ಹೊಸದಿಲ್ಲಿ: ರಶ್ಯದ ಕ್ಯಾಸ್ಪಿಯಾಸ್ಕ್ ನಲ್ಲಿ ಸಾಗಿದ ಮಗೊಮೆದ್ ಸಲಮ್ ಉಮಖಾನೊವ್ ಮೆಮೊರಿಯಲ್ ಬಾಕ್ಸಿಂಗ್ ಕೂಟದಲ್ಲಿ ಭಾರತದ ನೀರಜ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಅವರು ಚಿನ್ನದ ಪದಕ ಗೆದ್ದುಕೊಂಡರೆ ಗೌರವ್ ಸೋಲಂಕಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾರತೀಯ ಬಾಕ್ಸರ್‌ಗಳು ಈ ಕೂಟದಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಸಹಿತ ಒಟ್ಟು ಆರು ಪದಕ ಗೆದ್ದುಕೊಡಿದ್ದಾರೆ. ಹಾಲಿ ಏಶ್ಯನ್ ಚಾಂಪಿಯನ್‌ಶಿಪ್ ಚಿನ್ನ ವಿಜೇತೆ ಪೂಜಾರ ರಾಣಿ ಅವರು ಸೆಮಿಫೈನಲ್ನಲ್ಲಿ 3-2 ಅಂತರದಿಂದ ಸೋತು ಕಂಚಿಗೆ ತೃಪ್ತಿಪಟ್ಟರು.
ಇಂಡಿಯಾ ಓಪನ್‌ನ ಫೈನಲ್ನಲ್ಲಿ ಅಸುಂತ ಕಾನ್‌ಫೋರಾ ಕೈಯಲ್ಲಿ ಸೋತಿದ್ದ ಲೊವ್ಲಿನಾ ಈ ಬಾರಿ ಉತ್ತಮ ಹೋರಾಟ ಸಂಘಟಿಸಲು ಸಿದ್ಧರಾಗಿ ಬಂದಿದ್ದರು. ಅಸ್ಸಾಂನ ಬಾಕ್ಸರ್ ಲೊವ್ಲಿ ನಾ ಇಟಲಿಯ ಕಾನ್‌ಫೋರಾ ಅವರನ್ನು ಸತತ ಪಂಚ್‌ಗಳಿಂದ ಸದೆಬಡಿದು 3-2 ಅಂತರದಿಂದ ಗೆಲುವು ಸಾಧಿಸಿದರು
ನೀರಜ್‌ಗೆ ಚಿನ್ನ
ಸೆಮಿಫೈಲ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಅಲೆಸ್ಸಿಯಾ ಮೆಸಿ ಯಾನೊ ಅವರನ್ನು ಕೆಡಹಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದ ನೀರಜ್ ಫೈನಲ್ನಲ್ಲೂ ಅದ್ಭುತ ಕಾದಾಟ ನಡೆಸಿ ರಶ್ಯದ ಮಲಿಕಾ ಶಖೀದೊವಾ ಅವರನ್ನು ಮಣಿಸಿ ಚಿನ್ನ ಗೆದ್ದರು.