Advertisement
“ಅಕ್ಷರಗಳ ಮಾಂತ್ರಿಕ’ ಖ್ಯಾತಿಯ ರವಿ ಬೆಳಗೆರೆಯವರ ಕೃತಿಯನ್ನು ಓದುವುದರ ಲ್ಲಿರುವ ಖುಷಿಯೇ ಬೇರೆ. ಇವರ “ಅಮ್ಮ ಸಿಕ್ಕಿದ್ಲು’ ಕೃತಿಯು ಮತ್ತೆ ಮತ್ತೆ ಓದಿಸುವಂಥ ಶಕ್ತಿ ಹೊಂದಿದೆ.
Related Articles
Advertisement
ಹುಟ್ಟೂರು ಬಳ್ಳಾರಿಯಲ್ಲಿ ತಾಯಿಯೊಂದಿಗೆ ಕಳೆದ ಬಾಲ್ಯ ಹಾಗೂ ಹದಿಹರೆ ಯದ ದಿನಗಳನ್ನು ಲೇಖಕರು ಕೃತಿಯಲ್ಲಿ ಮೆಲುಕು ಹಾಕಿದ್ದಾರೆ. ಮನುಷ್ಯನಿಗೆ ಗಂಟು ಬೀಳುವ ಚಟಗಳು ಹೂದೋಟದಂತಹ ಜೀವನವನ್ನು ಹೇಗೆ ನಾಶ ಮಾಡುತ್ತವೆ ಎಂಬು ದನ್ನು ತನ್ನದೇ ಅನುಭವಗಳೊಂದಿಗೆ ಹಂಚಿ ಕೊಳ್ಳುತ್ತಾರೆ. ಈ ಕೃತಿಯ ಮೂಲಕ ತನ್ನ ಬದುಕಿನ ಎಷ್ಟೋ ವಿಷಯಗಳನ್ನು ಎಳೆಎಳೆ ಯಾಗಿ ಓದುಗರ ಮುಂದಿರಿಸಿದ್ದಾರೆ. ಬಾಲ್ಯ ದಲ್ಲಿ ಆದಂಥ ನೋವುಗಳು, ಚಿಕ್ಕವನಿದ್ದಾಗ ತಂದೆಯ ಕುರಿತಾಗಿ ಇದ್ದಂಥ ಪ್ರಶ್ನೆಗಳು ಸಹಿತ ಹಲವಾರು ರಹಸ್ಯಗಳು, ಕುತೂಹಲಗಳು ಹಾಗೂ ಇನ್ನಿತರ ಗಂಭೀರ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ತಾಯಿಯೊಡನೆ ಸಾಕಷ್ಟು ಸಮಯವನ್ನು ಕಳೆಯಲಿಲ್ಲವಲ್ಲ ಎಂಬ ಕೊರಗು ಈ ಕೃತಿ ಯಲ್ಲಿ ಪಡಿಮೂಡಿದೆ. ಗೆಲುವಿನ ಉತ್ತುಂಗದ ಲ್ಲಿದ್ದಾಗ, ಅದಕ್ಕೆ ಕಾರಣವಾ ದಂಥ ತಾಯಿ ಯನ್ನು, ನೋಡುವ ಭಾಗ್ಯ ತನಗಿ ಲ್ಲವಲ್ಲ ಎಂಬ ನೋವು ಕೃತಿಯಲ್ಲಿ ಎದ್ದು ಕಾಣುತ್ತದೆ.
“ಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದುಬಿಟ್ಟರೆ… ಅಂದು ಕೊಳ್ಳುತ್ತೇನೆ. ಅದೆಲ್ಲ ಆಗುವ ಮಾತೇ?’ ಎಂದು ಬೆನ್ನುಡಿಯಲ್ಲಿ ಲೇಖಕರು ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದಾರೆ.
ಬೆಳಗಳೆಯವರ ಸಾಂಪ್ರದಾಯಿಕ ಶೈಲಿ ಯಲ್ಲಿ ಮೂಡಿಬಂದ “ಅಮ್ಮ ಸಿಕ್ಕಿದ್ಲು’ ಕೃತಿ ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪ್ರಾಮುಖ್ಯವನ್ನು ಸಾರಿ ಹೇಳಿದೆ. ತಾಯಿಯ ಕುರಿತು ಆರಾಧ್ಯ ಭಾವ ಹೆಚ್ಚಾಗುತ್ತದೆ. ತಾಯಿಯ ಜತೆಗಿನ ಒಡನಾಟವನ್ನು ಅನು ಭವಿಸಿ ನೋಡಿ ಎಂಬ ಸಲಹೆಯನ್ನೂ ಈ ಕೃತಿಯನ್ನು ಲೇಖಕರು ನೀಡಿದ್ದಾರೆ. “ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗೆ ಇಡೀ ದಿನವನ್ನು ಕಳೆಯಿರಿ. ಆಗ ತಾನೇಕೆ ಈ ಕೃತಿಯನ್ನು ಬರೆದಿರುವೆನೆಂದು ನಿಮಗೆ ತಿಳಿ ಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದ್ದಾರೆ. ಅಂತೂ ಸ್ವಗತದೊಂದಿಗೆ ತನ್ನದೇ ಕಥೆಯನ್ನು ನಿರೂಪಿಸಿರುವ ಈ ಕೃತಿಯಲ್ಲಿ ಲೇಖಕರು ತಾಯಿಯ ಮಹತ್ವವನ್ನು ನಾವಂದು ಕೊಂಡದ್ದಕ್ಕಿಂತ ವಿಶೇಷವಾಗಿ ನಮಗೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
-ಸಂಹಿತಾ ಎಸ್. ಮೈಸೂರೆ, ಬೆಂಗಳೂರು