ಬೀಜಿಂಗ್: “ನಾಯಕರು ಗಡಿಯಲ್ಲಿ ಶಾಂತಿ ಕಾಪಾಡುವ ಕುರಿತು ಒಲವು ಹೊಂದಿರುವಾಗ ಚೀನಾ ಸೇನೆ, ಕಾರ್ಪೆಟ್ ಅಡಿಯಲ್ಲಿ ಮುನ್ನುಗ್ಗಲು ಯತ್ನಿಸಬಾರದು’- ಹೀಗೆಂದು ಭಾರತ, ನೆರೆಯ ಕಮ್ಯುನಿಸ್ಟ್ ರಾಷ್ಟ್ರಕ್ಕೆ ಬುದ್ಧಿ ಹೇಳಿದೆ.
ಜಾಗತಿಕ ವ್ಯವಹಾರಗಳ ಭಾರತೀಯ ಮಂಡಳಿಯ ವರ್ಚುವಲ್ ಶೃಂಗದಲ್ಲಿ ಮಾತನಾಡಿದ, ಚೀನಾದಲ್ಲಿನ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ, “ಉಭಯ ರಾಷ್ಟ್ರಗಳ ನಿರ್ಣಾಯಕ ಒಪ್ಪಂದಗಳನ್ನು ಚೀನಾ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
“ಬಹು ಧ್ರುವೀಯ ಜಗತ್ತಿನಲ್ಲಿ ಒಪ್ಪಂದ ಮತ್ತು ಸಮಾಲೋಚನೆಗೂ ಮುನ್ನ ಯಾವ ರಾಷ್ಟ್ರವೂ ತನ್ನದೇ ಅಜೆಂಡಾ ಆಧಾರಿತ ನಿರ್ಣಯಕ್ಕೆ ಬರಬಾರದು. ಇತರರ ಅಭಿಪ್ರಾಯ ಅಲಕ್ಷಿಸಿ, ಸ್ವಹಿತಾಸಕ್ತಿ ಸ್ಥಾಪಿಸಲು ಯತ್ನಿಸಬಾರದು’ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಆಕ್ಸಿಜನ್ ಪೂರೈಕೆ ಮಾಡಲು ತುರ್ತು ಕ್ರಮ : JSW ಸ್ಟೀಲ್ ದಿನಕ್ಕೆ 400 ಟನ್ ಆಮ್ಲಜನಕ ಪೂರೈಕೆ
ಮತ್ತೆ ಕಿರಿಕ್: ಇನ್ನೊಂದೆಡೆ, ಎಲ್‌ಎಸಿ ಸನಿಹದ ಕ್ಸಿನ್‌ಜಿಯಾಂಗ್‌ನಲ್ಲಿ ಸುಧಾರಿತ ರಾಕೆಟ್ ಲಾಂಚರ್‌ಗಳನ್ನು ಚೀನಾ ನಿಯೋಜಿಸಿದೆ. ಈ ಪ್ರಾಂತ್ಯದ 17 ಸಾವಿರ ಅಡಿ ಎತ್ತರದ ಹಿಮಚ್ಛಾದಿತ ಜಾಗದಲ್ಲಿ ಫಿರಂಗಿ ದಳಗಳೊಂದಿಗೆ ಲಾಂಚರ್ ವ್ಯವಸ್ಥೆ ಸಿದ್ಧವಾಗಿದೆ ಎಂದು ಪಿಎಲ್‌ಎ ಹೇಳಿಕೊಂಡಿದೆ.