ಛತ್ತೀಸ್‌ಗಢ : ಜಶ್‌ಪುರದಲ್ಲಿ ಹಾವೊಂದು ಕಚ್ಚಿತೆಂದು ಬಾಲಕನೋರ್ವ ಹಾವಿಗೇ ತಿರುಗಿ ಕಚ್ಚಿದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಲ್ಲಿ 12 ವರ್ಷದ ಬಾಲಕನಿಗೆ ನಾಗರ ಹಾವೊಂದು ಕಚ್ಚಿದೆ. ಇದರಿಂದ ಕೋಪಗೊಂಡ ಬಾಲಕ ಕಚ್ಚಿದ ಹಾವಿಗೆ ತಿರುಗಿ ಕಚ್ಚಿದ್ದಾನೆ. ವಿಷಯ ತಿಳಿದ ಮನೆಯವರು ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್ ಬಾಲಕ ಆರೋಗ್ಯವಂತನಾಗಿದ್ದಾನೆ.
ಆಗಿದ್ದೇನು ? : ಗಾರ್ಡನ್ ಡೆವಲಪ್ ಮೆಂಟ್ ಬ್ಲಾಕ್ ನ ಪಂಡರಪತ್ ನಲ್ಲಿ ಘಟನೆ ನಡೆದಿದ್ದು ಇಲ್ಲಿ ದೀಪಕ್ ಅನ್ನೋ ಯುವಕ ತನ್ನ ಸಹೋದರಿಯ ಮನೆಗೆ ಹೋಗಿದ್ದ. ಅಲ್ಲಿ ತನ್ನ ಸಹೋದರಿ ನೀರು ತರಲು ಹೋದಾಗ ದೀಪಕ್ ಮನೆಯ ಹೊರಗೆ ಆಟವಾಡುತ್ತಿದ್ದ. ಈ ವೇಳೆ ಅಲ್ಲೇ ಪೊದೆಯೊಂದರಲ್ಲಿ ಇದ್ದ ಹಾವೊಂದು ದೀಪಕ್ ಕೈಗೆ ಕಚ್ಚಿದೆ. ಇದರಿಂದ ಕೋಪಗೊಂಡ ದೀಪಕ್ ಹಾವನ್ನು ಕೈಯಿಂದ ಹಿಡಿದು ಹಲ್ಲಿನಿಂದ ಕಚ್ಚಿ ಬಿಸಾಡಿದ್ದಾನೆ.
ಬಳಿಕ ದೀಪಕ್ ಮನೆಗೆ ಬಂದು ತಂಗಿಗೆ ವಿಷಯ ತಿಳಿಸಿದ್ದಾನೆ. ಇದರಿಂದ ಭಯಗೊಂಡ ಸಹೋದರಿ ಕೂಡಲೇ ಬಾಲಕನನ್ನು ಕರೆದುಕೊಂಡು ಆಸ್ಪತ್ರೆಗೆ ಓಡಿ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಏನೂ ತೊಂದರೆ ಇಲ್ಲ ಬಾಲಕ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ನಿಟ್ಟುಸಿರು ಬಿಟ್ಟು ಮನೆಗೆ ಬಂದಾಗ ಗೊತ್ತಾಗಿದ್ದು ಬಾಲಕ ಕಚ್ಚಿ ಬಿಸಾಕಿದ ಹಾವು ಸಾವನ್ನಪ್ಪಿದೆ ಎಂದು.
ಇದನ್ನೂ ಓದಿ : ಬಾಗಿಲು ಹಾಕಿದ್ದ ಮನೆಯೊಳಗೆ ಒಂದೇ ಕುಟುಂಬದ ನಾಲ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಮನುಷ್ಯರಿಗೆ ವಿಷದ ಹಾವು ಕಚ್ಚಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಮೂಢನಂಬಿಕೆ ಜಶ್ಪುರ್ ಜಿಲ್ಲೆಯ ಜನರಲ್ಲಿದೆ ಅದೇ ಮೂಢನಂಬಿಕೆಯಿಂದ ಬಾಲಕ ಹಾವಿಗೆ ಕಚ್ಚಿದ್ದಾನೆ. ಆದರೆ ಬಾಲಕನ ಅದೃಷ್ಟ ಚೆನ್ನಾಗಿತ್ತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಬಾಲಕ ಬದುಕುಳಿದ ಆದರೆ ದುರಾದೃಷ್ಟವಶಾತ್ ಹಾವು ಮಾತ್ರ ಬಾಲಕ ಕಚ್ಚಿದ ಏಟಿಗೆ ಸಾವನ್ನಪಿದೆ.