Advertisement
ಸಾಮಾನ್ಯವಾಗಿ ಯುವಕರು ಬಣ್ಣದಾಟ ಮುಗಿದ ಬಳಿಕ ಸ್ನಾನಕ್ಕೆ ನದಿಗಳತ್ತ ಹೋಗುವುದು ವಾಡಿಕೆ. ಆದರೆ, ಈ ಬಾರಿ ಎರಡೂ ನದಿಗಳು ಬರಿದಾಗಿವೆ. ಇದರಿಂದ ನದಿಗಳಿಗೆ ತೆರಳಿದರೂ ಅಲ್ಲಲ್ಲಿ ನಿಂತ ನೀರಿನಲ್ಲಿಯೇ ಸ್ನಾನಾದಿ ಕರ್ಮಗಳನ್ನು ಮುಗಿಸಿಕೊಂಡು ಬರಬೇಕಿದೆ. ಇನ್ನು ನಗರದಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿರುವ ಕಾರಣ ನೀರಿನ ಅಭಾವ ಕಾಡದೆ ಇರಲಿಕ್ಕಿಲ್ಲ.ಜಿಲ್ಲೆಯ ಕೆಲವೆಡೆ ಗುರುವಾರ, ಮತ್ತೆ ಕೆಲವೆಡೆ ಶುಕ್ರವಾರ ಹಬ್ಬ ಆಚರಿಸಿದರೆ ಕೆಲವೆಡೆ ಆಡುವುದಿಲ್ಲ. ಸಿಂಧನೂರಿನಲ್ಲಿ
ಗುರುವಾರ ರಾತ್ರಿ ಕಾಮದಹನ ಮಾಡಲಾಗುತ್ತಿದ್ದು, ಶುಕ್ರವಾರ ಹಬ್ಬ ಆಚರಿಸಲಾಗುತ್ತಿದೆ. ಇನ್ನು ದೇವದುರ್ಗ ತಾಲೂಕು, ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ಹೋಳಿ ಬದಲಿಗೆ ಯುಗಾದಿಗೆ ಬಣ್ಣದಾಟ ಆಡುತ್ತಾರೆ. ಆದರೆ, ನಗರದಲ್ಲಿ ಗುರುವಾರ ಹಬ್ಬ ಆಚರಣೆಗೆ ಸಿದ್ಧತೆಗಳು ಜೋರಾಗಿಯೇ ನಡೆದಿದ್ದವು. ಕೆಲ ಖಾಸಗಿ ಸಂಸ್ಥೆಗಳು ಹಬ್ಬ ಆಡಲು ವಿಶೇಷ ವ್ಯವಸ್ಥೆ ಮಾಡುವ ಪರಿಪಾಟವಿದ್ದು, ಈ ಬಾರಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವ್ಯಾಪಾರ ವಹಿವಾಟು ಜೋರು: ಬಣ್ಣದಾಟಕ್ಕೆ ಮಾರುಕಟ್ಟೆಗೆ ವಿಧ ವಿಧವಾದ ಬಣ್ಣಗಳು ಲಗ್ಗೆ ಇಟ್ಟಿವೆ. ಕೆಲವೆಡೆ ಪುಡಿ
ಬಣ್ಣಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಬಹುತೇಕ ಕೆಮಿಕಲ್ ಮಿಶ್ರಿತ ಬಣ್ಣ ಇರುವುದು ಕಂಡು ಬಂತು. ಸ್ವಲ್ಪವೇ
ಬಳಸಿದರೂ ಚರ್ಮಕ್ಕೆ ಹೆಚ್ಚು ಬಣ್ಣ ಅಂಟಿಕೊಳ್ಳುವಂಥ ಬಣ್ಣಗಳೇ ಕಂಡು ಬಂತು. ಮಾರುಕಟ್ಟೆಯಲ್ಲಿ ಬುಧವಾರ
ಮಕ್ಕಳು, ಪಾಲಕ ರು ಬಣ್ಣ, ಪಿಚಕಾರಿ ಖರೀದಿಸುತ್ತಿರುವುದು ಕಂಡು ಬಂತು.