Advertisement
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಭಾವಿಗೆ ಬಿದ್ದಿರುವ ಮಗುವನ್ನು ಸಾತ್ವಿಕ್ ಮುಜಗೊಂಡ (2) ಎಂದು ಗುರುತಿಸಲಾಗಿದೆ. ಮಗುವಿನ ರಕ್ಷಣೆಗಾಗಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
Related Articles
Advertisement
ಮಗುವಿನ ರಕ್ಷಣೆಗಾಗಿ ತುರ್ತಾಗಿ 2 ಜೆಸಿಬಿ ತರಿಸಿದ್ದು, 2 ಹಿಟಾಚಿಗಳನ್ನೂ ಬಳಸಲು ಯೋಜಿಸಲಾಗಿದೆ. ಹಿಟಾಚಿ ಮೂಲಕ ಸುರಂಗ ಮಾರ್ಗಕ್ಕಾಗಿ ತೆಗೆಯುವ ಮಣ್ಣನ್ನು ಸಾಗಿಸಲು 8 ಟ್ಯಾಕ್ಟರ್ ಬಳಸಾಗುತ್ತಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕ ಸಾತ್ವಿಕನ ಕುಟುಂಬದವರು ಲಚ್ಯಾಣ ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಮಂಗಳವಾರ ಎರಡು ಕೊಳವೆ ಬಾವಿ ಕೊರೆಸಿದ್ದರು. 280 ಅಡಿ ಹಾಗೂ 350 ಅಡಿ ಆಳದಲ್ಲಿ ಕೊರೆಸಿದ ಎರಡು ಕೊಳವೆಬಾವಿಯಲ್ಲಿ ಒಂದರಲ್ಲಿ ನೀರು ಕಾಣಿಸಿಕೊಂಡಿತ್ತು. ವಿಫಲ ಕೊಳವೆ ಬಾವಿಗೆ ಕೇಸಿಂಗ್ ಹಾಕಿರಲಿಲ್ಲ, ಬಾವಿಯ ಬಾಯಿಯನ್ನೂ ಮುಚ್ಚಿರಲಿಲ್ಲ.
ನೀರು ಕಾಣಿಸಿಕೊಂಡಿದ್ದ ಕೊಳವೆ ಭಾವಿಗೆ ಬುಧವಾರ ಸಂಜೆ ಮೋಟರ್ ಇಳಿಸಲು ಸಾತ್ವಿಕನ ಪಾಲಕರು ಜಮೀನಿಗೆ ಹೋಗಿದ್ದರು.
ಪಾಲಕರೊಂದಿಗೆ ಜಮೀನಿಗೆ ಹೋಗಿದ್ದ ವೇಳೆ ವಿಫಲ ಕೊಳವೆ ಬಾವಿಯ ಬಾಯಿಯನ್ನು ಮುಚ್ಚದೇ ತೆರೆದು ಬಿಡಲಾಗಿತ್ತು. ಪರಿಣಾಮ ಮುಚ್ಚದ ವಿಫಲ ಕೊಳವೆ ಬಾವಿಯತ್ತ ಆಡಲು ಹೋಗಿದ್ದ ಸಾತ್ವಿಕ್ ಸಂಜೆ 5-25 ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದೆ.
ಕೂಡಲೇ ಸ್ಥಳೀಯರ ನೆರವೊಂದಿಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸುಮಾರು ಅರ್ಧ-ಮುಕ್ಕಾಲು ಗಂಟೆಯಲ್ಲೇ ಪೊಲೀಸರು, ಅಗ್ನಿಶಾಮಕ ಸೇವೆಯ ಸಿಬ್ಬಂದಿ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ರಕ್ಷಣಾ ಕಾರ್ಯಾರಣೆ ಸ್ಥಳದಲ್ಲಿ ಕತ್ತಲು ಆವರಿಸಿದ್ದು, ಭಾರಿ ಬೆಳಕಿಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸುದ್ದಿ ತಿಳಿದು ಜಿಲ್ಲಾಡಳಿತದ ಸೂಚನೆ ಮೇರೆಗೆ ಮಗುವಿನ ರಕ್ಷಣಾ ಕಾರ್ಯಾರಣೆಗೆ ಅಗತ್ಯ ಇರುವ ಹೆಚ್ಚುವರಿ ಸೌಲಭ್ಯ ಹಾಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿ ಭೂಬಾಲನ್, ಎಸ್ಪಿ ಋಷಿಕೇಶ ಭಗವಾನ್ ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಕೊರಟಗೆರೆಗೆ ಕೊನೆ ಸ್ಥಾನ… ಪಿಡಿಓಗೆ ಎಚ್ಚರಿಕೆ ನೀಡಿದ ಜಿ.ಪಂ ಸಿಇಓ
ಸಾತ್ವಿಕ ಸುರಕ್ಷಿತ ರಕ್ಷಣೆಗೆ ಸಚಿವ ಪಾಟೀಲ ಸೂಚನೆವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಮಗುವೊಂದು ಪಾಳು ಕೊಳವೆ ಬಾವಿಗೆ ಬಿದ್ದಿರುವುದಕ್ಕೆ ಕೈಗಾರಿಕೆ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟಿಟನ ಸೂಚನೆ ನೀಡಿದ್ದು, ಸ್ಥಳದಲ್ಲಿನ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಭೂಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸೂಕ್ತ ನಿರ್ದೇಶನ ನೀಡಿರುವ ಸಚಿವ ಎಂ.ಬಿ.ಪಾಟೀಲ, ಮಗುವನ್ನು ಸುರಕ್ಷಿತ ರಕ್ಷಿಸಲು ಆದ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ. ಇದಲ್ಲದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ನಿಗಾ ವಹಿಸಿ ಕೆಲಸ ಮಾಡಲು ಅವರು ಸೂಚಿಸಿದ್ದು, ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.