Advertisement

ಬೆಂಗ್ಳೂರಲ್ಲೊಂದು ಬುಕ್‌ ವಾಕ್‌!

04:27 PM Apr 29, 2017 | |

ನೇಚರ್‌ ಕೇಳಿರುತ್ತೀರಿ, ರಿವರ್‌ ವಾಕ್‌ ಕೇಳಿರುತ್ತೀರಿ. ಇಲ್ಲಿದೆ ನೋಡಿ ಬುಕ್‌ ವಾಕ್‌! ಸಂಗೀತ, ಸಾಹಿತ್ಯ, ನೃತ್ಯ ಕಾರ್ಯಕ್ರಮಗಳ ಆಯೋಜನೆಯಲ್ಲಿ ಹೆಸರುವಾಸಿಯಾದ ದಿ ಹಮ್ಮಿಂಗ್‌ ಟ್ರೀ ಸಂಸ್ಥೆ “ಬುಕ್‌ ಶಾಪ್‌ ಕ್ರಾವ್ಲ್‌- ಬೆಂಗಳೂರು’ ಎಂಬ ಕಾರ್ಯಕ್ರಮ ಈ ವರ್ಷವೂ ಏರ್ಪಾಡಾಗಿದೆ. ಕಳೆದ 15 ವರ್ಷಗಳಿಂದ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಸಂಗೀತಗಾರರು, ಕಲಾವಿದರು, ಸಾಹಿತಿಗಳು, ಕವಿಗಳು  ಹೀಗೆ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ಈ ಕಾರ್ಯಕ್ರಮದ ಮೂಲಕ ಒಂದೆಡೆ ಸೇರುತ್ತಾರೆ. ಬೆಂಗಳೂರಿನ ಹಳೆಯ ಬೀದಿಗಳು, ರಸ್ತೆಗಳಲ್ಲಿ ನಡೆದುಕೊಂಡು ದಾರಿಯಲ್ಲಿ ಸಿಗುವ ಪುಸ್ತಕದಂಗಡಿಗಳಿಗೆ ಭೇಟಿ ಕೊಡುತ್ತಾರೆ. ಪುಸ್ತಕದ ವ್ಯಾಪಾರಿಗಳು ಈ ಕ್ಷೇತ್ರದ ಸ್ಥಿತಿಗತಿ, ಸವಾಲುಗಳನ್ನು ಇವರೊಡನೆ ಹಂಚಿಕೊಳ್ಳುತ್ತಾರೆ.

Advertisement

ಈ ಡಿಜಿಟಲ್‌ ಯುಗದಲ್ಲಿ ಪುಸ್ತಕದಂಗಡಿಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿರುವ ಈ ಹೊತ್ತಿನಲ್ಲಿ ಇಂಥ ಕಾರ್ಯಕ್ರಮಗಳು ಅರ್ಥಪೂರ್ಣವೆಂಬಂತೆ ತೋರುತ್ತವೆ. ಈ ಸಲದ ಕಾರ್ಯಕ್ರಮದಲ್ಲಿ ದಿ ಬುಕ್‌ ರೂಂ, ಗೂಬ್ಸ್ ಬುಕ್‌ ರಿಪಬ್ಲಿಕ್‌, ಬ್ಲಾಸಂ ಬುಕ್‌ ಸ್ಟೋರ್‌, ದಿ ಬುಕ್‌ ವರ್ಮ್, ಹಿಗ್ಗಿನ್‌ಬಾಥಮ್ಸ್‌, ಗಂಗಾರಾಮ್ಸ್‌ ಬುಕ್‌ ಬ್ಯೂರೊ, ಸೆಲೆಕ್ಟ್ ಬುಕ್‌ ಶಾಪ್‌ ಪುಸ್ತಕದಂಗಡಿಗಳನ್ನು ಕವರ್‌ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಿಗದಿಯಾದ ದಿನದಂದು ಅವರೆಲ್ಲರೂ ಒಂದು ಕಾಮನ್‌ ಪಾಯಿಂಟ್‌(ಈ ಬಾರಿ ಕೋಶೀಸ್‌ ರೆಸ್ಟಾರೆಂಟ್‌) ಬಳಿ ಸೇರುತ್ತಾರೆ. ಅಲ್ಲಿಂದ ಮುಂದಿನ ಪಯಣ ಶುರುವಾಗುತ್ತದೆ.

ಎಲ್ಲಿ?: ಕೋಶೀಸ್‌ ರೆಸ್ಟಾರೆಂಟ್‌. ಸೇಂಟ್‌ ಮಾರ್ಕ್ಸ್ ರೋಡ್‌
ಯಾವಾಗ?: ಏಪ್ರಿಲ್‌ 30, ಬೆಳಗ್ಗೆ 11
ಪ್ರವೇಶ ದರ: 500 ರೂ.
ಹೆಚ್ಚಿನ ಮಾಹಿತಿಗೆ: 9844167547

Advertisement

Udayavani is now on Telegram. Click here to join our channel and stay updated with the latest news.