Advertisement

ಒತ್ತಾಯಕ್ಕೆ ಗಿಣ್ಣು ಸೇವಿಸಿ ಬಾಲಕ ಸಾವು

03:45 AM Jul 13, 2017 | Team Udayavani |

ಲಂಡನ್‌: ಅಲರ್ಜಿಗಳು ಕೆಲವೊಮ್ಮೆ ತೀವ್ರ ಸಮಸ್ಯೆ ತಂದೊಡ್ಡುವುದಿದೆ. ಆದರೆ ಬ್ರಿಟನ್‌ನಲ್ಲಿ ನಡೆದ ಪ್ರಕರಣವೊಂದರಲ್ಲಿ ಭಾರತೀಯ ಮೂಲದ ಯುವಕನಿಗೆ ಒತ್ತಾಯ ಪೂರ್ವಕವಾಗಿ ಗಿಣ್ಣು (ಚೀಸ್‌) ತಿನ್ನಿಸಿದ ಪರಿಣಾಮ ಅಲರ್ಜಿಯಿಂದ ಮೃತಪಟ್ಟಿದ್ದಾನೆ. 13 ವರ್ಷದ ಕರಣ್‌ಬೀರ್‌ ಚೀಮಾಗೆ ಕಳೆದ ತಿಂಗಳು ಸಹಪಾಠಿ ಶಾಲೆಯಲ್ಲಿ ಗಿಣ್ಣು ತಿನ್ನಿಸಿದ್ದ. ತಕ್ಷಣ ಅಸ್ವಸ್ಥಗೊಂಡ ಆತನಿಗೆ ಶಾಲೆಯಲ್ಲೇ ನೀಡಿದ ಪ್ರಥಮ ಚಿಕಿತ್ಸೆ ವಿಫ‌ಲವಾದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಭಾನುವಾರ ಬಾಲಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next