Advertisement

ಬೋಪಣ್ಣ ಜೋಡಿಗೆ ಸೋಲು

02:50 AM Jul 08, 2017 | Team Udayavani |

ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವ್ಯಾಸೆಲಿನ್‌ ಜೋಡಿ 6-7(6-8), 3-6, 7-6(6-5), 3-6ರಿಂದ ಇಂಗ್ಲೆಂಡ್‌ ಜೋಡಿ ಕೆನ್‌ ಸ್ಕಾಪ್‌ಸ್ಕಿ ಮತ್ತು ನೀಲ್‌ ಸ್ಕಾಪ್‌ಸ್ಕಿ ವಿರುದ್ಧ ಸೋಲುಂಡರು. ಮೊದಲನೇ ಮತ್ತು 3ನೇ ಸೆಟ್‌ನಲ್ಲಿ ಎರಡೂ ಜೋಡಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು.

Advertisement

ರಾಜ, ಶರಣ್‌ ಜೋಡಿಗೂ ಸೋಲು: ಭಾರತೀಯ ಡಬಲ್ಸ್‌ ಜೋಡಿ ಪುರವ್‌ ರಾಜ ಮತ್ತು ದಿವಿಜ್‌ ಶರಣ್‌ 3 -6, 4-6, 6-4, 7-6(8-6), 8-10 ರಿಂದ ದಕ್ಷಿಣ ಆಫ್ರಿಕಾದ ರೇವನ್‌ ಕ್ಲಾಸೆನ್‌ ಮತ್ತು ಅಮೆರಿಕದ ರಾಜೀವ್‌ ರಾಮ್‌ ವಿರುದ್ಧ ಹೋರಾಟದ ಸೋಲು ಕಂಡರು. ನಿರ್ಣಾಯಕವಾಗಿದ್ದ 5ನೇ ಸೆಟ್‌ನಲ್ಲಿ ತೀವ್ರ ಸ್ಪರ್ಧೆ ಕಂಡುಬಂತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ಜೋಡಿ ವಶಪಡಿಸಿಕೊಂಡು ಪ್ರೀಕ್ವಾರ್ಟರ್‌ಗೆ ಪ್ರವೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next