Advertisement

‘ಮಹಾ’ ಗಡಿ ರಸ್ತೆ ಮುಚ್ಚಿದ ಗ್ರಾಪಂ

07:39 PM Apr 26, 2021 | Team Udayavani |

ಕೋಹಳ್ಳಿ : ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೋಹಳ್ಳಿ ಗ್ರಾಮಕ್ಕೆ ಪ್ರವೇಶವಾಗುವ ಸಿಂಧೂರ- ತಾಂವಶಿ ತೋಟದ ವಸತಿ ರಸ್ತೆ, ಕೋಹಳ್ಳಿ-ಸಿಂಧೂರ, ಸಿಂಧೂರ-ಅಡಹಳ್ಳಟ್ಟಿ ಹಾಗೂ ಒಳಗಡೆ ಹೋಗುವ ಸಣ್ಣ ರಸ್ತೆಗಳನ್ನು ಮುಳ್ಳುಕಂಟಿ, ಕಲ್ಲು, ಮಣ್ಣು ಹಾಕಿ ಮಹಾರಾಷ್ಟ್ರದಿಂದ ಯಾವುದೇ ವಾಹನ ಹಾಗೂ ಸಾರ್ವಜನಿಕರು ಬರದಂತೆ ರಸ್ತೆಯನ್ನು ಐಗಳಿ ಠಾಣೆಯ ಪಿಎಸ್‌ಐ ಶಿವರಾಜ ನಾಯಿಕವಾಡಿ ನೇತೃತ್ವದಲ್ಲಿ ರವಿವಾರ ಬೆಳಗ್ಗೆ ಬಂದ್‌ ಮಾಡಲಾಯಿತು.

Advertisement

ಪಿಎಸ್‌ಐ ಶಿವರಾಜ ನಾಯಿಕವಾಡಿ ಮಾತನಾಡಿ, ಕಳೆದ ಒಂದು ವಾರದಿಂದ ಕೋಹಳ್ಳಿ ಚೆಕ್‌ಪೋಸ್ಟ್‌ಗೆ ಮಹಾರಾಷ್ಟ್ರದಿಂದ ಬರುವ ವಾಹನಗಳು ಬಾರದೇ ಬೇರೆ ಮಾರ್ಗಗಳ ಮೂಲಕ ಗ್ರಾಮ ಪ್ರವೇಶವಾಗುತ್ತಿರುವುದನ್ನು ಮನಗಂಡ ಪೊಲೀಸ್‌ ಇಲಾಖೆ ಇತರೆ ರಸ್ತೆಗಳನ್ನು ಗ್ರಾಪಂ ಸಹಕಾರದಿಂದ ಬಂದ್‌ ಮಾಡುತ್ತಿದೆ ಎಂದರು.

ಮಹಾರಾಷ್ಟ್ರದ ಜತ್ತ ತಾಲೂಕಿನಿಂದ ಸಿಂಧೂರ ಗ್ರಾಮದ ಮಾರ್ಗದಿಂದ, ಮಹಾರಾಷ್ಟ್ರದ ಉಮರಾಣಿ ಮಾರ್ಗದಿಂದ ರಾಮತೀರ್ಥ ಗ್ರಾಮದ ಮೂಲಕ ಕೋಹಳ್ಳಿ ಗ್ರಾಮಕ್ಕೆ ಜನ ಆಗಮಿಸುತ್ತಿದ್ದು, ಈ ಮಾರ್ಗಗಳು ಹಾಗೂ ಈ ಮಾರ್ಗಗಳ ಸಣ್ಣಪುಟ್ಟ ರಸ್ತೆಗಳನ್ನು ಜೆಸಿಬಿಯಿಂದ ಮುಳ್ಳುಕಂಟಿ, ಕಲ್ಲು, ಮಣ್ಣು ಹಾಕಿ ಸಂಪೂರ್ಣ ಬಂದ್‌ ಮಾಡಲಾಗಿದೆ. ಬರುವ ಜನರನ್ನು ಮರಳಿ ಕಳುಹಿಸಲಾಗುತ್ತಿದೆ ಎಂದರು. ಕೋಹಳ್ಳಿ ಗ್ರಾಪಂ ಅಧ್ಯಕ್ಷ ಮಹಾದೇವ ಬಿರಾದಾರ, ಗಣಪತಿ ಸಾವಂತ, ಗ್ರಾಪಂ ಸದಸ್ಯರಾದ ಮಾರುತಿ ಕೇಸ್ಕರ, ಸಂಗಪ್ಪ ಕರಿಗಾರ, ಲಕ್ಷ್ಮಣ ಉಮರಾಣಿ, ಅಪ್ಪಾಸಾಬ ಬಾಡಗಿ, ಪೊಲೀಸ್‌ ಪೇದೆ ಅಕºರ ಮುಜಾವರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next