Advertisement
18 ರಿಂದ 59 ವಯೋಮಾನದಲ್ಲಿ ಬಂಟ್ವಾಳ ತಾಲೂಕಿನಲ್ಲಿ 1,77,374 ಮಂದಿಯ ಪೈಕಿ 2,299 ಲಸಿಕೆ ಪಡೆದಿದ್ದು ಶೇ. 1.30, ಬೆಳ್ತಂಗಡಿ ತಾಲೂಕಿನಲ್ಲಿ 1,10,088 ಮಂದಿಯ ಪೈಕಿ 1,364 ಮಂದಿ ಲಸಿಕೆ ಪಡೆದು ಶೇ. 1.24 ಶೇ., ಮಂಗಳೂರಿನಲ್ಲಿ 5,17,187 ಮಂದಿಯ ಪೈಕಿ 18,953 ಮಂದಿ ಲಸಿಕೆ ಪಡೆದು ಶೇ. 3.66., ಪುತ್ತೂರಿನಲ್ಲಿ 1,36,549 ಮಂದಿಯ ಪೈಕಿ 7,920 ಮಂದಿ ಲಸಿಕೆ ಪಡೆದು ಶೇ. 5.80, ಸುಳ್ಯದಲ್ಲಿ 64,274 ಮಂದಿಯ ಪೈಕಿ 2,731 ಮಂದಿ ಲಸಿಕೆ ಪಡೆದು ಶೇ. 4.25 ಪ್ರಗತಿ ದಾಖಲಾಗಿದೆ.
Related Articles
Advertisement
ಪ್ರಂಟ್ ಲೈನ್ ವರ್ಕರ್ ವಿಭಾಗದಲ್ಲಿ ಬಂಟ್ವಾಳ ತಾಲೂಕಿನಲ್ಲಿ 1,658 ಮಂದಿಯ ಪೈಕಿ 981 ಲಸಿಕೆ ಪಡೆದಿದ್ದು ಶೇ. 59.17, ಬೆಳ್ತಂಗಡಿ ತಾಲೂಕಿನಲ್ಲಿ 1,159 ಮಂದಿಯ ಪೈಕಿ 575 ಮಂದಿ ಲಸಿಕೆ ಪಡೆದು ಶೇ. 49.61, ಮಂಗಳೂರಿನಲ್ಲಿ 10,577 ಮಂದಿಯ ಪೈಕಿ 6,943 ಮಂದಿ ಲಸಿಕೆ ಪಡೆದು ಶೇ. 65.64, ಪುತ್ತೂರಿನಲ್ಲಿ 2,909 ಮಂದಿಯ ಪೈಕಿ 2,356 ಮಂದಿ ಲಸಿಕೆ ಪಡೆದು ಶೇ. 80.99, ಸುಳ್ಯದಲ್ಲಿ 741 ಮಂದಿಯ ಪೈಕಿ 508 ಮಂದಿ ಲಸಿಕೆ ಪಡೆದು ಶೇ. 68.56 ಪ್ರಗತಿ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟಾರೆ ಶೇ. 66.67 ಪ್ರಗತಿ ಕಂಡಿದೆ.
ಕಂದಾಯ, ಪೊಲೀಸ್ ವಿಭಾಗ
ಪೊಲೀಸ್, ರಕ್ಷಣಾ, ಕಂದಾಯ ಇಲಾಖೆಗೆ ಸಂಬಂಧಿಸಿ ಬಂಟ್ವಾಳ ತಾಲೂಕಿನಲ್ಲಿ 2,874 ಮಂದಿಯ ಪೈಕಿ 2,072 ಲಸಿಕೆ ಪಡೆದಿದ್ದು ಶೇ. 72.09 ಶೇ., ಬೆಳ್ತಂಗಡಿ ತಾಲೂಕಿನಲ್ಲಿ 1,916 ಮಂದಿಯ ಪೈಕಿ 1,367 ಮಂದಿ ಲಸಿಕೆ ಪಡೆದಿದ್ದಾರೆ. ಮಂಗಳೂರಿನಲ್ಲಿ 30,171 ಮಂದಿಯ ಪೈಕಿ 20,314 ಮಂದಿ ಲಸಿಕೆ ಪಡೆದು ಶೇ. 67.33, ಪುತ್ತೂರಿನಲ್ಲಿ 2,337 ಮಂದಿಯ ಪೈಕಿ 1635 ಮಂದಿ ಲಸಿಕೆ ಪಡೆದು ಶೇ. 69.96 ಶೇ., ಸುಳ್ಯದಲ್ಲಿ 3085 ಮಂದಿಯ ಪೈಕಿ 2480 ಮಂದಿ ಲಸಿಕೆ ಪಡೆದು ಶೇ. 80.39 ಪ್ರಗತಿ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಶೇ. 69.01 ಪ್ರಗತಿ ದಾಲಾಗಿದೆ.
ಅರ್ಹತೆ ಇದ್ದರೂ ಲಸಿಕೆ ಪಡೆದಿಲ್ಲ
ಜಿಲ್ಲೆಯಲ್ಲಿ 18-59 ವಯೋಮಾನದವರು 9,72,205. 60 ವರ್ಷ ಮೇಲ್ಪಟ್ಟವರಲ್ಲಿ 1,72,011, ಫ್ರಂಟ್ ಲೈನ್ ವರ್ಕರ್ನಲ್ಲಿ 5,681, ಎಚ್ ಸಿಡಬ್ಲ್ಯುದಲ್ಲಿ 12,515 ಮಂದಿ ಬೂಸ್ಟರ್ ಲಸಿಕೆ ಪಡೆ ಯಲು ಅರ್ಹತೆ ಹೊಂದಿದ್ದು, ಹಲವು ಮಂದಿ ಲಸಿಕೆ ಪಡೆದುಕೊಳ್ಳಲು ಬಾಕಿ ಇದ್ದಾರೆ ಎನ್ನುತ್ತಿದೆ ಅಂಕಿ ಅಂಶ.
ಉಚಿತ ಲಸಿಕೆ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್ ನಿರೋಧಕ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಕೇಂದ್ರ ಈಗಾಗಲೇ ಅನುಮತಿ ನೀಡಿದೆ. ಎಲ್ಲರಿಗೂ ಉಚಿತ ಲಸಿಕೆ ನಿಗದಿಗೊಳಿಸಲಾಗಿದೆ. ಸಾರ್ವಜನಿಕರು 2ನೇ ಡೋಸ್ ಲಸಿಕೆ ಪಡೆದು 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಬಹುದು. –ಡಾ| ದೀಪಕ್ ಕುಮಾರ್, ಆರೋಗ್ಯಾಧಿಕಾರಿ, ಪುತ್ತೂರು ತಾಲೂಕು.