Advertisement
ಮಸ್ಕಿ ಉಪಚುನಾವಣೆ ಘೋಷಣೆ ಹೊತ್ತಲ್ಲೇ ಚುರುಕಾದ ನೀರವಾರಿ ಹೋರಾಟಗಳು ಸರಕಾರಕ್ಕೆ ಸವಾಲೊಡ್ಡಿವೆ. ರೈತರ ಚಳವಳಿಯ ಬಲ ಆಕಾಂಕ್ಷಿಗಳ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಉಪಚುನಾವಣೆ ನೆಪದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದ ಹಾಲಿ-ಮಾಜಿ ಶಾಸಕರು, ಮಂತ್ರಿಗಳಿಗೂ ಇದರ ಬಿಸಿ ಈಗಾಗಲೇ ತಟ್ಟಿದ್ದಾಗಿದೆ. ಆದರೆ ಮಸ್ಕಿ ಉಪಚುನಾವಣೆಗೆಮುನ್ನವೇ ಗ್ರಾಪಂಗಳ ಚುನಾವಣೆಘೋಷಣೆಯಾಗಿದ್ದು, ಈ ಚುನಾವಣೆಗಳನ್ನೂ ಜನರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
Related Articles
Advertisement
ಹೀಗಾಗಿ ಸದ್ಯ ಹೋರಾಟದ ಬಿಸಿ ಎಂಎಲ್‌ಎ ಚುನಾವಣೆ ಆಕಾಂಕ್ಷಿಗಳಿಗೆ ಮಾತ್ರವಲ್ಲ; ಗ್ರಾಪಂ ಚುನಾವಣೆ ಉಮೇದುವಾರರಿಗೂ ನುಂಗಲಾರದತುತ್ತಾಗಿದೆ. ಸದ್ಯ ಜಿಲ್ಲಾಡಳಿತಕ್ಕೆ ಚುನಾವಣೆಬಹಿಷ್ಕಾರದ ಅಸ್ತ್ರ ಸವಾಲಾಗಿದ್ದು, ಜಿಲ್ಲಾಡಳಿತಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ ಕಾದು ನೋಡಬೇಕಿದೆ.
ರೊಟ್ಟಿ, ದವಸ-ಧಾನ್ಯ : ಕಳೆದ 17 ದಿನಗಳಿಂದ ನಡೆದಿರುವ ಹೋರಾಟಕ್ಕೆ ಸ್ವತಃ ಯೋಜನೆ ಬಾಧಿ ತ ಹಳ್ಳಿಗರೇ ಹೋರಾಟ ನಿರತರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆಯಾ ಗ್ರಾಮಗಳಿಂದಲೇ ರೊಟ್ಟಿ, ಅಕ್ಕಿ ಸೇರಿ ಇತರೆ ದವಸ ಧಾನ್ಯಗಳನ್ನು ತಂದು ಧರಣಿ ಸ್ಥಳದಲ್ಲಿಯೇ ಅಡುಗೆ ಮಾಡಿ ಬಡಿಸಲಾಗುತ್ತಿದೆ. ಈ ರೀತಿಯ ಹೋರಾಟದ ಕಿಚ್ಚು ದಿನೆ-ದಿನವೂ ಹೆಚ್ಚಾಗುತ್ತಿದ್ದು, ರೈತರ ಸಂಖ್ಯೆಯೂ ಹೆಚ್ಚುತ್ತಲಿದೆ.
ಏನಿದು 5-ಎ ಕಾಲುವೆ?: ನಾರಾಯಣಪುರ ಜಲಾಶಯದಿಂದ ಹೆಚ್ಚುವರಿಯಾಗಿ ಹರಿದು ಪೋಲಾಗುವ ನೀರನ್ನು ಬಳಸಿಕೊಂಡು 5-ಎ ಶಾಖಾ ಕಾಲುವೆ ನಿರ್ಮಾಣದ ಮೂಲಕ ರಾಯಚೂರು, ಕೊಪ್ಪಳ ಜಿಲ್ಲೆಯ 100ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶ. ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯಿಂದ 5ಎ ಶಾಖಾ ಕಾಲುವೆಗಳನ್ನು ನಿರ್ಮಿಸಿಗಳ ಮೂಲಕ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ 7 ತಾಲೂಕುಗಳ 107 ಹಳ್ಳಿಗಳ 72,000 ಹೆಕ್ಟೇರ್ (1,77,912 ಎಕರೆ) ಜಮೀನುಗಳಿಗೆ ನೀರು ಒದಗಿಸುವ ಯೋಜನೆಯಾಗಿದೆ. ಇದಕ್ಕಾಗಿ 2,755 ಕೋಟಿ ರೂ. ವ್ಯಯವಾಗಲಿದೆ ಎಂದು ಸರಕಾರ ಅಂದಾಜಿಸಿದೆ. ಇದರ ಪ್ರಾಥಮಿಕ ಸರ್ವೇ ಕಾರ್ಯವೂ ಆರಂಭವಾಗಿದೆ. ಆದರೆ ಈ ಯೋಜನೆ ಅನುಷ್ಠಾನದ ಕುರಿತು ಸರಕಾರದಿಂದ ಅಧಿಕೃತ ಲಿಖೀತ ಆದೇಶ ಹೊರ ಬೀಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
–ಮಲ್ಲಿಕಾರ್ಜುನ ಚಿಲ್ಕರಾಗಿ