Advertisement

ಬೊರಿವಲಿ ಶ್ರೀ ಶನಿಮಂದಿರ: ನವರಾತ್ರಿ ವಿಶೇಷ ಕಾರ್ಯಕ್ರಮ

12:34 PM Sep 28, 2017 | |

ಮುಂಬಯಿ: ಬೊರಿವಲಿ ಪೂರ್ವದ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿಯ ಸಂಚಾಲಕತ್ವದ ಶ್ರೀ ಶನಿಮಂದಿರದಲ್ಲಿ ನವರಾತ್ರಿ ಪ್ರಯುಕ್ತ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಮತ್ತು ಮಂಡಳಿಯ ವತಿಯಿಂದ ದುರ್ಗಾನಮಸ್ಕಾರ ಪೂಜೆಯು ಸೆ. 24ರಂದು ನಡೆಯಿತು.

Advertisement

ಮಂದಿರದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಅಡಿಗ ಅವರ ಪೌರೋಹಿತ್ಯದಲ್ಲಿ  ವಿವಿಧ ಪೂಜಾ ಕೈಂಕರ್ಯಗಳು ಜರಗಿತು. ವಿನಯ ಹೆಬ್ಟಾರ್‌, ಬಾಲಕೃಷ್ಣ ಭಟ್‌, ಓಂಕಾರ್‌ ಭಟ್‌, ಪ್ರಕಾಶ್‌ ಭಟ್‌ ಅವರು ಪೂಜಾ ವಿಧಿ-ವಿಧಾನಗಳಲ್ಲಿ ಸಹಕರಿಸಿದರು.

ಮಹಿಳಾ ವಿಭಾಗದವರಿಂದ ನಡೆದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು. ಐರೋಲಿಯ ವಿನೋದಾ ಹೆಬ್ಟಾರ್‌ ಅವರು ರಂಗೋಲಿಯಲ್ಲಿ ಮೂಕಾಂಬಿಕಾ ದೇವಿಯ ಮಂಡಲ ರಚಿಸಿ ಭಕ್ತಾದಿಗಳನ್ನು ಆಕರ್ಷಿಸಿದರು.

ಮಂದಿರದ ಉಪಾಧ್ಯಕ್ಷ ಸಂಜೀವ ಸಾಲ್ಯಾನ್‌, ಗೌರವ  ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ನಾಗೇಶ್‌ ಕರ್ಕೇರ, ಗೌರವ ಕೋಶಾಧಿಕಾರಿ ಕೇಶವ ಕಾಂಚನ್‌, ಜತೆ ಕೋಶಾಧಿಕಾರಿ ಗಿರೀಶ್‌ ಕರ್ಕೇರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ತಿಮ್ಮಪ್ಪ ಕೋಟ್ಯಾನ್‌, ಗೋಪಾಲ್‌ ಪುತ್ರನ್‌, ದಾಮೋದರ ತಿಂಗಳಾಯ, ದೇವೇಂದ್ರ ಸುರತ್ಕಲ್‌, ವಿನೋದಾ ಸಾಲ್ಯಾನ್‌, ಮೋನಪ್ಪ ತಿಂಗಳಾಯ, ರಾಘವೇಂದ್ರ ಸಾಲ್ಯಾನ್‌, ಸುಧಾಕರಸನಿಲ್‌, ಸೀತಾರಾಮ ಸನಿಲ್‌, ಗಿರಿಧರ ಸುವರ್ಣ, ರಾಮ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Advertisement

ಮಹಿಳಾ ವಿಭಾಗದ ಲಕ್ಷ್ಮೀ ಸಾಲ್ಯಾನ್‌, ಅಮಿತಾ ಪುತ್ರನ್‌, ಮಮತಾ ಶೆಟ್ಟಿ, ವಿದ್ಯಾ ಸಾಲ್ಯಾನ್‌, ಲಕ್ಷ್ಮೀ ಕಾಂಚನ್‌, ಲಕ್ಷ್ಮೀ ಕರ್ಕೇರ, ದಮಯಂತಿ ಸನಿಲ್‌, ಪದ್ಮಾವತಿ ಕೋಟ್ಯಾನ್‌, ಸಾವಿತಾ ಕರ್ಕೇರ, ಪೂಜಾ ಪುತ್ರನ್‌, ಭವಾನಿ ಸಾಲ್ಯಾನ್‌, ವಿದ್ಯಾ, ಪ್ರೇಮಾ, ಉಷಾ ಅಮೀನ್‌, ಪುಷ್ಪಾ ತಿಂಗಳಾಯ, ಇಂದಿರಾ ಸನಿಲ್‌ ಮೊದಲಾದವರು ಉಪಸ್ಥಿತರಿದ್ದರು.

ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಪರಿಸರದ ಭಕ್ತಾದಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು,  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next