Advertisement

Border-Gavaskar Trophy: ಆಸ್ಟ್ರೇಲಿಯ ತಂಡದಿಂದ ಕ್ಯಾಮರಾನ್‌ ಗ್ರೀನ್‌ ಹೊರಕ್ಕೆ

12:21 AM Oct 15, 2024 | Team Udayavani |

ಮೆಲ್ಬರ್ನ್: ಗಾಯದ ಸಮಸ್ಯೆಯಿಂದಾಗಿ ಆಸ್ಟ್ರೇಲಿಯದ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಭಾರತ ವಿರುದ್ಧ ನಡೆಯಲಿರುವ ಬಾರ್ಡರ್‌-ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ.

Advertisement

ಬೆನ್ನುಮೂಳೆಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರು ಅದರಿಂದ ಚೇತರಿಸಿಕೊಳ್ಳಲು ಆರು ತಿಂಗಳ ವಿಶ್ರಾಂತಿಯ ಅಗತ್ಯವಿದೆ. 25ರ ಹರೆಯದ ಅವರು ಕಳೆದ ತಿಂಗಳ ಇಂಗ್ಲೆಂಡ್‌ ಪ್ರವಾಸದ ವೇಳೆ ಬೆನ್ನುಮೂಳೆಯಲ್ಲಿ ನೋವಿನ ಸಮಸ್ಯೆಯಿರುವುದು ಪತ್ತೆಯಾಗಿತ್ತು. ಈ ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆಬಳಿಕ ಪೂರ್ಣವಾಗಿ ಚೇತರಿಸಿಕೊಳ್ಳಲು ಆರು ತಿಂಗಳ ಅಗತ್ಯವಿದೆ.

ಹೀಗಾಗಿ ಅವರು ಮುಂಬರುವ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲದೇ ಶ್ರೀಲಂಕಾ ಪ್ರವಾಸ, ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿಯಲಿದ್ದಾರಲ್ಲದೇ ಐಪಿಎಲ್‌ನಲ್ಲೂ ಆಡುವುದು ಅನುಮಾನ ಎನ್ನಲಾಗಿದೆ. ಈ ಹಿಂದೆ ಜಸ್‌ಪ್ರೀತ್‌ ಬುಮ್ರಾ, ಜೇಮ್ಸ್‌ ಪ್ಯಾಟಿನ್ಸನ್‌, ಜಾಸನ್‌ ಬೆಹ್ರೆನ್‌ಡಾರ್ಫ್‌ ಮತ್ತು ಬೆನ್‌ ದ್ವಾರ್ಶು ಯಿಸ್‌ ಸಹಿತ ಹಲವು ವೇಗಿಗಳು ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ಹಿನ್ನೆಲೆಯಲ್ಲಿ ಗ್ರೀನ್‌ ಕೂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದ್ದಾರೆ. ನ್ಯೂಜಿಲ್ಯಾಂಡಿನ ಸರ್ಜನ್‌ಗಳಾದ ಗ್ರಹಾಂ ಇಂಗ್ಲಿಷ್‌ ಮತ್ತು ರೊವನ್‌ ಶೌಂಟೆನ್‌ ಅವರು ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ದೀರ್ಘ‌ ಸಮಾಲೋಚನೆಯ ಬಳಿಕ ಸಮಸ್ಯೆಯ ನಿವಾರಣೆ, ದೇಹವನ್ನು ಸ್ಥಿರಗೊಳಿಸಲು ಮತ್ತು ಭವಿಷ್ಯದಲ್ಲಿ ಇಂತಹ ಸಮಸ್ಯೆ ಮರುಕಳಿಸುವ ಸಾಧ್ಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next