Advertisement
ಪಾಸ್ ಪಡೆದುಕೊಂಡವರು ಕಡ್ಡಾಯವಾಗಿ 7 ದಿನಗಳಿಗೊಮ್ಮೆ ಆ್ಯಂಟಿಜೆನ್ ಟೆಸ್ಟ್‌ಗೆ ಒಳಗಾಗಿ ನೆಗೆಟಿವ್ ಪ್ರಮಾಣಪತ್ರ ಹಾಜರುಪಡಿಸಬೇಕು ಎಂಬ ಹಿಂದಿನ ನಿಯಮವನ್ನು ಪರಿಷ್ಕರಿಸಿ 21 ದಿನಗಳ ಬಳಿಕ ತಪಾಸಣೆ ಮಾಡಿಸಿ ಪಾಸ್ ನವೀಕರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಬಿಪಿಎಲ್ ಪಟ್ಟಿಯಲ್ಲಿರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಉಚಿತವಾಗಿರುತ್ತದೆ. ಇತರರು ಸ್ವಂತ ವೆಚ್ಚದಲ್ಲಿ, ಜಿಲ್ಲೆಯಲ್ಲಿ ಯಾ ಕರ್ನಾಟಕದ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಬೇಕು. ಸರಕಾರಿ ವ್ಯವಸ್ಥೆಯಲ್ಲಿ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡು ಪ್ರದೇಶಗಳಲ್ಲಿ ತಪಾಸಣೆ ಸೌಲಭ್ಯ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.
ಪ್ರತಿನಿತ್ಯ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳುವವರು ಖಾಸಗಿ ವಾಹನಗದಲ್ಲಿ ಸಂಚರಿಸುವುದಿದ್ದರೆ ಆ ವಾಹನಗಳಲ್ಲಿ ಈ ಸಂಬಂಧ ಸ್ಟಿಕ್ಕರ್ ಲಗತ್ತಿಸಬೇಕು ಎಂದು ಜಿಲ್ಲಾ ಎಸ್‌ಪಿ ಡಿ. ಶಿಲ್ಪಾ ತಿಳಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಬಗ್ಗೆ ಹೆಚ್ಚುವರಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದರು.