ರಾಯ್ಪುರ: ಭಾರತ ತಂಡದ ವೇಗಿಗಳ ಘಾತಕ ದಾಳಿಗೆ ಸಿಲುಕಿದ ನ್ಯೂಜಿಲ್ಯಾಂಡ್ ತಂಡವು ರಾಯ್ಪುರ ಕೇವಲ 108 ರನ್ ಗೆ ಆಲೌಟಾಯಿತು. ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದು ಮಿಂಚಿದರು.
ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಾಕ್ಷಿಯಾದ ರಾಯ್ಪುರದಲ್ಲಿ ಬೌಲರ್ ಗಳು ಮೆರೆದಾಡಿದರು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ನಾಯಕ ರೋಹಿತ್ ನಿರ್ಧಾರವನ್ನು ಬೌಲರ್ ಗಳು ಸಮರ್ಥಿಸಿದರು.
ಮೊದಲ ಓವರ್ ನಲ್ಲಿಯೇ ದಾಳಿ ಆರಂಭಿಸಿದ ಶಮಿ ವಿಕೆಟ್ ಬೇಟೆಯಾಡಿದರು. ಒಂದು ಹಂತದಲ್ಲಿ ಕಿವೀಸ್ ತಂಡವು 15 ರನ್ ಗೆ ಐದು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಕಳೆದ ಪಂದ್ಯದ ಹೀರೋ ಬ್ರೇಸ್ ವೆಲ್ ಮತ್ತು ಗ್ಲೆನ್ ಫಿಲಿಪ್ಸ್ ತಂಡವನ್ನು ತುಸು ಆಧರಿಸಿದರು. ಫಿಲಿಪ್ಸ್ 36 ರನ್ ಮಾಡಿದರೆ, ಬ್ರೇಸ್ ವೆಲ್ 22 ರನ್ ಮತ್ತು ಮಿಚೆಲ್ ಸ್ಯಾಂಟ್ನರ್ 27 ರನ್ ಮಾಡಿದರು.
ಇದನ್ನೂ ಓದಿ:ಕಾಶ್ಮೀರವನ್ನು ‘ಪಾಕಿಸ್ಥಾನದ ರಾಷ್ಟ್ರೀಯ ಸಮಸ್ಯೆ’ ಎಂದ ಜಾಗತಿಕ ಉಗ್ರ ಅಬ್ದುಲ್ ಮಕ್ಕಿ
ಭಾರತದ ಪರ ಮೊಹಮ್ಮದ್ ಶಮಿ ಮೂರು ವಿಕೆಟ್, ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರು. ಸಿರಾಜ್, ಶಾರ್ದೂಲ್ ಮತ್ತು ಕುಲದೀಪ್ ತಲಾ ಒಂದು ವಿಕೆಟ್ ಪಡೆದರು.