Advertisement

Australian Open: ಕ್ವಾರ್ಟರ್‌ ಫೈನಲ್‌ಗೆ ಬೋಪಣ್ಣ-ಎಬ್ಡೆನ್‌

10:58 PM Jan 22, 2024 | Team Udayavani |

ಮೆಲ್ಬರ್ನ್: ರೋಹನ್‌ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್‌ ಜತೆಗಾರ ಮ್ಯಾಥ್ಯೂ ಎಬ್ಡೆನ್‌ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಸೋಮವಾರದ ಜಿದ್ದಾಜಿದ್ದಿ ಪಂದ್ಯದಲ್ಲಿ ಇವರು ನೆದರ್ಲೆಂಡ್ಸ್‌ನ ವೆಸ್ಲಿ ಕೂಲೋಫ್ ಮತ್ತು ಕ್ರೊವೇಶಿಯಾದ ನಿಕೋಲ ಮೆಕ್ಟಿಕ್‌ ಜೋಡಿಯನ್ನು 7-6 (10-8), 7-6 (7-4) ಅಂತರ ದಿಂದ ಪರಾಭವಗೊಳಿಸಿದರು. ಎರಡೂ ಸೆಟ್‌

Advertisement

ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟ ಕಾರಣ ಪಂದ್ಯ ಇಲ್ಲಿ ಯಾರೂ ಗೆಲ್ಲಬಹುದಾಗಿದ್ದ ಸಾಧ್ಯತೆ ಇತ್ತು.

ಇಂಡೋ-ಆಸ್ಟ್ರೇಲಿಯನ್‌ ಜೋಡಿ ಕ್ವಾರ್ಟರ್‌ ಫೈನಲ್‌ನಲ್ಲಿ ಆರ್ಜೆಂಟೀನಾದ 6ನೇ ಶ್ರೇಯಾಂಕದ ಮ್ಯಾಕ್ಸಿಮೊ ಗೊಂಝಾಲೆಝ್- ಆ್ಯಂಡ್ರೆಸ್‌ ಮಾಲ್ಟೆನಿ ವಿರುದ್ಧ ಆಡಲಿದ್ದಾರೆ.

ಪುರುಷರ ಸಿಂಗಲ್ಸ್‌
ಕಾರ್ಲೋಸ್‌ ಅಲ್ಕರಾಜ್‌, ಡ್ಯಾನಿಲ್‌ ಮೆಡ್ವೆಡೇವ್‌, ಹ್ಯೂಬರ್ಟ್‌ ಹುರ್ಕಾಜ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಅಲ್ಕರಾಜ್‌ ಸರ್ಬಿಯಾದ ಮಿಯೋಮಿರ್‌ ಕೆಮನೋವಿಕ್‌ ವಿರುದ್ಧ 6-4, 6-4, 6-0 ಅಂತರದ ಜಯ ಸಾಧಿಸಿದರು. ಇವರ ಮುಂದಿನ ಎದುರಾಳಿ ಅಲೆಕ್ಸಾಂಡರ್‌ ಜ್ವೆರೇವ್‌.

Advertisement

Udayavani is now on Telegram. Click here to join our channel and stay updated with the latest news.

Next