Advertisement

ಜು.15ರಿಂದ 75 ದಿನ ಬೂಸ್ಟರ್‌ ಡೋಸ್‌ ಉಚಿತ: ಕೇಂದ್ರ ಸರ್ಕಾರ ಘೋಷಣೆ

10:13 PM Jul 13, 2022 | Team Udayavani |

ನವದೆಹಲಿ/ಬೆಂಗಳೂರು: ನೀವು ಇನ್ನೂ ಕೊರೊನಾ ಬೂಸ್ಟರ್‌ ಡೋಸ್‌ ಪಡೆದಿಲ್ಲವೇ? ನಾಳೆಯೇ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ತೆರಳಿ ಉಚಿತ ಲಸಿಕೆ ಪಡೆಯಿರಿ. ಇದು ದೇಶವಾಸಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಆಫ‌ರ್‌.
ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಜು.15ರಿಂದ 75 ದಿನಗಳ ಕಾಲ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್‌ ವಿತರಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಬುಧವಾರ ಘೋಷಿಸಿದ್ದಾರೆ.

Advertisement

“ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಉಚಿತ ಬೂಸ್ಟರ್‌ ಡೋಸ್‌ ಲಭ್ಯವಿರಲಿದೆ. 18ರಿಂದ 59ರ ವಯೋಮಾನದವರು ಈ ವಿಶೇಷ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿಯವರು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದು, ಇದು ಕೊರೊನಾ ವಿರುದ್ಧದ ಭಾರತದ ಹೋರಾಟವನ್ನು ಮತ್ತಷ್ಟು ಬಲಗೊಳಿಸಲಿದೆ’ ಎಂದು ಮಾಂಡವಿಯ ಟ್ವೀಟ್‌ ಮಾಡಿದ್ದಾರೆ.

ಈವರೆಗೆ ದೇಶಾದ್ಯಂತ 18-59 ವಯೋಮಾನದ ಶೇ.1ಕ್ಕಿಂತಲೂ ಕಡಿಮೆ ಮಂದಿ ಬೂಸ್ಟರ್‌ ಡೋಸ್‌ ಪಡೆದಿದ್ದಾರೆ.

ರಾಜ್ಯದಲ್ಲೂ ಫ್ರೀ ಲಸಿಕೆ:
ಕೇಂದ್ರ ಆರೋಗ್ಯ ಇಲಾಖೆ ಆದೇಶದಂತೆ ರಾಜ್ಯದಲ್ಲೂ 15ರಿಂದ ಎರಡನೇ ಡೋಸ್‌ ಲಸಿಕೆ ಪಡೆದು 75 ದಿನ ಪೂರ್ಣಗೊಳಿಸಿದ ಸುಮಾರು 5 ಕೋಟಿ ಮಂದಿಗೆ ಬೂಸ್ಟರ್‌ ಡೋಸ್‌ ಉಚಿತವಾಗಿ ವಿತರಣೆಯಾಗಲಿದೆ.

ಕೊರೊನಾ ವಿರುದ್ಧದ ನಮ್ಮ ಹೋರಾಟವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಜು.15ರಿಂದ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್‌ ನೀಡಲು ನಿರ್ಧರಿಸಲಾಗಿದೆ.
– ಡಾ. ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next