ನವದೆಹಲಿ: ಭಾರತೀಯ ಮೂಲದ ಟೆಕ್ ಬ್ರಾಂಡ್ Boult ತನ್ನ ಹೊಸ ಟ್ರೂ ವೈರ್ ಲೆಸ್ ಇಯರ್ ಬಡ್ Z40 Ultra ವನ್ನು ಇಂದು ಬಿಡುಗಡೆ ಮಾಡಿದೆ. ಇದರ ಹಿಂದಿನ ಮಾಡೆಲ್ ಆದ Z40 12 ಲಕ್ಷ ಯೂನಿಟ್ ಮಾರಾಟವಾಗಿದ್ದು, ಅದರ ಉನ್ನತೀಕರಿಸಿದ ಮಾದರಿಯಾಗಿ ಎಐ ತಂತ್ರಜ್ಞಾನವನ್ನುಳ್ಳ ಹೊಸ ಮಾಡೆಲ್ ಹೊರತರಲಾಗಿದೆ. ಇದು ವೇಗದ ಚಾರ್ಜಿಂಗ್, ಅತ್ಯುತ್ತಮ ಗುಣಮಟ್ಟದ ಸೌಂಡ್ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.
ಇದು 32 dB ಆಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್, 100 ಗಂಟೆಗಲ ಪ್ಲೇಟೈಮ್, ಒಂದೇ ಸಲಕ್ಕೆ ಎರಡು ಡಿವೈಎಸ್ಗಳಿಗೆ ಕನೆಕ್ಟ್ ಮಾಡುವ ಸೌಲಭ್ಯ ಹಾಗೂ ಎಐ ಆಧಾರಿತ ಸೋನಿಕ್ ಕೋರ್ ಡೈನಮಿಕ್ಸ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ಅತ್ಯುತ್ತಮ ನಾಯ್ಸ್ ಕ್ಯಾನ್ಸಲೇಷನ್, ಅತ್ಯುತ್ತಮ ಆಡಿಯೋ ಗುಣಮಟ್ಟ, ಪ್ರಿಸ್ಮ್ ವಾಯ್ಸ್ ಮೂಲಕ ಪಿಎಲ್ಸಿ ಆಧಾರಿತ ಕರೆ ಗುಣಮಟ್ಟ ದೊರಕುತ್ತದೆ, ಐಪಿಎಕ್ಸ್ 5 ನೀರು ನಿರೋಧಕವಾಗಿದೆ ಎಂದು ತಿಳಿಸಿದೆ.
ಇದು ಆಡಿಯೋ ಗುಣಮಟ್ಟ ಮತ್ತು ಗೇಮಿಂಗ್ ಬಳಕೆದಾರರಿಗೆ 45 ಮಿಲಿಸೆಕೆಂಡ್ ಲೇಟೆನ್ಸಿ ಮೂಲಕ ಉತ್ತಮ ಕನೆಕ್ಟಿವಿಟಿ ಹೊಂದಿದೆ. ಟೈಪ್ ಸಿ ಫಾಸ್ಟ್ ಚಾರ್ಜಿಂಗ್, ಜನನಿಬಿಡ ಪ್ರದೇಶದಲ್ಲೂ ಉತ್ತಮ ಕರೆ ಗುಣಮಟ್ಟಕ್ಕಾಗಿ ನಾಲ್ಕು ಮೈಕ್ಗಳ ಝೆನ್ ತಂತ್ರಜ್ಞಾನದ ಈಎನ್ಸಿ ತಂತ್ರಜ್ಞಾನ, ಉತ್ತಮ ಬಾಸ್ಗಾಗಿ 10 ಎಂಎಂ ಡ್ರೈವರ್ಗಳ ಬೂಮ್ ಎಕ್ಸ್ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಎಲ್ಲ ವಿಶೇಷಗಳಿಂದ ಇದು ಬಳಕೆದಾರರಿಗೆ ಅತ್ಯುತ್ತಮ ಆಡಿಯೋ ಕೇಳುವ ಅನುಭವ ನೀಡುತ್ತದೆ ಎಂದು ಬೌಲ್ಟ್ ಸಹ ಸಂಸ್ಥಾಪಕ ಮತ್ತು ಸಿಇಒ ವರುಣ್ ಗುಪ್ತಾ ತಿಳಿಸಿದ್ದಾರೆ.
ಇದು ಮೂರು ಬಣ್ಣಗಳಲ್ಲಿ ಲಭ್ಯ. ದರ 1999 ರೂ. ಇದ್ದು, ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಬೌಲ್ಟ್ ಆಡಿಯೋ ಡಾಟ್ ಕಾಮ್ ನಲ್ಲಿ ದೊರಕುತ್ತದೆ.