Advertisement

ಅಜ್ಜ ಪಡೆದ ಪುಸ್ತಕವನ್ನು 84 ವರ್ಷದ ಬಳಿಕ ಲೈಬ್ರರಿಗೆ ಮರಳಿಸಿದ ಮೊಮ್ಮಗ.!

01:10 PM Oct 29, 2022 | Team Udayavani |

ನವದೆಹಲಿ: ಮನುಷ್ಯ ಯಾವುದೇ ವಸ್ತುವನ್ನು ಇನ್ನೊಬ್ಬರ ಬಳಿ ತೆಗೆದುಕೊಂಡು ಅದನ್ನು ವಾಪಸ್‌ ಕೊಡುವಾಗ ವಿಳಂಬವಾಗುವುದಿದೆ. ಅದು ಹಣವಿರಲಿ ಅಥವಾ ಇನ್ಯಾವುದೇ ವಸ್ತುವಿರಲಿ ವಾಪಸ್‌ ಕೊಡುವಾಗ ಆತ ಕೆಲವೊಮ್ಮೆ ನಿರ್ಲಕ್ಷ್ಯ ಮಾಡುತ್ತಾನೆ.

Advertisement

ಈ ಮೇಲಿನ ಮಾತಿಗೆ ಉದಾಹರಣೆ ಎಂಬಂತೆ ವ್ಯಕ್ತಿಯೊಬ್ಬ 84 ವರ್ಷದ ಬಳಿಕ ಗ್ರಂಥಾಲಯದ (ಲೈಬ್ರರಿ)  ಪುಸ್ತಕವನ್ನು ವಾಪಸ್‌ ಕೊಟ್ಟಿದ್ದಾರೆ.!ಇದು ಅಚ್ಚರಿ ಅನ್ನಿಸಬಹುದು ಆದರೆ ಈ ಘಟನೆ ನಡೆದಿರುವುದು ಸತ್ಯ. 1938 ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಲೇಖಕ ರಿಚರ್ಡ್ ಜೆಫರೀಸ್ ಅವರ ʼರೆಡಿ ಡೀರ್‌ʼ ಎನ್ನುವ ಪುಸ್ತಕವನ್ನು ಅರ್ಲ್ಸ್‌ಡನ್ ಲೈಬ್ರರಿಯಿಂದ ಪಡೆದುಕೊಂಡಿದ್ದರು. 1957 ರಲ್ಲಿ ವಿಲಿಯಂ ಹ್ಯಾರಿಸನ್ ತೀರಿ ಹೋದ ಬಳಿಕ ಅವರ ವಸ್ತುಗಳೊಂದಿಗೆ ಕಪಾಟಿನಲ್ಲಿ ಈ ಪುಸ್ತಕವೂ ಹಾಗೆಯೇ ಉಳಿದಿತ್ತು.

ವಿಲಿಯಂ ಹ್ಯಾರಿಸನ್ ಅವರ ಮೊಮ್ಮಗ ಪ್ಯಾಡಿ ರಿಯೊರ್ಡಾನ್ ಇತ್ತೀಚೆಗೆ ಅಮ್ಮನ ಮನೆಯನ್ನು  ಸ್ವಚ್ಛ ಮಾಡುವಾಗ ʼರೆಡ್‌ ಡೀರ್‌ʼ ಪುಸ್ತಕ ಕಣ್ಣಿಗೆ ಬಿದ್ದಿದೆ. ಅದರಲ್ಲಿ ಆ ಪುಸ್ತಕವನ್ನು ಅದೇ ವರ್ಷದ ( 1938) ಅಕ್ಟೋಬರ್ 11 ರೊಳಗೆ ಅದನ್ನು ಹಿಂತಿರುಗಿಸಬಹುದೆಂದು ಬರೆಯಲಾಗಿತ್ತು.

ʼರೆಡ್‌ ಡೀರ್‌ʼ ಪುಸ್ತಕವನ್ನಿಡಿದುಕೊಂಡು ಪ್ಯಾಡಿ ರಿಯೊರ್ಡಾನ್ ಅರ್ಲ್ಸ್‌ಡನ್ ಲೈಬ್ರರಿಗೆ ಹೋಗಿ ಪುಸ್ತಕವನ್ನು ಹೋಗಿ ವಾಪಸ್‌ ಕೊಟ್ಟಿದ್ದಾರೆ. ಇದರೊಂದಿಗೆ ಲೈಬ್ರರಿಗೆ ದೇಣಿಗೆಯನ್ನು ನೀಡಿದ್ದಾರೆ. ಈ ದೇಣಿಗೆಯಲ್ಲಿ ಅಂದಿನಿಂದ ಪುಸ್ತಕಕ್ಕೆ ಬಿದ್ದ ದಂಡವೂ ಸೇರಿದೆ. ಪುಸ್ತಕ ವಾಪಸ್‌ ಕೊಟ್ಟ ಬಳಿಕ ಅರ್ಲ್ಸ್‌ಡನ್ ಲೈಬ್ರರಿ ಈ ಘಟನೆಯ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next