ಸೊಲ್ಲಾಪುರ: ಮಹಾರಾಷ್ಟ್ರ ಗಡಿಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಶಿಕ್ಷಕರಿಗೆ ಪಾಲಕರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಿಕ್ಷಣ ಕೆಂದ್ರ ಪ್ರಮುಖ ಮಹಾಂತೇಶ ಮಾಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜತ್ತ ತಾಲೂಕಿನ ಸಂಖ ಪಟ್ಟಣದ ಸಿಳೀನವಸ್ತಿ ಶಾಲೆಯ “ಶಾಲಾ ಪ್ರಾರಂಭೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿಳೀನವಸ್ತಿ ಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಶಾಲಾ ಕೊಠಡಿಗೆ ಅನುದಾನ ನೀಡಿದ್ದು ಸಂತೋಷ ತಂದಿದೆ. ಈ ಶಾಲೆ ಬಹಳ ಹಳೆಯದು. ಇಲ್ಲಿ ಕಲಿತ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಶಾಲೆಗಳ ಉನ್ನತೀಕರಣಕ್ಕಾಗಿ ಪಾಲಕರು ಸ್ವತಃ ಮುಂದೆ ಬಂದು ಶಾಲೆಗಳನ್ನು ಉಳಿಸಬೇಕಿದೆ ಎಂದು ಪಾಲಕರಿಗೆ ಕರೆ ನೀಡಿದರು.
ಮೊದಲನೆ ತರಗತಿ, ನಾಲ್ಕನೆಯ ತರಗತಿ ಮಕ್ಕಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಶಾಲೆಗೆ ಬರಮಾಡಿಕೊಳ್ಳಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಶಾಲಾ ಕೊಠಡಿಗೆ ಅಡಿಗಲ್ಲು ನೆರವೇರಿಸಲಾಯಿತು.
“ಯುಥ್ ಫಾರ್ ಜತ್ತ’ ಸಂಸ್ಥೆಯು ಶಾಲೆಗೆ ಕಾಣಿಕೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಚಾಲನೆ ನೀಡಲಾಯಿತು. ಜತೆಗೆ ನಾಲ್ಕನೆ ತರಗತಿ ವಿದ್ಯಾರ್ಥಿಗಳ ಬಿಳ್ಕೊàಡುವ ಸಮಾರಂಭವು ನೆರವೇರಿತು. ಮುಖಂಡ ಚೆನ್ನಪ್ಪಾ ಕನಮಡಿ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಅಪ್ಪಾಸಾಹೇಬ್ ಅಂಕಲಗಿ, ರಂಜಾನ ಮಕಾನದಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಅಂಕಲಗಿ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದರು. ಸುರೇಶ್ ವಜ್ರಶೆಟ್ಟಿ ಸಾವಿತ್ರಿ ಬಾಯಿ ಫುಲೆ ಪ್ರತಿಮೆಗೆ ಪೂಜೆ ಸಲ್ಲಿಸಿದರು. ರಮೇಶ ಕನಮಡಿ, ಮಹಾಂತೇಶ ಸಿಳೀನ್ ಮತ್ತು ನಾಲ್ಕನೆ ತರಗತಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಗಣ್ಣಾ ಸಿಳೀನ್, ಉಪಾಧ್ಯಕ್ಷ ರಮೇಶ ಕನಮಡಿ, ಅಪ್ಪಾಸಾಹೇಬ ಮಕಾನದಾರ, ಶ್ರೀಶೈಲ ವಜ್ರಶೆಟ್ಟಿ, ರವಿ ಕನಮಡಿ, ನಿಂಗೊಂಡಾ ಸಿಳೀನ್, ಅಮಸಿದ್ಧ ಲಿಗಾಡೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಿಳೀನವಸ್ತಿ ಪಾಲಕರು ಹಾಜರಿದ್ದರು. ಮುಖ್ಯಶಿಕ್ಷಕ ಮಲಿಕಜಾನ್ ಶೇಖ, ಅಧ್ಯಕ್ಷ ಸಂಗಪ್ಪಾ ಸಿಳೀನ್, ರಮೇಶ ಕನಮಡಿ, ಮೀನಾಕ್ಷಿ ಮುಂಜಾಣ, ಅಂಗನವಾಡಿ ಸೇವಿಕೆಯರಾದ ಅನ್ನಪೂರ್ಣ ಮಾಳಿ, ಕಸ್ತೂರಿ ಹಾಗೂ ರಾಮಣ್ಣಾ ಕನಮಡಿ, ರಾಜಕುಮಾರ ಅಂಕಲಗಿ, ಅಡವೆಪ್ಪಾ ಸಿಳೀನ್, ಮಹಾಂತೇಶ ಸಿಳೀನ್, ಶಿವಶಂಕರ ಅಂಕಲಗಿ ಶ್ರಮಿಸಿದರು. ಮಲಿಕಜಾನ್ ಶೇಖ ನಿರೂಪಿಸಿ, ಅನ್ನಪೂರ್ಣ ಮಾಳಿ ವಂದಿಸಿದರು.