ಮೆಲ್ಬರ್ನ್: ಪ್ರವಾಸಿ ಪಾಕಿ ಸ್ಥಾನ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡವು 79 ರನ್ನುಗಳಿಂದ ಜಯಭೇರಿ ಬಾರಿಸಿದೆ.
ಈ ಗೆಲುವಿನಿಂದ ಆಸ್ಟ್ರೇಲಿಯ ತಂಡವು ಮೂರು ಪಂದ್ಯಗಳ ಈ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು. ಸರ ಣಿಯ ಅಂತಿಮ ಪಂದ್ಯ ಜ. 3 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯವನ್ಯುನ ಆಸ್ಟ್ರೇಲಿಯ 360 ರನ್ನುಗಳಿಂದ ಜಯಿಸಿತ್ತು.
ಗೆಲ್ಲಲು 317 ರನ್ ಗಳಿಸುವ ಸವಾಲು ಪಡೆದ ಪಾಕಿಸ್ಥಾನ ತಂಡವು ಪಂದ್ಯದ 4ನೇ ದಿನವಾದ ಶುಕ್ರವಾರ 237 ರನ್ ಗಳಿಸಿ ಆಲೌಟಾಯಿತು. ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸಿದ ಆಟಗಾ ರರು ಆಗಾಗ್ಗೆ ವಿಕೆಟ್ ಕಳೆದುಕೊಳ್ಳುತ್ತ ಶರಣಾದರು. ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ತಲಾ ಐದರಂತೆ ಒಟ್ಟು 10 ವಿಕೆಟ್ ಉರುಳಿಸಿದ ಕಮಿನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಮೊದಲು ಆರು ವಿಕೆಟಿಗೆ 187 ರನ್ನುಗಳಿಂದ ದಿನದಾಟ ಅರಂಭಿಸಿದ ಆಸ್ಟ್ರೇಲಿಯ ತಂಡವು 262 ರನ್ ಗಳಿಸಿ ಆಲೌಟಾಯಿತು. ಮಿಚೆಲ್ ಮಾರ್ಷ್ 96 ರನ್ ಗಳಿಸಿದ್ದರೆ ಅಲೆಕ್ಸ್ ಕ್ಯಾರಿ 53 ರನ್ ಹೊಡೆದರು. ಶಾಹೀನ್ ಶಾ ಅಫ್ರಿದಿ ಮತ್ತು ಮಿರ್ ಹಂಝ ತಲಾ 4 ವಿಕೆಟ್ ಉರುಳಿಸಿದರು.
ಗೆಲ್ಲಲು 317 ರನ್ ಗಳಿಸುವ ಗುರಿ ಪಡೆದ ಪಾಕಿಸ್ಥಾನ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ ಶಾನ್ ಮಸೂದ್, ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಮತ್ತು ಆಘಾ ಸಲ್ಮಾನ್ ಅವರು ಉತ್ತಮವಾಗಿ ಆಡಿ ತಂಡಕ್ಕೆ ಗೆಲುವು ಒದಗಿಸಲು ಪ್ರಯತ್ನಿಸಿದರು. ಆದರೆ ಸ್ಟಾರ್ಕ್ ಮತ್ತು ಕಮಿನ್ಸ್ ಇದಕ್ಕೆ ಅವಕಾಶ ನೀಡಲಿಲ್ಲ. ಅವರು ಬಿಗು ದಾಳಿ ಸಂಘಟಿಸಿ ಆಸ್ಟ್ರೇಲಿಯ ಮೇಲುಗೈ ಸಾಧಿಸುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 318 ಮತ್ತು 262 (ಮಿಚೆಲ್ ಮಾರ್ಷ್ 96, ಅಲೆಕ್ಸ್ ಕ್ಯಾರಿ 53, ಸ್ಟೀವನ್ ಸ್ಮಿತ್ 50, ಅಫ್ರಿದಿ 76ಕ್ಕೆ 4, ಹಂಝ 32ಕ್ಕೆ 4); ಪಾಕಿಸ್ಥಾನ 264 ಮತ್ತು 237 (ಶಾನ್ ಮಸೂದ್ 60, ಬಾಬರ್ ಅಜಂ 41, ರಿಜ್ವಾನ್ 35, ಸಲ್ಮಾನ್ 50, ಮಿಚೆಲ್ ಸ್ಟಾರ್ಕ್55ಕ್ಕೆ 4, ಕಮಿನ್ಸ್49ಕ್ಕೆ 5).