Advertisement

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ‘ಹೆಮ್ಮೆಯ ಕ್ಷಣ’: SRH ಸ್ಪಿನ್ನರ್ ರಶೀದ್ ಖಾನ್

05:48 PM Sep 20, 2020 | Mithun PG |

ಅಬುಧಾಬಿ: ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ಮಾಡುವುದು ಹೆಮ್ಮೆಯ ಕ್ಷಣ ಎಂದು ಸನ್ ರೈಸರ್ಸ್ ಹೈದರಬಾದ್ ತಂಡದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಡೆತ್ ಓವರ್ ಗಳಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು ಕೂಡ ಸವಾಲಿನ ಕೆಲಸವಾದ್ದರಿಂದ, ಇಲ್ಲಿ ಬೌಲರ್ ಸಾಕಷ್ಟು ಕಲಿಯುತ್ತಾನೆ ಎಂದು ಹೇಳಿದ್ದಾರೆ.

Advertisement

ಸೆ.21 ರಂದು ಹೈದರಬಾದ್ ತಂಡ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರನ್ನು ಎದುರಿಸಲಿದೆ. ಈ ಹಿನ್ನಲೆಯಲ್ಲಿ ಮಾತನಾಡಿದ ರಶೀದ್, ನನ್ನ ಮನಸ್ಸಿನಲ್ಲಿ ಯಾವಾಗಲೂ ಒಂದು ಆಲೋಚನೆಯಿರುತ್ತದೆ.  ಇನ್ನಿಂಗ್ಸ್‌ನಲ್ಲಿ ಮೂರು ಅಥವಾ ನಾಲ್ಕು ಓವರ್‌ಗಳು ಉಳಿದಿರುವಾಗಲೆಲ್ಲಾ, ನಾನು ಬ್ಯಾಟ್‌ ನೊಂದಿಗೆ ಉತ್ತಮ ಪ್ರದರ್ಶನ ನೀಡಬಲ್ಲೆ. ಇದು ಪರಿಸ್ಥಿತಿ ಹೇಗೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ,

ನಾನು ಬ್ಯಾಟ್ ಮಾಡಬಲ್ಲೆ ಎಂಬುದರ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ. ಬದಲಾಗಿ ಇಡೀ ಪಂದ್ಯದಲ್ಲಿ ನಾನು ಏನು ಮಾಡಬಹುದು ಎಂಬುದರ ಬಗ್ಗೆ ನಾನು ಗಮನ ಹರಿಸುತ್ತೇನೆ, ತಂಡ ಗೆಲ್ಲಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಆರ್‌ಸಿಬಿ ವಿರುದ್ಧದ ಮುಂಬರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಎದುರಿಸುವ ಕುರಿತಾಗಿ ಮಾತನಾಡಿದ ರಶೀದ್, ಯಾರಿಗಾದರೂ ಬೌಲಿಂಗ್ ಮಾಡುವಾಗ ಒತ್ತಡಕ್ಕೆ ಒಳಗಾಗುವುದು ಸಹಜ. ವಿರಾಟ್ ಮೂರು ಫಾರ್ಮೆಟ್ ನಲ್ಲಿ ವಿಶ್ವ ದರ್ಜೆಯ ಆಟಗಾರ, ನಾನು ಅವರಿಗೆ ಬೌಲಿಂಗ್ ಮಾಡುವುದನ್ನು ಆನಂದಿಸುತ್ತೇನೆ, ಅದು ನನಗೆ ಹೆಮ್ಮೆಯ ಕ್ಷಣವಾಗಿದೆ. ಬೌಲರ್ ಆಗಿ ಅತ್ಯುತ್ತಮವಾಗಿ ಪ್ರದರ್ಶನ ನೀಡಲು ಬಯಸುತ್ತೇನೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next