Advertisement
ನಗರದ ತಾಪಂ ಸಭಾಂಗಣದಲ್ಲಿ ನಡೆದ ವಿಶಾಲ ಪ್ರಕಾಶನ ಮಾದಿನೂರು, ವರಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ಧಿ ಸಂಸ್ಥೆ, ಸಿರಿಗನ್ನಡ ಸಾಹಿತ್ಯ ಸಾಂಸ್ಕೃತಿಕ ಕಲೆಗಳ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಜಿ.ಎಸ್. ಗೋನಾಳರ ಜೀವನದ ಸಂಗ್ರಾಮದಲ್ಲಿ ಯಶಸ್ಸಿನ ಗುಟ್ಟುಗಳು ಹಾಗೂ ಸಮೃದ್ಧಿ ಜೀವನದ ದಾರಿ ದೀಪಗಳ ಪುಸ್ತಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ಬದುಕು ನೈಸರ್ಗಿಕವಾಗಿರಲಿ, ಅನೈಸರ್ಗಿಕ ಬದುಕಿನ ವಿಧಾನದಿಂದ ನಮ್ಮ ನೆಮ್ಮದಿ ಹಾಗೂ ಜೀವನಶೈಲಿ ಹಾಳಾಗಿದ್ದು, ಬದುಕಿನ ಸತ್ಯದ ಇತಿಮಿತಿಯನ್ನರಿತು ಬದುಕುವ ವಿಧಾನವನ್ನು ಜಿ.ಎಸ್. ಗೋನಾಳರವರು ತಮ್ಮ ಸಾಹಿತ್ಯದಲ್ಲಿ ಅರ್ಥಪೂರ್ಣವಾಗಿ ಬಿಂಬಿಸಿದ್ದಾರೆ. ಈ ಪುಸ್ತಕದಲ್ಲಿ ಸರಳ ಜೀವನಕ್ಕೆ ಬೇಕಾದ ಮೌಲ್ಯಗಳ ಪ್ರತಿಪಾದನೆಯ ಕುರಿತು ಸುಂದರವಾಗಿ ಓದುಗರನ್ನು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ಮೌಲ್ಯಗಳನ್ನು ಪ್ರತಿಪಾದಿಸುವ ಜೀವನದ ಅವಶ್ಯಕ ಸೂತ್ರಗಳನ್ನು ಮನದಟ್ಟಾಗಿ, ಮನಸ್ಸಿಗೆ ಬೇರೂರುವ ಹಾಗೆ ಬರೆದಿದ್ದು, ಈ ಪುಸ್ತಕದ ಲೇಖನಗಳು ಶಾಲಾ-ಕಾಲೇಜು ಪಠ್ಯಪುಸ್ತಕಗಳಿಗೆ ಪಾಠವಾಗುವ ಪ್ರೌಢಿಮೆಯನ್ನು ಹೊಂದಿವೆ ಎಂದರು.
ಹೆಬ್ಟಾಳ ಸಂಸ್ಥಾನ ಮಠದ ಶ್ರೀನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಯತ್ನಟ್ಟಿಯ ರುದ್ರಮುನಿ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘದ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ ಮಾತನಾಡಿದರು.
ಹಿರಿಯ ಸಾಹಿತಿ ಡಾ| ಮಹಾಂತೇಶ ಮಲ್ಲನಗೌಡರ, ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ, ಕದಳಿ ವೇದಿಕೆ ಸಂಚಾಲಕಿ ನಿರ್ಮಲಾ ಬಳ್ಳೊಳ್ಳಿ, ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸಪಾಟೀಲ, ರತ್ನಾ ಗೋನಾಳ ಸೇರಿದಂತೆ ಮತ್ತಿತರರಿದ್ದರು.
ಉಮೇಶ ಸುರ್ವೆ ಸ್ವಾಗತಿಸಿದರು. ಪ್ರಾಸ್ತಾವಿಕ ಜಿ.ಎಸ್. ಗೋನಾಳ ಮಾತನಾಡಿದರು. ಶಿಕ್ಷಕಿ ಬಾಲ ನಾಗಮ್ಮ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ಚಿತ್ರಗಾರ ವಂದಿಸಿದರು. ಹೆಬ್ಟಾಳ ಶ್ರೀಗಳಿಗೆ ಮತ್ತುಯತ್ನಟ್ಟಿ ಮಠದ ರುದ್ರಮುನಿಸ್ವಾಮಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 35 ಸಾಧಕರಿಗೆ ಕನ್ನಡ ಕಸ್ತೂರಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.