ಮುಂಬಯಿ: ತುಳು-ಕನ್ನಡಿಗರ ದೀರ್ಘ ಕಾಲದ ಬೇಡಿಕೆಯಾಗಿರುವ, ಮುಖ್ಯವಾಗಿ ದಕ್ಷಿಣ ಕನ್ನಡಿಗರ ಕನಸಿನ ಕೂಸಾಗಿರುವ ಬಾಂದಾ -ಮಂಗಳೂರು ವಿಶೇಷ ರೈಲು ಎ. 16 ರಂದು ಆರಂಭವಾಗಲಿದೆ.
ಈ ನೂತನ ಸೇವೆಗೆ ಸ್ಪಂದಿಸಿ ಸಹಕರಿಸಿದ ಸಂಸದ ಗೋಪಾಲ ಶೆಟ್ಟಿ ಅವರನ್ನು ಬೊರಿವಲಿ ರೈಲ್ವೆ ಯಾತ್ರಿ ಸೇವಾ ಸಂಘದ ಪರವಾಗಿ ಗೌರವ ಅಧ್ಯಕ್ಷ ಡಾ| ವಿರಾರ್ ಶಂಕರ ಶೆಟ್ಟಿ ನೇತೃತ್ವದಲ್ಲಿ ಮಾ. 26 ರಂದು ಬೊರಿವಲಿಯ ಸಂಸದರ ಕಚೇರಿಯಲ್ಲಿ ಅಭಿನಂದಿ ಸಲಾಯಿತು.
ಪ್ರತಿಷ್ಠಿತ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕನ್ನಡಿಗ ಗೋಪಾಲ ಶೆಟ್ಟಿ ಅವರಿಂದ ಈ ಯೋಜನೆ ಸಾಕಾರಗೊಂಡಿದೆ. ದಿಲ್ಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೇ ಮಂಡಳಿ ಮಹಾ ಪ್ರಬಂಧಕ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಸಹಕಾರ ನೀಡಿದರು.
ಸಾಪ್ತಾಹಿಕ ಬೇಸಿಗೆ ಕಾಲದ ಈ ವಿಶೇಷ ರೈಲು ಸೇವೆಯನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಮುಂಬಯಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಪಶ್ಚಿಮ ಉಪ ನಗರದ ಮೂಲಕ ಮಂಗಳೂರಿಗೆ ಚಲಿಸುವ ಈ ರೈಲನ್ನು ದಿನ ನಿತ್ಯದ ರೈಲಾಗಿ ಪರಿವರ್ತನೆಗೊಳಿಸುವಲ್ಲಿ ಎÇÉಾ ತುಳು-ಕನ್ನಡಿಗರು ಸಹಕರಿಸ ಬೇಕೆಂದು ಡಾ| ವಿರಾರ್ ಶಂಕರ ಶೆಟ್ಟಿ ಅವರು ಇದೆ ಸಂದರ್ಭದಲ್ಲಿ ವಿನಂತಿಸಿದರು. ಲೋಕಸಭಾ ಚುನಾವಣೆಗೆ ಅಭ್ಯಥಿಯಾಗಿ ನಾಮಪತ್ರ ಸಲ್ಲಿಸಿದ ಗೋಪಾಲ ಶೆಟ್ಟಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 4.46 ಲಕ್ಷ ಮತಗಳ ಅಂತರದಲ್ಲಿ ವಿಜಯಿಯಾಗಿ¨ªಾರೆ. ಈ ವರ್ಷವೂ ನಮ್ಮೆಲ್ಲರ ಮೆಚ್ಚಿನ ಸಂಸದರನ್ನು ಇದಕ್ಕಿಂತಲ್ಲೂ ಹೆಚ್ಚಿನ ಮತದೊಂದಿಗೆ ಆಯ್ಕೆಮಾಡುವಲ್ಲಿ ತುಳು-ಕನ್ನಡಿಗರು ಶ್ರಮಿಸಬೇಕು ಎಂದು ವಿನಂತಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದ ಗೋಪಾಲ್ ಶೆಟ್ಟಿ ಅವರು, ತುಳು-ಕನ್ನಡಿಗರ ಬಹು ದಿನಗಳ ಬೇಡಿಕೆಗೆ ಸ್ಪಂದಿಸುವಲ್ಲಿ ಎಲ್ಲಾ ಅಧಿಕಾರಿಗಳು ನನ್ನೊಂದಿಗೆ ಸಹಕರಿಸಿದ್ದಾರೆ. ಮುಂದಿನ ಲೋಕಸ ಭಾ ಚುನಾವಣೆಯಲ್ಲಿ ಅತ್ಯಧಿಕ ಮತದಿಂದ ಆರಿಸಿ ಬರುವಂತೆ ಎಲ್ಲರು ಸಹಕರಿಸಬೇಕು. ಈಗಾಗಲೇ ಅಭಿವೃದ್ಧಿಪರ ಯೋಜನೆ ಗಳನ್ನು ತಂದಿರುವುದರಿಂದ ಕ್ಷೇತ್ರದ ತುಳು-ಕನ್ನಡಿಗರು ಸೇರಿದಂತೆ, ಮರಾಠಿಗರು ಹಾಗೂ ಅನ್ಯಭಾಷಿಗರ ಮೆಚ್ಚುಗೆಗೆ ಪಾತ್ರನಾಗಿದ್ದೇನೆ. ನನ್ನ ಅಭಿವೃದ್ಧಿಪರ ಕಾರ್ಯಗಳೇ ನನ್ನನ್ನು ಕೈಹಿಡಿದು ಕಾಪಾಡಲಿದೆ ಎಂಬ ಭರವಸೆ ನನಗಿದೆ ಎಂದು ನುಡಿದರು.ಬೊರಿವಲಿ ರೈಲ್ವೇ ಯಾತ್ರಿಕ ಸೇವಾ ಸಂಘದ ಉಪಾಧ್ಯಕ್ಷ ಪ್ರೇಮನಾಥ ಪಿ. ಕೋಟ್ಯಾನ್, ಜತೆ ಕಾರ್ಯದರ್ಶಿ ರಜಿತ್ ಸುವರ್ಣ, ಇತರ ಪದಾಧಿಕಾರಿಗಳು, ಸದಸ್ಯರು, ಹಿತೈಷಿ ಗಳು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್