Advertisement

ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿದ ಎಂಟರ ಹರೆಯದ ಬಾಲಕ‌ ದಾರುಣ ಬಲಿ!

08:32 AM Mar 11, 2021 | Team Udayavani |

ಬೆಳ್ತಂಗಡಿ: ಉಜಿರೆ ಅತ್ತಾಜೆ‌ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ‌ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (8) ತನ್ನ ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆಯ ವೇಳೆ ಮೂಡುಬಿದಿರೆಯಲ್ಲಿ ನಡೆದಿದೆ.

Advertisement

ಉಜಿರೆ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ‌ ಮುರ್ಷಿದ್ ಮೊದಲನೆಯವನಾಗಿದ್ದ. ತಂದೆ ಮೂಡುಬಿದ್ರೆಯ ಕಲ್ಲಿನ‌ಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ.

ತಂದೆಯೇ ಚಾಲಕನಾಗಿ ಲಾರಿ ಚಲಾಯಿಸಿದ ವೇಳೆ ಬಾಲಕ ಆಕಸ್ಮಿಕವಾಗಿ ಅದರ ಚಕ್ರದಡಿ ಸಿಲುಕಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಬೆಳ್ತಂಗಡಿ: ಸಂತೆ ಮಾರುಕಟ್ಟೆ ನೂತನ ಕಟ್ಟಡ ಹರಾಜು : ಸೋಮವಾರ ಸಂತೆ ಯಥಾ ಸ್ಥಳಕ್ಕೆ?

ಪ್ರಸ್ತುತ ಉಜಿರೆಯ ಕೊಟ್ರೋಡಿ ಕಾಂಪೌಂಡ್ ನ ರೈಫಾ ಗಾರ್ಡನ್ ಫ್ಲಾಟ್‌ನಲ್ಲಿ ನೆಲೆಸಿದ್ದ ದಂಪತಿಗೆ ನಾಲ್ಕು ವರ್ಷ ಪ್ರಾಯದ ಸಫಾ ಎಂಬ ಪುತ್ರಿ ಇದ್ದಾರೆ.

Advertisement

ಘಟನೆ ನಡೆದ ತಕ್ಷಣ ಮೂಡುಬಿದಿರೆ ಆಸ್ಪತ್ರೆಗೆ ಬಾಲಕನ್ನು ಸಾಗಿಸಲಾಗಿತ್ತಾದರೂ ಅದಾಗಲೇ ಮೃತಪಟ್ಟಿದ್ದ. ಅಲ್ಲೇ ಮರಣೋತ್ತರ ಪರೀಕ್ಷೆ ಕೈಗೊಂಡು ರಾತ್ರಿ 12.30ರ ವೇಳೆಗೆ ಉಜಿರೆ ಮಸ್ಜಿದ್ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಇದನ್ನೂ ಓದಿ:ಕುಂದಾಪುರ ಸೇರಿ ರಾಜ್ಯದ ಐದು ಕಡೆ ಎಆರ್‌ಟಿಒ ಕಚೇರಿ ಆರಂಭಿಸಲು ಪ್ರಸ್ತಾವ ಸ್ವೀಕೃತಿ : ಸವದಿ

ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next