Advertisement
ಸಭೆಯಲ್ಲಿ ಮಾತನಾಡಿದ ಶಾಸಕ ಸಂಭಾಜಿ ಪಾಟೀಲ,”ಉಪವಾಸ ಇದ್ದರೂ ಅಡ್ಡಿ ಇಲ್ಲ. ಆದರೆ ನಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ. ಮಹಾರಾಷ್ಟ್ರ ಪ್ರದೇಶ ಮೊದಲು ಹುಬ್ಬಳ್ಳಿವರೆಗೆ ಇತ್ತು ಎನ್ನುವ ಶಾಸನವಿದೆ. ಹೀಗಾಗಿ ಅಲ್ಲಿಯವರೆಗಿನ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು. ಕರ್ನಾಟಕದಲ್ಲಿ ಪ್ರಜಾಪ್ರಭುತ್ವವಿಲ್ಲ. ಹೀಗಾಗಿ ಶಾಸಕನಾಗ ನಾನು ನೋವು ಸಹಿಸಬೇಕಾಗಿದೆ’ ಎಂದರು.
Related Articles
ಎನ್ನುವ ಫಲಕ ಹಿಡಿದು ಘೋಷಣೆ ಕೂಗಿದರು.
Advertisement
ಆದರೆ ಸಭೆಯಲ್ಲಿ ಮೇಯರ್ ಸಂಜೋತಾ ಬಾಂದೇಕರ ಅವರನ್ನು ವೇದಿಕೆಗೆ ಆಹ್ವಾನಿಸಿದಾಗ ವೇದಿಕೆಗೆ ಬಾರದೆ ಜಾಣತನ ಮೆರೆದರು. ಕರ್ನಾಟಕದ ಸರ್ಕಾರ ಕ್ರಮ ಕೈಗೊಳ್ಳಬಹುದೆಂಬ ಭಯದಿಂದ ಅವರು ಈ ರೀತಿ ಮಾಡಿರಬಹುದೆಂಬ ಮಾತು ಕೇಳಿಬಂತು.ಜತೆಗೆ ರ್ಯಾಲಿಯಲ್ಲೂ ಅವರು ಕಪ್ಪು ಸೀರೆ ಧರಿಸಿರಲಿಲ್ಲ.
ನಾಡ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಎಂಇಎಸ್ ಬಗ್ಗೆ ಹೆಚ್ಚಿನ ಮಹತ್ವ ಕೊಡುವುದು ಬೇಡ. ಚುನಾವಣೆ ದೃಷ್ಟಿಯಿಂದ ಇಂಥ ಪುಂಡಾಟಿಕೆ ಮಾಡುವ ಎಂಇಎಸ್‌ಗೆ ಪ್ರಚಾರ ಕೊಡಬಾರದು. ಮೇಯರ್ ಇನ್ನಿತರ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕನ್ನಡದ ವಿರುದ್ಧ ಘೋಷಣೆ ಕೂಗಿದ್ದರೆ ಕ್ರಮ ಕೈಗೊಳ್ಳಲಾಗುವುದು.
– ರಮೇಶ ಜಾರಕಿಹೊಳಿ,
ಜಿಲ್ಲಾ ಉಸ್ತುವಾರಿ ಸಚಿವ ಮೆರವಣಿಗೆಯಲ್ಲಿ ಕಲ್ಲು ತೂರಾಟ-ಚಾಕು ಇರಿತ
ಪೇದೆ ಸೇರಿ 5ಕ್ಕೂ ಹೆಚ್ಚು ಜನರಿಗೆ ಗಾಯ; ದಾಂಧಲೆಯಲ್ಲಿ 10 ವಾಹನ ಜಖಂ
ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ಮಧ್ಯೆ ಉಂಟಾದ ಘರ್ಷಣೆ ಕಲ್ಲು ತೂರಾಟಕ್ಕೆ ಕಾರಣವಾಗಿ ಪೊಲೀಸ್ ಪೇದೆಗೆ ಚೂರಿ ಇರಿತ ಹಾಗೂ ವಾಹನಗಳು ಜಖಂಗೊಂಡ ಘಟನೆ ರಾಜ್ಯೋತ್ಸವ ಮೆರವಣಿಗೆ ವೇಳೆ ಬುಧವಾರ ಸಂಜೆ ನಡೆದಿದೆ. ಚೂರಿ ಇರಿತದಲ್ಲಿ ಪೇದೆ ಸೇರಿ ಐದಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಲ್ಲೂ ಹಲವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾರಿಗೆ ಸಂಸ್ಥೆ ಬಸ್ ಸೇರಿ 10ಕ್ಕೂ ಹೆಚ್ಚು ವಾಹನಗಳು ಹಾಗೂ, ಅಂಜುಮನ್ ಕಾಲೇಜು ಆವರಣದಲ್ಲಿರುವ ಕಟ್ಟಡಗಳು, ಹೊಟೇಲ್, ಗೃಹ ಫೈನಾನ್ಸ್ ಕಚೇರಿ ಹಾಗೂ ಎಸ್‌ಬಿಐ ಎಟಿಎಂಗಳು ಹಾನಿಗೀಡಾಗಿವೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು
ಬಂಧಿಸಿದ್ದಾರೆ. ಸಾಹಿಲ್ ಕೋಜಾ, ಅಲ್ತಾಫ್ ಮಕಾಂದಾರ್, ಅμÅàದಿ ಕೋತ್ವಾಲ್, ಅಮಿತ್ ಹಾಗೂ ಕರ್ನಿಂಗ್ ಬಂಧಿತರು. ಚಾಕು ಇರಿತದಲ್ಲಿ ಉತ್ತರ ಸಂಚಾರಿ ಠಾಣೆ ಹೆಡ್ ಕಾನ್ಸ್‌ಟೆಬಲ್ ಮಹಮ್ಮದ್ ಪಟೇಲ, ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಲಕ್ಕಪ್ಪ ಶೆಟ್ಟೆಪ್ಪ ಪೂಜೇರಿ, ಕೆ.ಕೆ. ಕೊಪ್ಪ ಗ್ರಾಮದ ಪರುಶರಾಮ ಬಸ್ಸಪ್ಪ ವಾಲೇಕರ, ಅಶೋಕ ಬಸವಣ್ಣಿ ವಂಟಮೂರಿ ಹಾಗೂ ವಂಡಗಾಂವಿಯ ಪ್ರವೀಣ ಮಹಾದೇವ ಶಿಂಧೆ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಾಗ ಪೊಲೀಸರು ತಕ್ಷಣ ಮಧ್ಯೆ ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಹಿನ್ನೆಲೆ: ನಗರದ ಕೋರ್ಟ್ ಆವರಣದ ಅಂಜುಮನ್ ಹಾಲ್ ಎದುರು ರಾಜ್ಯೋತ್ಸವ ಮೆರವಣಿಗೆಯಲ್ಲಿ ಡಾಲ್ಬಿ
ಹಾಡಿಗೆ ಕುಣಿಯುತ್ತ ಯುವಕರ ಗುಂಪು ಬಂದಿದ್ದು, ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. ಇದೇ ವೇಳೆ ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆಗ ಪರಸ್ಪರ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಆರಂಭವಾಯಿತು. ಕೆಲ ಕಿಡಿಗೇಡಿಗಳು ಅಂಜುಮನ್ ಹಾಲ್ ಒಳಗೆ ಓಡಿ ಹೋಗುತ್ತಿದ್ದಂತೆ ಅಲ್ಲಿಯೂ ಕಲ್ಲು ತೂರಾಟ ಮುಂದುವರಿಯಿತು. ಸಮೀಪದಲ್ಲೇ ಇದ್ದ ತುಮಕೂರು ತಟ್ಟೆ ಇಡ್ಲಿ ಹೋಟೇಲ್ ಮೇಲೂ ಕಲ್ಲು ತೂರಲಾಯಿತು. ಎಸ್‌ಬಿಐ ಎಟಿಎಂನಲ್ಲೂ ನೂರಾರು ಯುವಕರು ದಾಂಧಲೆ ಮಾಡಿ ಹಾನಿ ಮಾಡಿದರು. ಆಗ ಕೆಲ ದುಷ್ಕರ್ಮಿಗಳು ಚಾಕುವಿನಿಂದ ಕೆಲ ಯುವಕರಿಗೆ ಇರಿದು ಪರಾರಿಯಾಗಿದ್ದಾರೆ. ಬಿಗಿ ಬಂದೋಬಸ್ತ್
ಸದ್ಯ ನಗರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂಜುಮನ್ ಹಾಲ್ ಎದುರು ಸೇರಿ ನಗರದ ಬಹುತೇಕ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕಿಡಿಗೇಡಿಗಳನ್ನು ಬಂಧಿಸಲು ಶೋಧ ಕಾರ್ಯ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೆಲವರು ದಾಂಧಲೆ ನಡೆಸಿದ್ದಾರೆ ಎಂಬ ಅಂಶ ಮೇಲ್ನೋಟಕ್ಕೆ ತಿಳಿದು ಬಂದಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು.
– ಟಿ.ಜಿ. ಕೃಷ್ಣಭಟ್, ನಗರ
ಪೊಲೀಸ್ ಆಯುಕ್ತರು