿರುವ ಪತ್ರಕರ್ತರ ಪಟ್ಟಿಯು ಒಂದು ರೀತಿಯಲ್ಲಿ “ಟಾರ್ಗೆಟ್ ಲಿಸ್ಟ್’ ಆಗಿದೆ. ನಿಮ್ಮ ವಿರುದ್ಧ ನಾವು ಕ್ರಿಮಿ ನಲ್ ಕೇಸು ಹಾಕುತ್ತೇವೆ, ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಬೆದರಿಸಿ ದಂತಿದೆ. ಒಂದು ವೇಳೆ, ಈ ಪಕ್ಷಗಳ ಕಾರ್ಯಕರ್ತರು ಸೇರಿ ಯಾರಾದರೂ ಈ ಪತ್ರಕ ರ್ತರ ಮೇಲೆ ದಾಳಿ ಮಾಡಿದರೆ ಅದಕ್ಕೆ ಯಾರು ಹೊಣೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
Advertisement
ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ವಿಪಕ್ಷಗಳ ನಿರ್ಧಾರವು “ಮಾಧ್ಯಮದ ವಿರುದ್ಧದ ನಿಂದನೆ’, ಮುಕ್ತ ಪತ್ರಿಕೋದ್ಯಮದ ವಿರುದ್ಧದ ದ್ವೇಷವಾಗಿದೆ ಎಂದಿದ್ದಾರೆ.“ಚುನಾವಣಾ ಆಯೋಗದಿಂದ ನ್ಯಾಯಾಲಯದವರೆಗೆ ವಿಪಕ್ಷಗಳ ಒಕ್ಕೂಟವು ದೂಷಿಸದೇ ಇರುವಂಥ ಯಾವೊಂದು ಸಂಸ್ಥೆಯೂ ಭಾರತದಲ್ಲಿಲ್ಲ. ಮಾಧ್ಯಮ ಅಥವಾ ಬೇರೆ ಯಾವುದೇ ಸಂಸ್ಥೆಯನ್ನು ಬಹಿಷ್ಕರಿಸುವುದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜ ನವಾಗುವುದಿಲ್ಲ. ಕಾಂಗ್ರೆಸ್ ತನ್ನ ಒಳಿತಿಗಾಗಿ ಯಾರನ್ನಾದರೂ ಬಹಿಷ್ಕರಿಸಬೇಕೆಂದು ಬಯಸಿದರೆ, ರಾಹುಲ್ ಗಾಂಧಿಯವರನ್ನು ಬಹಿಷ್ಕರಿಸಬೇಕು. ನಿಮ್ಮ ನಾಯಕನಿಗೆ ಯಾವುದೇ ಸಾಮರ್ಥ್ಯವಿಲ್ಲ. ಅವರನ್ನೇ ಮೊದಲು ನೀವು ಬಹಿಷ್ಕರಿಸಿ’ ಎಂದೂ ಪಾತ್ರಾ ವ್ಯಂಗ್ಯವಾಡಿದ್ದಾರೆ.
Related Articles
ವಿಪಕ್ಷಗಳ ಒಕ್ಕೂಟದಲ್ಲಿನ ಪಕ್ಷಗಳೆಲ್ಲವೂ ಹಿಂದೂ ಗಳು ಮತ್ತು ಸನಾತನ ಧರ್ಮದ ವಿರೋಧಿಗಳು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಹಳೇ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲ ವ್ಯಕ್ತಪಡಿಸುವ ಪಕ್ಷಗಳು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ.
Advertisement
“ಎನ್‌ಡಿಟಿವಿ’ಗೆ ನೀಡಿದ ಸಂದರ್ಶನ ದಲ್ಲಿ ಮಾತನಾಡಿದ ಅವರು, “ಡಿಎಂಕೆ ಹಿಂದಿನಿಂದಲೂ ಸನಾತನ ಧರ್ಮ ವಿರೋಧಿ ನಿಲುವು ಹೊಂದಿದೆ. ನಾನು ಅದನ್ನು ಖುದ್ದಾಗಿ ಕಂಡಿದ್ದೇನೆ. ದೇಶದ ಇತರ ಭಾಗದ ಜನರಿಗೆ ತಮಿಳು ಭಾಷೆ ಅರ್ಥವಾಗದೇ ಇರುವುದರಿಂದ ಅವರು ಹೇಳಿದ ವಿಚಾರಗಳು ಅರ್ಥವಾಗುತ್ತಿರಲಿಲ್ಲ’ ಎಂದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಡಿಎಂಕೆ ನಾಯಕರು ಹೊಂದಿರುವ ಧೋರಣೆ ಸುಲಭವಾಗಿ ಜನರಿಗೆ ಗೊತ್ತಾಗುತ್ತಿದೆ. 70 ವರ್ಷಗಳಿಂದ ಆ ಪಕ್ಷ ಇದೇ ನಿಲುವು ಅನುಸರಿಸು ತ್ತಿದೆ ಎಂದಿದ್ದಾರೆ. ಜತೆಗೆ, ಐ.ಎನ್.ಡಿ.ಐ.ಎ. ನಾಯಕರು ಯಾರೂ “ಸನಾತನ ಧರ್ಮ’ ಕುರಿತ ಉದಯನಿಧಿ ಹೇಳಿಕೆಯನ್ನು ಖಂಡಿಸಲೇ ಇಲ್ಲ ಎಂದು ವಿತ್ತ ಸಚಿವೆ ದೂರಿದ್ದಾರೆ. ಉದಯನಿಧಿ ಹೇಳಿಕೆ ಸಂವಿಧಾನದ ಅವಹೇಳನ. ಸಾಂವಿಧಾನಿಕವಾಗಿ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರ ಉಲ್ಲಂಘನೆಯಾಗಿದೆ ಎಂದಿದ್ದಾರೆ ನಿರ್ಮಲಾ.
ಮಹಿಳೆಯರ ಶಕ್ತಿಗೆ ಸಾಕ್ಷಿ: ಇದೇ ವೇಳೆ, ಜಿ20 ಸಮ್ಮೇಳನ, ಚಂದ್ರಯಾನ-3ರ ಯಶಸ್ಸಿನಲ್ಲಿ ಮಹಿ ಳೆಯರ ಪಾತ್ರವೇ ಹೆಚ್ಚಿನದ್ದಾಗಿದೆ ಎಂದು ಹೇಳಿ ದ್ದಾರೆ. ವಿವಿಧ ಕೆಲಸಗಳ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗವಹಿಸದೇ ಇರುವುದು ಸಮಸ್ಯೆಯೇ ಅಲ್ಲ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಭಾಗೀದಾರಿಕೆ ಹೊಂದ ಬೇಕು. ನಮ್ಮ ಸಚಿವಾಲಯದ ವತಿಯಿಂದ ಜಿ20ರ ತಂಡ ಮುನ್ನಡೆಸಿದ್ದು ಮಹಿಳೆಯೇ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದರು.