Advertisement

ರಾಹುಲ್‌ ಗಾಂಧಿಗೆ ಪಾರೀಕರ್‌ ತರಾಟೆ

12:30 AM Jan 31, 2019 | |

  ಪಣಜಿ: ಆರೋಗ್ಯ ಹೇಗಿದೆ ಎಂದು ವಿಚಾರಿಸುವ ನೆಪದಲ್ಲಿ ತಮ್ಮ ಭೇಟಿ ವಿಚಾರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆಂದು ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್‌ ಆರೋಪಿಸಿದ್ದಾರೆ. ರಾಹುಲ್‌ಗೆ ಬುಧವಾರ 2 ಪುಟಗಳ ಪತ್ರ ಬರೆದಿರುವ ಅವರು, ಮಂಗಳವಾರ 5 ನಿಮಿಷಗಳ ಭೇಟಿಯಲ್ಲಿ ರಫೇಲ್‌ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಪ್ರಸ್ತಾಪವಾಗದಿದ್ದರೂ, ಆಗಿದೆ ಎಂದು ಹೇಳುವ ಮೂಲಕ ಸುಳ್ಳೇಕೆ ಹೇಳುತ್ತಿದ್ದೀರಿ ಎಂದು ರಾಹುಲ್‌ರನ್ನು ಪ್ರಶ್ನಿಸಿದ್ದಾರೆ. “ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ, ರಾಹುಲ್‌ ಗಾಂಧಿ ಯವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದೆ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿರುವುದು ಬೇಸರ ತಂದಿದೆ’ ಎಂದು ಬರೆದಿದ್ದಾರೆ. 

Advertisement

ಪಾರೀಕರ್‌ ಭೇಟಿ ಬಳಿಕ ಕೊಚ್ಚಿಗೆ ತೆರಳಿದ್ದ ರಾಹುಲ್‌, “ರಫೇಲ್‌ ಒಪ್ಪಂದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪಾರೀಕರ್‌ನನ್ನೊಂದಿಗೆ ಹೇಳಿದರು’ ಎಂದು ಹೇಳಿದ್ದರು. 

ಜೋಶ್‌, ಹೋಶ್‌ ಎರಡೂ ಇದೆ: ಈ ನಡುವೆ ಬುಧವಾರ ಮೂಗಿಗೆ ಪೈಪ್‌ ಹಾಕಿಕೊಂಡು, ಕುಳಿತೇ ಗೋವಾ ಬಜೆಟ್‌ ಮಂಡಿಸಿದ ಪಾರೀಕರ್‌ಪೂರ್ಣ ಪ್ರಮಾಣದ ಉತ್ಸಾಹ (ಜೋಶ್‌) ದಿಂದಲೇ ಬಜೆಟ್‌ ಮಂಡಿಸುತ್ತಿದ್ದೇನೆ. ಅದರ ಜತೆಗೆ ತಮಗೆ ಎಚ್ಚರಿಕೆಯ  (ಹೋಶ್‌) ಅರಿವೂ ಇದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next