Advertisement

ಯುವಕರನ್ನು ಸಶಕ್ತಗೊಳಿಸಿ ಕ್ರೀಡಾ ಸಂಸ್ಕೃತಿ ಬೆಳೆಸುವುದು ಅಗತ್ಯ

03:43 PM Apr 05, 2021 | Team Udayavani |

ಕೋಲಾರ: ಜೀವನಕ್ಕೆ ಭದ್ರತೆ ಒದಗಿಸುವ ಸಾಹಸ ಕ್ರೀಡೆಗಳ ಬಗ್ಗೆ ಮಕ್ಕಳು ಯುವಕರು ಆಸಕ್ತಿ ವಹಿಸ ಬೇಕು. ದೈಹಿಕವಾಗಿ ಸದೃಢವಾದ ಆರೋಗ್ಯಹೊಂದಲು ಸಾಹಸಮಯ ಪ್ರವೃತ್ತಿ ಬೆಳೆಸಿಕೊಳ್ಳ ಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಮಕ್ಕಳು ಮತ್ತುಯುವಕರನ್ನು ಸಶಕ್ತಗೊಳಿಸಿ, ನಾಗರಿಕರಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಬೇಕು ಎಂದು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ರವೀಂದ್ರ ತಿಳಿಸಿದರು.

Advertisement

ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸಅಕಾಡೆಮಿ, ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ ಹಾಗೂ ಭಾರತೀಯ ಪರ್ವತಾರೋಹಣಸಂಸ್ಥೆ. ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ಬೌಲ್ಡರಿಂಗ್‌ (ಕಲ್ಲುಬಂಡೆಗಳ ಏರುವ) ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸಾಹಸ ಕ್ರೀಡೆಗಳನ್ನು ಇಡೀ ರಾಜ್ಯಾದ್ಯಂತ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರಥಮವಾಗಿ ಕೋಲಾರ ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗಿದೆ.

ಮಕ್ಕಳು ಈ ರೀತಿಯ ಪರಿಸರದಲ್ಲಿ ಪಾಲ್ಗೊಳ್ಳುವುದುಅನುಭವಿಸುವುದು, ಪರಿಸರವನ್ನು ಉಳಿಸುವುದುಬಹಳ ಮುಖ್ಯ. ವಿವಿಧ ಹಂತದ ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ. ಒಲಂಪಿಕ್‌ ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ರೀತಿಯಲ್ಲಿ ಸಾಧನೆ ಮಾಡ ಬೇಕು. ಕೋಲಾರ ಜಿಲ್ಲೆಯಲ್ಲಿ ಸಾಹಸ ಅಕಾಡೆಮಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತೇವೆ. ಈ ವರ್ಷದ ಬಜೆಟ್‌ನಲ್ಲಿ ಕೂಡ ಎಲ್ಲಾ ಜಿಲ್ಲೆಗಳಲ್ಲಿ ಬೌಲ್ಡರಿಂಗ್‌ ರೀತಿಯ ಸಾಹಸ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ:ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಮಾತನಾಡಿ, ದೈಹಿಕವಾಗಿ ಸದೃಢವಾದ ಆರೋಗ್ಯ ಹೊಂದ ಬೇಕು. ಸಾಹಸಮಯ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಆಗ ಮಾನಸಿಕ ಸಮತೋಲನಕಾಪಾಡಲು ಸಾಧ್ಯ. ಕೋಲಾರ ಜಿಲ್ಲೆಯಲ್ಲಿ ಸಾಹಸ ಕ್ರೀಡೆಗೆ ಬಹಳಷ್ಟು ಅವಕಾಶವಿದೆ.ಜಿಲ್ಲೆಯಲ್ಲಿ ಶಾಶ್ವತ ಸಾಹಸ ಅಕಾಡೆಮಿ ಮಾಡಲುಸಹಕರಿಸಲಾಗುವುದು.ಭವಿಷ್ಯದಲ್ಲಿ ಕೋಲಾರಜಿಲ್ಲೆಯಲ್ಲಿ ಈ ರೀತಿಯ ಸಾಹಸ ಕ್ರೀಡೆಗಳು ನಡೆಯಬೇಕು ಎಂದು ತಿಳಿಸಿದರು.

ಭಯ ದೂರವಿಡಿ: ಜಿಪಂ ಸಿಇಒ ಎನ್‌. ಎಂ.ನಾಗರಾಜ್‌ ಮಾತನಾಡಿ, ವೈಫಲ್ಯದಭಯವನ್ನು ದೂರವಿಡಬೇಕು. ಬೀಳುವುದುಮತ್ತು ವಿಫಲವಾಗುವುದು, ಮೇಲಕ್ಕೆ ಏರುವಷ್ಟೇಒಂದು ಭಾಗವಾಗಿದೆ. ನೀವು ಬೀಳದಿದ್ದರೆ ನೀವುಸಾಕಷ್ಟು ಪ್ರಯತ್ನಿಸಿಲ್ಲ ಎಂದು ಅರ್ಥ ಎಂದು ಸಲಹೆ ನೀಡಿದರು.

Advertisement

ಈಜುಕೊಳ ನಿರ್ಮಾಣವಾಗಲಿ: ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಮಾತ ನಾಡಿ, ಮಕ್ಕಳು ಯುವಕರು ಮನೋಲ್ಲಾಸದಿಂದಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಜಿಲ್ಲೆಯಲ್ಲಿ ಕ್ರೀಡಾಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು.ಜಿಲ್ಲಾ ಕೇಂದ್ರದಲ್ಲಿ ಈಜುಕೊಳ ನಿರ್ಮಾಣ  ವಾಗಬೇಕು ಎಂದು ತಿಳಿಸಿದರು.

ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ನಿರ್ದೇಶಕರು ಹಾಗೂಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಸುಭಾಶ್‌ ಚಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಸಹಾಯಕ ನಿರ್ದೇಶಕ ಮಂಜುನಾಥ್‌, ಜನರಲ್‌ ತಿಮ್ಮಯ್ಯ ಅಕಾಡೆಮಿಯ ಸದಸ್ಯರಾದ, ರವೀಂದ್ರಮುನಿರಾಜು. ಸ್ಥಳೀಯ ಗ್ರಾಪಂ ಸದಸ್ಯರಾದ ಚಂದಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next