Advertisement

Covid: ಸದ್ಯ ಬೂಸ್ಟರ್‌ ಡೋಸ್‌ ಅಗತ್ಯವಿಲ್ಲ- ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ

09:54 PM Dec 24, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಳ ಮತ್ತು ಜೆಎನ್‌.1 ಉಪತಳಿ ಪತ್ತೆಯಾಗಿದ್ದರೂ ಸದ್ಯಕ್ಕೆ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

Advertisement

ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷ ದಾಟಿರುವ ಹಿರಿಯ ನಾಗರಿಕರು ಮತ್ತು ಹೆಚ್ಚಿನ ಅಪಾಯ ಇರುವ ರೋಗಿಗಳು ಈವರೆಗೆ ಮೂರನೇ ಡೋಸ್‌ ಲಸಿಕೆ ಪಡೆಯದೆ ಇದ್ದರೆ, ಅಂಥವರು ಮಾತ್ರ ಬೂಸ್ಟರ್‌ ಡೋಸ್‌ ಪಡೆಯಬಹುದು. ಇತರ ಸಾರ್ವಜನಿಕರು ಸದ್ಯಕ್ಕಂತೂ ನಾಲ್ಕನೇ ಡೋಸ್‌ ಲಸಿಕೆ ಪಡೆಯಬೇಕಾದ ಅಗತ್ಯವಿಲ್ಲ. ಆತಂಕಕ್ಕೆ ಒಳಗಾಗದೆ ಎಚ್ಚರಿಕೆಯಿಂದಿದ್ದರೆ ಸಾಕು ಎಂದು ಭಾರತದ ಸಾರ್ಸ್‌-ಕೋವ್‌-2 ಜೆನೋಮಿಕ್ಸ್‌ ಕನ್ಸೋರ್ಟಿಯಂ ಮುಖ್ಯಸ್ಥ ಎನ್‌.ಕೆ. ಅರೋರಾ ಹೇಳಿದ್ದಾರೆ.

ಈ ನಡುವೆ ಶನಿವಾರದಿಂದ ರವಿವಾರದ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 656 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,742ಕ್ಕೆ ಏರಿದೆ. ಕೇರಳದಲ್ಲಿ ಒಬ್ಬ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next