Advertisement

ಕಾಮನ್‌ವೆಲ್ತ್‌ ಗೇಮ್ಸ್‌: ಭಾರತದ 12 ಬಾಕ್ಸರ್‌ಗಳ ತಂಡ

06:55 AM Mar 08, 2018 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳ ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ಭಾರತದ ಬಾಕ್ಸಿಂಗ್‌ ತಂಡವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.  

Advertisement

ಮಹಿಳೆಯರ ವಿಭಾಗವನ್ನು ಒಲಿಂಪಿಕ್ಸ್‌ ಪದಕ ವಿಜೇತೆ ಮೇರಿ ಕೋಮ್‌ ಮತ್ತು ಪುರುಷರ ವಿಭಾಗವನ್ನು ತಾರಾ ಬಾಕ್ಸರ್‌ ಮನೋಜ್‌ ಕುಮಾರ್‌ ಮುನ್ನಡೆಸಲಿದ್ದಾರೆ. ಭಾರತ ತಂಡದಲ್ಲಿ 4 ಮಹಿಳೆಯರು, 8 ಪುರುಷರು ಸೇರಿದಂತೆ ಒಟ್ಟು 12 ಬಾಕ್ಸರ್‌ಗಳು ಸ್ಥಾನ ಪಡೆದಿದ್ದಾರೆ. 

ಅಚ್ಚರಿಯೆಂದರೆ, ತಾರಾ ಬಾಕ್ಸರ್‌ ಆಗಿರುವ ಶಿವ ಥಾಪ ಸ್ಥಾನ ಪಡೆಯುವಲ್ಲಿ ವಿಫ‌ಲರಾದದ್ದು!  60 ಕೆಜಿ ವಿಭಾಗದಲ್ಲಿ ಈ ಹಿಂದೆ 2 ಬಾರಿ ಶಿವ ಥಾಪ ವಿರುದ್ಧ ಮನೀಶ್‌ ಕೌಶಿಕ್‌ ಗೆಲುವು ಸಾಧಿಸಿದ್ದರು. ಹೀಗಾಗಿ ಶಿವ ಥಾಪ ಅವರನ್ನು ಹಿಂದಿಕ್ಕಿ ಕೌಶಿಕ್‌ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next