ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆಯುಳ್ಳ 4.91 ಲಕ್ಷ ಮಂದಿಗೆ ಜ.10ರಿಂದ ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ನೀಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹಾಗೆಯೇ ಮುನ್ನೆ ಚ್ಚ ರಿಕೆ ಡೋಸ್ ಪಡೆ ದ ವ ರಿಗೆ ಮತ್ತೂಂದು ಡೋಸ್ ನೀಡುವ ಚಿಂತ ನೆ ಯನ್ನೂ ನಡೆ ಸ ಲಾ ಗಿದೆ. 60 ವರ್ಷ ಮೇಲ್ಪಟ್ಟ 75.65 ಲಕ್ಷ ಫಲಾನುಭವಿ ಗಳಿದ್ದು, ಅವರಲ್ಲಿ ಆರೋಗ್ಯ ಸಮಸ್ಯೆಯುಳ್ಳ 10,962 ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್ ಪಡೆಯುವ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿ ದಂತೆ 7,20,033 ಆರೋಗ್ಯ ಕಾರ್ಯಕರ್ತರು ಎರಡು ಡೋಸ್ ಲಸಿಕೆಯನ್ನು ಪಡೆ ದಿ ದ್ದಾರೆ.
ಇದರಲ್ಲಿ 9 ತಿಂಗಳು ಪೂರ್ಣಗೊಳಿಸಿದ 3,76,243 ಮಂದಿ ಮುನ್ನೆಚ್ಚರಿಕೆ ಮೂರನೇ ಡೋಸ್ ಪಡೆಯುವ ಅರ್ಹತೆ ಪಡೆದುಕೊಂಡಿದ್ದಾರೆ. ಉಳಿದಂತೆ, 8,91,831 ಮುಂಚೂಣಿ ಕಾರ್ಯಕರ್ತರು ಎರಡೂ ಡೋಸ್ ಪಡೆ ದಿ ದ್ದು, ಇವರಲ್ಲಿ 1,03,796 ಮಂದಿ ಮಾತ್ರ 3ನೇ ಡೋಸ್ ಪಡೆಯುವ ಅರ್ಹತೆ ಹೊಂದಿದ್ದಾರೆ. ಅದೇ ಲಸಿ ಕೆ ವಿತರಣೆ: ಈ ಮೊದಲು ಯಾವ ಲಸಿಕೆ ಪಡೆ ದಿ ರು ತ್ತಾರೋ ಅದೇ ಲಸಿ ಕೆ ಯನ್ನು ಬೂಸ್ಟರ್ ಅಥವಾ ಮುನ್ನೆ ಚ್ಚ ರಿಕೆ ಡೋಸ್ ಆಗಿ ನೀಡ ಲಾ ಗು ತ್ತದೆ. ಕೊವಿ ಶೀಲ್ಡ್ ಪಡೆ ದ ವ ರಿಗೆ ಕೊವಿ ಶೀಲ್ಡ್, ಕೊವ್ಯಾ ಕ್ಸಿನ್ ಪಡೆ ದ ವ ರಿಗೆ ಅದೇ ಲಸಿಕೆ ನೀಡ ಲಾ ಗು ತ್ತದೆ.
ಆಯಾ ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಮೊಬೈಲ್, ಆಧಾರ್ ಕಾರ್ಡ್ ಮೂಲಕ ನೋಂದಣಿ ಮಾಡಿಕೊಂಡು ಲಸಿಕೆಯನ್ನು ಉಚಿತವಾಗಿ ಪಡೆಯ ಬಹುದಾಗಿದೆ. ಅರ್ಹ ಫಲಾ ನು ಭ ವಿ ಗ ಳಿಗೆ ಮೊಬೈಲ್ ಮೂಲಕ ಸಂದೇಶ ಬರ ಲಿ ದೆ. ಮತ್ತೂಂದು ಡೋಸ್ ಲಸಿಕೆ?: ಮುನ್ನೆಚ್ಚರಿಕೆ ಡೋಸ್ ಪಡೆ ದ ವರಿಗೆ ಇನ್ನೊಂದು ಡೋಸ್ ಪಡೆಯುವ ಅವಕಾಶವೂ ಇದೆ.
ಆದರೆ, ಒಮ್ಮೆ ಬೂಸ್ಟರ್ ಡೋಸ್ ಪಡೆದರೆ ಮತ್ತೆ ಇತರೆ ಲಸಿಕೆ ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೊರೊನಾ ಪಾಸಿಟಿವ್ ಬಂದ ಮೂರು ತಿಂಗಳ ಒಳಗೆ ಫಲಾನುಭವಿಗಳು ಕೊರೊನಾ ಮೂರನೇ ಡೋಸ್ ಲಸಿಕೆ ಪಡೆಯುವಂತಿಲ್ಲ. ಯಾವುದೇ ತರಹ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಐಸಿಯು ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 8 ವಾರಗಳ ಬಳಿಕವಷ್ಟೇ ಲಸಿಕೆ ಪಡೆಯಬಹುದಾಗಿದೆ.