ಆಲೂರು: ತಾಲೂಕಿನ ವ್ಯಾಪ್ತಿಗೆ ಬರುವ ಸುಮಾರು 35ಕ್ಕೂ ಹೆಚ್ಚು ಕೊಳವೆ ಬಾವಿಗಳು ಸುಮಾರು ನಾಲ್ಕೈದು ವರ್ಷಗಳ ಹಿಂದೆ ಕೊರೆಯ ಲಾಗಿದೆ. ಆದರೆ ಇದುವರೆಗೂ ಅವು ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗಿಲ್ಲ ಎಂದು ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೇಮಾವತಿ ಪುನರ್ವಸತಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 35ಕ್ಕೂ ಹೆಚ್ಚು ಕೊಳವೆ ಬಾವಿ ಗಳನ್ನು ನಿರ್ಮಿಸಲಾಗಿದ್ದು, ಸಾರ್ವ ಜನಿಕರ ಬಳಕೆಗೆ ಅನುಕೂಲ ಮಾಡಿ ಕೊಡುವ ಬದಲು ಇದ್ದ ಕೊಳವೆ ಬಾವಿ ಗಳನ್ನು ನನೆಗುದಿಗೆ ಬೀಳುವಂತೆ ಅಧಿಕಾರಿಗಳು ಮಾಡಿರುವುದು ಗ್ರಾಮ ಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅನುಕೂಲಕ್ಕಾಗಿ ಎಸಿಇಪಿ ಯೋಜನೆ ಅಡಿ ಕೊಳವೆ ಬಾವಿ ನಿರ್ಮಿಸಲಾಗಿತ್ತು.
ಇದನ್ನೂ ಓದಿ;- ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅರುಣ ಗೌಡ
ಅದಕ್ಕೆ ಮೋಟಾರ್ ಅಳವಡಿಸಲಾಗಿದೆ ಆದರೆ ಬಳಕೆಗೆ ಆಗಬೇಕಿದ್ದ ಕೊಳವೆ ಬಾವಿ ಬಳಕೆಗೆ ಬಾರದೆ ತುಕ್ಕು ಹಿಡಿಯು ತ್ತಿದೆ ಸಾವಿರಾರು ರೂ.ಬೆಲೆ ಹೊಂದಿ ರುವ ಮೋಟರ್ ಅಳವಡಿಸಿದ್ದು, ವಿದ್ಯುತ್ ಸಂಪರ್ಕವಿಲ್ಲದ ಕಾರಣ ಪ್ರಯೋಜನಕ್ಕೆ ಬಾರದಂತಾಗಿದೆ. ಕೊಳವೆಬಾವಿಗಳನ್ನು ಅವಲಂಬಿಸಿ ಬದುಕುತ್ತಿರುವ ಅಲ್ಲಿನ ಕೃಷಿಕರು ಕಾμ ಮೆಣಸು ಸೇರಿದಂತೆ ಅನೇಕ ಕೃಷಿ ಜಮೀನಿಗೆ ನೀರಿಲ್ಲದೆ ಪರದಾಡು ವಂತಾಗಿದೆ. ವಿದ್ಯುತ್ ಸಂಪರ್ಕಕ್ಕಾಗಿ ರೈತರು ಕಾದು ಕುಳಿತಿದ್ದಾರೆ. ಅಧಿಕಾರಿ ಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಈ ಬಗ್ಗೆ ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ. ಬಹುತೇಕ ಬಡ ರೈತ ಕುಟುಂಬಗಳಿಗೆ ಈ ರೀತಿ ಅನ್ಯಾಯವಾಗುತ್ತಿದೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಬಡವರಿಗೆ ಬಗ್ಗೆ ನಿರ್ಲಕ್ಷ್ಯ ಏಕೆ ಎಂಬುದು ಅವರ ಪ್ರಶ್ನೆಯಾಗಿದೆ. ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಇಲ್ಲ ವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದು ಎಂದು ರೈತರು ಎಚ್ಚರಿಸಿದ್ದಾರೆ.