Advertisement

“ಲ್ಯಾಪ್‌ಟಾಪ್‌ ಪರದೆಯಾಚೆಗೆ’ಸಮಕಾಲೀನ ಚರ್ಚೆ

09:15 AM Mar 05, 2020 | mahesh |

“ಲ್ಯಾಪ್‌ ಟಾಪ್‌ ಪರದೆಯಾಚೆಗೆ’. ಸಣ್ಣ ಕೃತಿಯಲ್ಲಿ ಲೇಖಕರು ತನಗೆ ಹೇಳಬೇಕಾದದ್ದನು ಹೇಳಿ ಮುಗಿಸಿದ್ದಾರೆ. ಇಲ್ಲಿ ಬರುವ ಕೆಲ ಬರಹಗಳಲ್ಲಿ ಬರೀ ವಿಷಯಗಳು ಮಾತ್ರವಲ್ಲ ಆ ವಿಷಯಗಳ ಹಿಂದೆ ಇರುವ ವಿಶೇಷಗಳನ್ನು ಮುಂದೆ ತಂದು ಬರವಣಿಗೆಯಲ್ಲಿ ಕಟ್ಟಿದ್ದಾರೆ. ಬಾಯಿ ಪಾಠದ ಮೂಲಕ ಮಕ್ಕಳ ತಲೆಗೆ ನಾವುಗಳು ತುರುಕುತ್ತಿರುವ ರೈಮ್‌ ಪದಗಳ ಹುಟ್ಟಿನ ಹಿಂದಿರುವ ಗುಟ್ಟು ಇಲ್ಲಿ ಬರಹವಾಗಿದೆ.

Advertisement

ಘಟನೆ 1:
ಎರಡು ವ್ಯಕ್ತಿಗಳಲ್ಲಿ ನಡೆಯುವ ಮಾತುಗಳು. ಇಲ್ಲಿ ಒಂದು ಲೋಕದ ವ್ಯಥೆಯನ್ನು, ಅಲ್ಲಿಯ ಭಾವ, ನೋಟ, ವಿಚಾರ, ಆಚಾರ ಸಂಪ್ರದಾಯವನ್ನು “ಮೂರನೇ ಜಗತ್ತು’ ಬರಹ ತೆರೆದಿಡುತ್ತದೆ. ತೃತೀಯ ಲಿಂಗಿಗಳ ಜೀವನವನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ.ಇಲ್ಲಿ ಲೇಖಕಿ ವರ್ಣಿಸುವ ವಿಚಾರಗಳು ಓದುಗರಿಗೆ ಒಂದು ವಿಷಯದಲ್ಲಿ ಹಲವು ವಿಶೇಷಗಳನ್ನು ತಿಳಿದುಕೊಳ್ಳುವಂತೆ ಮಾಡುತ್ತದೆ.

ಘಟನೆ 2:
ಕೆಲವೊಂದು ಮೌಡ್ಯವನ್ನು ಬದುಕಿನ ಮೌಲ್ಯವಾಗಿಸಿಕೊಂಡ ಸಮಾಜದ ಒಂದಿಷ್ಟು ಮುಖಗಳನ್ನು ಪರಿಚಯಿಸುವ ಕೃತಿ, ಕೊನೆಯಲ್ಲಿ ದೇವಾಲಯದ ಸುತ್ತಾಟದ ನೆನಪಿನಲ್ಲಿ ಅಲ್ಲಿರುವ ವೈಶಿಷ್ಟ್ಯವನ್ನು ಹೇಳಿಕೊಂಡು ಸಾಗುತ್ತದೆ. ದೇವಾಲಯಗಳು ಐತಿಹಾಸಿಕವಾಗಿ ನಮ್ಮನ್ನು ಕಾಡುತ್ತದೆ.ಅದರ ಹಿಂದಿನ ನಂಬಿಕೆಗಳ ಸುತ್ತ ಲೇಖಕಿ ಒಂದು ಸುತ್ತಿನ ವಿಚಾರವನ್ನು ಹೇಳಿ ಮೌಡ್ಯತೆಯ ಕುರಿತು ಹೇಳುತ್ತಾರೆ.

ಘಟನೆ 3:
ಬ್ಲೈಂಡ್ ಶಾಲೆಗೆ ಪರೀಕ್ಷೆ ಬರೆಯಲು ಹೋಗುವುದು. ನಾಲ್ಕು ಜನರೊಂದಿಗೆ ಬೆರೆಯುವುದು. ಎಳೆಯ ಅಂಧ ಜೀವದೊಟ್ಟಿಗೆ ಆಪ್ತವಾಗುವ ಭಾವವನ್ನು ಹೇಳುವಾಗ ಒಂದು ಕ್ಷಣ ಕಣ್ಣಂಚು ಒದ್ದೆಯಾಗುತ್ತದೆ.

ನೆಲ್ಸನ್‌ ಮಂಡೇಲಾರ ತತ್ತ್ವ ಹಾಗೂ ಮಹತ್ವದ ಸಣ್ಣ ಎಳೆ ಕೃತಿಯಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಲ್ಯಾಪ್‌ ಟಾಪ್‌ ಪರದೆಯಾಚೆಗೆ ಕೃತಿ ಸಣ್ಣ ಓದಿನ ಆಯ್ಕೆಗೆ ಮೊದಲ ಆದ್ಯತೆಯ ಸ್ಥಾನದಲ್ಲಿ ನಿಲ್ಲುತ್ತದೆ.

Advertisement

ಬಾಲ್ಯ, ಮುಪ್ಪು ಹರೆಯದ ಹೀಗೆ ಮೂರು ಹಂತದ ಬದುಕಿನ ನಾನಾ ವ್ಯಥೆಯ ಚಿತ್ರಣ ಬಗೆ ಬಗೆಯ ರೂಪ ಪಡೆದು ಬರಹವಾಗಿದೆ.

 ಸುಹಾನ್‌ ಶೇಕ್‌

Advertisement

Udayavani is now on Telegram. Click here to join our channel and stay updated with the latest news.

Next