Advertisement
ಈ ಜಾಕೆಟ್ ಅನ್ನು ಕ್ಯಾಲಿಪೋರ್ನಿಯಾದ ಪೈಲೆಟ್‌ಗಳಿಗಾಗಿ ರಚಿಸಲಾಗಿದ್ದು, ಇತ್ತೀಚೆಗೆ ಇದು ಫ್ಯಾಶನ್ ಪ್ರಿಯರ ಮನಗೆದ್ದು, ಜನಪ್ರಿಯ ಸಂಸ್ಕೃತಿ ಮತ್ತು ಉಡುಪುಗಳ ಭಾಗವಾಗಿದೆ. ಇದನ್ನು ಎಲ್ಲರೂ ಧರಿಸಬಹುದಾಗಿದ್ದು, ಎಲ್ಲಾ ಕಾಲಗಳಿಗೂ ಹೇಳಿ ಮಾಡಿಸಿದಂತಿದೆ.
ಬೂಂಬರ್ ಜಾಕೆಟ್‌ಗಳಲ್ಲಿ ಬೇರೆ ಬೇರೆ ರೀತಿಯ ವಿನ್ಯಾಸಗಳಿದ್ದು, ಸಿಂಪಲ್ ಹಾಗೂ ಡಿಸೈನ್‌ಗಳಲ್ಲಿ ಲಭ್ಯವಿದೆ. ಹತ್ತಿ,ಚರ್ಮ, ಪ್ರಿಂಟಿಂಗ್ ಹೀಗೆ ವಿವಿಧ ಮಾದರಿಗಳಿವೆ. ಬಟ್ಟೆಗನುಗುಣವಾಗಿ ಅದರ ಮೌಲ್ಯವಿರುತ್ತದೆ. ಇದರಲ್ಲಿ ನಿಮಗಿಷ್ಟವಾದ ಕಲರ್‌ಗಳ ಆಯ್ಕೆ ಲಭ್ಯವಿದ್ದು, ಡಾರ್ಕ್, ಲೈಟ್ ಬಣ್ಣಗಳು ಹೆಚ್ಚು ಸುಂದರವಾಗಿರುತ್ತದೆ. ಆಯ್ಕೆಗಳು ಸಾಕಷ್ಟಿರುವುದರಿಂದ ಆನ್‌ಲೈನ್‌ನಲ್ಲಿ ಇದನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ಮಕ್ಕಳಿಗೂ ಲಭ್ಯ
ಚಿಕ್ಕ ಮಕ್ಕಳ ಗಾತ್ರದಲ್ಲೂ ಇದು ಲಭ್ಯವಿದ್ದು , ಸಂಪೂರ್ಣವಾಗಿ ಹತ್ತಿ ಮತ್ತು ಚರ್ಮಗಳಿಂದ ಮಾಡಿದ ಜಾಕೆಟ್ ಲಭ್ಯವಿದೆ. ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುವುದಂದ ಹುಡುಗಿರು ಕೂಡ ಇದನ್ನು ಧರಿಸಲು ಇಷ್ಟಪಡುತ್ತಾರೆ.
Related Articles
ಹುಡುಗರ ವೆಸ್ಟರ್ನ್ ಹಾಗೂ ಸಾಂಪ್ರದಾಯಿಕ ಉಡುಗೆಗಳಿಗೂ ಇದು ಸೂಕ್ತವಾಗಿದ್ದು, ನಿಮ್ಮ ಲುಕ್‌ಗಳಿಗೆ ಅನುಗುಣವಾಗಿ ಇದನ್ನು ಆರಿಸಿಕೊಳ್ಳಬಹುದಾಗಿದೆ. ಆಫೀಸ್‌ಗೆಹೊಗುವವರು ಫಾರ್ಮಲ್ ಪ್ಯಾಂಟ್, ಶರ್ಟ್‌ನೊಂದಿಗೂ ಇದನ್ನು ಧರಿಸಿದರೆ ವಿಶೇಷ ಲುಕ್ ನೀಡುತ್ತದೆ. ಕಾಲೇಜ್ ಹುಡುಗರಿಗಂತೂ ಇದು ಹೇಳಿ ಮಾಡಿಸಿದಂತಿದೆ. ಕಾಲೇಜ್, ಪಾರ್ಟಿಗಳಲ್ಲೂ ಇದನ್ನು ಧರಿಸಿದರೆ ಆಕರ್ಷಣೆಯ ಕೇಂದ್ರ ಬಿಂದು ನೀವೇ ಆಗಿರುತ್ತಿರಿ. ಬೆಂಗಳೂರು, ಮೈಸೂರುಗಳಲ್ಲಿ ಇದಕ್ಕೆಂದೆ ಶಾಪ್‌ಗ್ಳಿದ್ದು ಆರ್ಡರ್ ನೀಡಿ ಡಿಸೈನ್ ಅಥವಾ ಕಲರ್‌ಗಳನ್ನು ಕೊಳ್ಳಬಹುದು. ಒಂದೇ ಬಣ್ಣದಲ್ಲಿ ಬೇಕಿದ್ದರೆ ಚರ್ಮದಿಂದ ಮಾಡಿದ ಜಾಕೆಟ್ ಲಭ್ಯವಿದ್ದು, ಪಾರ್ಟಿಗಳಿಗೆ ಸ್ವಲ್ಪ ನ್ಯೂ ಲೂಕ್ ಕೊಡುವಂಥ ಹತ್ತಿಯಿಂದ ಮಾಡಿದ ಕೊಲರ್ ಅಥವಾ ಒನ್ ಸೈಡ್ ಡಿಸೈನ್, ಆಫ್ ಬಟನ್ ಹೀಗೆ ನಾನಾ ವಿಧಗಳಲ್ಲಿ ಲಭ್ಯವಿದೆ. ಕೆಲವರಿಗೆ ಪಾಕೆಟ್ ಜಾಕೆಟ್ ಇಷ್ಟವಿರುವುದಿಲ್ಲ. ಅಂತಹವರಿಗೆ ಪ್ಲೆ„ನ್ ಜಾಕೆಟ್ ಲಭ್ಯವಿರುತ್ತದೆ.
Advertisement
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವ ಈ ಜಾಕೆಟ್ ಎಲ್ಲ ಕಾಲಕ್ಕೂ ಹೊಂದುವುರದಿಂದ ಎಲ್ಲರ ವಾರ್ಡ್‌ರೂಬ್‌ನಲ್ಲೂ ಇದು ಸ್ಥಾನಗಿಟ್ಟಿಸಿಕೊಂಡಿದೆ. ಗುಣಮಟ್ಟಕ್ಕೆ ಅನುಗುಣವಾಗಿ 800 ರೂ. ನಿಂದ ಆರಂಭವಾಗಿ 10 ಸಾವಿರ ರೂ. ವರೆಗೆ ಇದು ಲಭ್ಯವಿದೆ.
ರೈಡರ್ ಫೇವರೇಟ್ಬೈಕ್ ರೈಡರ್‌ಗಳಿಗೆ ಇದು ಬಹು ಪ್ರಿಯವಾಗಿದ್ದು, ದೂರದೂರ ಪ್ರಯಾಣ ಮಾಡುವಾಗ ಇದನ್ನು ಧರಿಸುತ್ತಾರೆ. ನೋಡಲು ಫ್ಯಾಶನೇಬಲ್ ಆಗಿರುವ ಬೂಂಬರ್ ಜಾಕೆಟ್ ಧರಿಸಲು ಆರಾಮದಾ ಯಕವಾಗಿದೆ., ವರ್ಸಿಟಿ ಶೈಲಿಯ ಜಾಕೆಟ್‌ಗಳು ತುಂಬಾ ಬೇಡಿಕೆಯಲ್ಲಿವೆ. ಸೆಕೆಗಾಲದಲ್ಲಿ ರೈಡ್ ಮಾಡುವಾಗ ಬೆವರಿನ ಅನುಭವವಾಗದಿರಲು ಒಳಭಾಗದಲ್ಲಿ ಮೆತ್ತನೆಯ ಹತ್ತಿಯ ಬಟ್ಟೆಯನ್ನು ಅಳವಡಿಸಲಾಗಿದೆ ಅದೇ ರೀತಿಯಲ್ಲಿ ಚಳಿಯ ಅನುಭವವಾಗದಿರಲು ಚರ್ಮದ ಹೊದಿಕೆಯಿದ್ದು, ಹತ್ತಿಯಿಂದ ತುಂಬಲ್ಪಟ್ಟಿರುತ್ತದೆ ಇದರಿಂದಾಗಿ ರೈಡರ್ ಇದನ್ನು ತುಂಬಾ ಇಷ್ಟಪಡುತ್ತಾರೆ. ಪ್ರೀತಿ ಭಟ್ ಗುಣವಂತೆ