Advertisement

ಬಾಕ್ಸಿಂಗ್‌ ರ್‍ಯಾಂಕಿಂಗ್‌: ಮೇರಿ ಕೋಮ್‌ ನಂ.1

12:30 AM Jan 11, 2019 | |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಅಸೋಸಿಯೇಶನ್‌ (ಐಬಾ) ಪ್ರಕಟಿಸಿರುವ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌ 48 ಕೆಜಿ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

Advertisement

ವರ್ಷಾಂತ್ಯದ ವಿಶ್ವ ವನಿತಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್‌ ಅಮೋಘ ಸಾಧನೆಗೈಯುವ ಮೂಲಕ ಈ ಎತ್ತರಕ್ಕೇರಿದರು. ಈ ಕೂಟದಲ್ಲಿ ಮೇರಿ 6ನೇ ಸಲ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದರು. “ಮೆಗ್ನಿಫಿಸೆಂಟ್‌ ಮೇರಿ’ ಪಾಲಿಗೆ 2018ರ ಋತು ಸ್ಮರಣೀಯವಾಗಿತ್ತು. ಕಾಮನ್ವೆಲ್ತ್‌ ಗೇಮ್ಸ್‌, ಪೋಲೆಂಡ್‌ ಟೂರ್ನಿಯಲ್ಲಿ ಚಿನ್ನದ ಪದಕ ಹಾಗೂ ಬಲ್ಗೇರಿಯದಲ್ಲಿ ನಡೆದ ಕೂಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

57 ಕೆಜಿ ವಿಭಾಗದ ರ್‍ಯಾಂಕಿಂಗ್‌ನಲ್ಲಿ  ಮಾಜಿ ವಿಶ್ವ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್‌ ದ್ವೀತಿಯ ಸ್ಥಾನ ಗಳಿಸಿದ್ದಾರೆ. 64 ಕೆಜಿ ವಿಭಾಗದಲ್ಲಿ ವಿಶ್ವ ಕಂಚಿನ ಪದಕ ವಿಜೇತೆ ಸಿಮ್ರನ್‌ಜಿàತ್‌ ಕೌರ್‌ 4ನೇ ಸ್ಥಾನದಲ್ಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್‌ ಎಲ್‌. ಸರಿತಾ ದೇವಿ 5ನೇ ಸ್ಥಾನ ಪಡೆದಿದ್ದಾರೆ.

69 ಕೆಜಿ ವಿಭಾಗದ ರ್‍ಯಾಂಕಿಂಗ್‌ನಲ್ಲಿ ಇಂಡಿಯನ್‌ ಓಪನ್‌ ಹಾಗೂ ವಿಶ್ವ ಕಂಚಿನ ಪದಕ ಜಯಿಸಿದ್ದ ಲವಿÉàನಾ 5ನೇ ಸ್ಥಾನ ಲಭಿಸಿದೆ. 51 ಕೆಜಿ ವಿಭಾಗದಲ್ಲಿ ಪಿಂಕಿ ಜಂಗ್ರಾ 8ನೇ ಸ್ಥಾನ, ಏಶ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತೆ ಮನೀಷಾ ಮೌನ್‌ 8ನೇ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next