Advertisement

ಬೋಪಣ್ಣ ಜತೆಗಾರ ಪೇಸ್‌ ಅಲ್ಲ, ದಿವಿಜ್‌!

03:13 PM Jul 02, 2018 | |

ಹೊಸದಿಲ್ಲಿ: ಕುತೂಹಲಕರ ಬೆಳವಣಿಗೆಯೊಂದರಲ್ಲಿ ಏಶ್ಯಾಡ್‌ ಟೆನಿಸ್‌ ಪುರುಷರ ಡಬಲ್ಸ್‌ ವಿಭಾಗಕ್ಕೆ ಭಾರತದಿಂದ ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್‌ ಜೋಡಿಯನ್ನು ಕಣಕ್ಕಿಳಿಸಲು ಭಾರತೀಯ ಟೆನಿಸ್‌ ಸಂಸ್ಥೆ (ಎಐಟಿಎ) ತೀರ್ಮಾನಿಸಿದೆ. ರಾಮ್‌ ಕುಮಾರ್‌ ರಾಮನಾಥನ್‌ ಜತೆಗೆ ಪ್ರಜ್ಞೆಶ್‌ ಗುಣೇಶ್ವರನ್‌ ಅವರನ್ನು ಆಡಿಸಲು ನಿರ್ಧರಿಸಲಾಗಿದೆ. ಆದರೆ ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಅವರನ್ನು ಮಿಶ್ರ ಡಬಲ್ಸ್‌ ವಿಭಾಗಕ್ಕೆ ಆಯ್ಕೆ ಮಾಡಿದ್ದು, ತಾತ್ಕಾಲಿಕವಾಗಿ ಅಂಕಿತಾ ರೈನಾರನ್ನು ಜತೆಗಾರ್ತಿಯಾಗಿ ಹೆಸರಿಸಲಾಗಿದೆ. ಪೇಸ್‌ ಫಾರ್ಮ್, ಲಭ್ಯತೆ ಮತ್ತಿತರ ಸಂಗತಿಗಳು ಇನ್ನೂ ಬಗೆಹರಿಯದಿರುವುದರಿಂದ ಈ ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಐಟಿಎ, ಜೂನ್‌ 30ರೊಳಗೆ ಆಟಗಾರರ ಪಟ್ಟಿ ಯನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ ಸಲ್ಲಿಸಬೇಕಿದ್ದರಿಂದ ಎಐಟಿಎ ಈ ತೀರ್ಮಾನ ಕೈಗೊಂಡಿದೆ. ಆದರೆ ಮುಂದೆ ಆಟಗಾರರ ಅಭಿಪ್ರಾಯಗಳನ್ನು ಪಡೆದ ಅನಂತರ, ಕ್ರೀಡಾ ಕೂಟದ ಡ್ರಾ ಪ್ರಕಟಗೊಳ್ಳುವ ಮುನ್ನ ಹೊಸ ಜೋಡಿಗಳನ್ನು ಮತ್ತೂಮ್ಮೆ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Advertisement

ಈ ನಡುವೆ ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಅವರಿಗೆ ಜೋಡಿಯಾಗಿ ಯಾರನ್ನು ಆರಿಸಬೇಕು ಎಂಬ ತೂಗುಯ್ನಾಲೆಯಲ್ಲಿ ಸಂಸ್ಥೆ ಇದ್ದು, ಈ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಇನ್ನೊಂದು ಮಿಶ್ರ ಡಬಲ್ಸ್‌ನಲ್ಲಿ ಬೋಪ ಣ್ಣ-ಪ್ರಾರ್ಥನಾ ತೋಂಬರೆ ಜೋಡಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next