Advertisement

ಏಶ್ಯಾಡ್‌ನಿಂದ ಹೊರಗುಳಿಯಲು ಬಾಕ್ಸರ್‌ ಮೇರಿ ಕೋಮ್‌ ನಿರ್ಧಾರ

07:00 AM Apr 12, 2018 | Team Udayavani |

ಹೊಸದಿಲ್ಲಿ: ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕವೊಂದನ್ನು ಖಚಿತಪಡಿಸಿರುವ ಭಾರತದ ತಾರಾ ಬಾಕ್ಸರ್‌ ಎಂ.ಸಿ. ಮೇರಿ ಕೋಮ್‌ ಮುಂಬರುವ ಇಂಡೋನೇಶ್ಯ ಏಶ್ಯಾಡ್‌ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಹೆಚ್ಚಿ ದೈಹಿಕ ಕ್ಷಮತೆ ಹೊಂದಬೇಕೆಂಬ ಕಾರಣದಿಂದ ಮೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.

Advertisement

“ಹೌದು, ಏಶ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳದಿರುವುದು ನನ್ನ ಸದ್ಯದ ನಿರ್ಧಾರ. ಆದರೆ ಇದಕ್ಕಿನ್ನೂ ಕಾಲಾವಕಾಶವಿದೆ. ಮುಂದೆ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿದ್ದೇನೆ. ವಿಶ್ವಕಪ್‌ ಚಾಂಪಿಯನ್‌ಶಿಪ್‌ಗಾಗಿ ಪರಿಪೂರ್ಣ ಫಿಟ್‌ನೆಸ್‌ ಹೊಂದಬೇಕೆಂಬುದು ನನ್ನ ಗುರಿ. ಹೀಗಾಗಿ ಏಶ್ಯನ್‌ ಗೇಮ್ಸ್‌ನಿಂದ ದೂರ ಉಳಿದು ಸಣ್ಣದೊಂದು ಬ್ರೇಕ್‌ ಪಡೆಯುವ ಯೋಜನೆಯಲ್ಲಿದ್ದೇನೆ’ ಎಂದು ಮೇರಿ ಕೋಮ್‌ ಹೇಳಿದ್ದಾರೆ.  ಇಂಡೋನೇಶ್ಯ ಆತಿಥ್ಯದಲ್ಲಿ ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಏಶ್ಯಾಡ್‌ ಪಂದ್ಯಾವಳಿ ಹಾಗೂ ನವೆಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ಪ್ರತಿಷ್ಠಿತ ವರ್ಲ್ಡ್ ಚಾಂಪಿಯನ್‌ಶಿಪ್‌ ನಡೆಯಲಿದೆ.

ಕಳೆದ 5 ತಿಂಗಳಿಂದ ಸತತವಾಗಿ ಸ್ಪರ್ಧಾತ್ಮಕ ಕೂಟಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವ ಮೇರಿ ಕೋಮ್‌ ಇದೇ ಮೊದಲ ಬಾರಿ ಕಾಮೆನ್ವೆಲ್ತ್‌ ಗೇಮ್ಸ್‌ನಲ್ಲಿ ಪ್ರತಿನಿಧಿಸಿದ್ದಾರೆ. 2006ರಲ್ಲಿ ಭಾರತದ ಆತಿಥ್ಯದಲ್ಲೇ ನಡೆದ ಮೊದಲ ವನಿತಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕಾಮ್‌ ಚಿನ್ನದ ಪದಕ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next