Advertisement

“ಕಥಾ ಕಣಜ’ಸಂಕಲನ ಲೋಕಾರ್ಪಣೆ: ಪಾಟೀಲ್‌

06:47 PM Mar 06, 2021 | Team Udayavani |

ಸಿಂಧನೂರು: ರುದ್ರಗೌಡ ಪಾಟೀಲ್‌ಪ್ರತಿಷ್ಠಾನ ಹಾಗೂ ಆಕ್ಸ್‌ಫರ್ಡ್‌ ಫೌಂಡೇಶನ್‌ಸಹಯೋಗದಲ್ಲಿ ಮಾ.7ರಂದು ನಗರದಸಂಗಮ್‌ ಪ್ಯಾಲೇಸ್‌ನಲ್ಲಿ ಕರುನಾಡಕಥಾ ಕಣಜ ಬಿಡುಗಡೆ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ರುದ್ರಗೌಡಪಾಟೀಲ್‌ ಪ್ರತಿಷ್ಠಾನದ ಡಾ| ಚನ್ನನಗೌಡಪಾಟೀಲ್‌ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ರುದ್ರಗೌಡ ಪಾಟೀಲ್‌ಪ್ರತಿಷ್ಠಾನದಿಂದ ಅನೇಕ ಸಾಮಾಜಿಕಚಟುವಟಿಕೆ ನಡೆಸಲಾಗಿದೆ.

Advertisement

ಕೊರೊನಾಇದ್ದ ಕಾರಣಕ್ಕೆ ಸಾಹಿತ್ಯ ಕ್ಷೇತ್ರವನ್ನುಆಯ್ಕೆ ಮಾಡಲಾಯಿತು. ರಾಜ್ಯಮಟ್ಟದಮುಕ್ತ ಕಥಾ ಸ್ಪರ್ಧೆಯನ್ನು ಕಳೆದ ವರ್ಷಅಕ್ಟೋಬರ್‌ನಲ್ಲಿಯೇ ಆರಂಭಿಸಲಾಯಿತುಎಂದರು.ತೀರ್ಪುಗಾರರಾಗಿ ಪ್ರಮುಖರು:ಇಂಗ್ಲೆಂಡ್‌, ಬಾಂಬೆ, ಬೆಂಗಳೂರು, ಬಳ್ಳಾರಿ,ಶಿರಸಿ ಸೇರಿದಂತೆ ವಿವಿಧ ಕಡೆಯಿಂದ193 ಕಥೆಗಳು ಬಂದಿದ್ದವು. ಅವುಗಳನ್ನುಸ್ಕ್ರೀನಿಂಗ್‌ ಮಾಡಿ 30 ಕಥೆಗಳನ್ನು ಆಯ್ಕೆಮಾಡಿಕೊಳ್ಳಲಾಗಿತ್ತು.

ತೀರ್ಪುಗಾರರಾಗಿಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ|ಅಮರೇಶ ನುಗಡೋಣಿ, ಡಾ| ವಿಠuಲರಾವ್‌ಗಾಯಕ್ವಾಡ ಕಾರ್ಯನಿರ್ವಹಿಸಿ 16ಕಥೆಗಳನ್ನು ಆಯ್ಕೆ ಮಾಡಿದ್ದರು.ಆಯ್ಕೆಯಾದ ಕಥೆಗಳಿವು: ಉತ್ತರ ಕನ್ನಡದಸಂತೋಷಕುಮಾರ ಅವರ ಕಾಮನಬಿಲ್ಲುಕಥೆ ಪ್ರಥಮ, ಬೆಂಗಳೂರಿನ ದಾದಪೀರ್‌ಚೈಮನ್‌ ಅವರ ಆವರಣ ದ್ವಿತೀಯ,ಬಳ್ಳಾರಿಯ ಡಾ| ನಂದೀಶ್ವರ ದಂಡೆ ಅವರಕಾಲದ ಕಟ್ಟಳೆ ಮೀರಬಲ್ಲಡೆ ತೃತೀಯಸ್ಥಾನ ಪಡೆದುಕೊಂಡಿವೆ.

ಈ ಮೂರುಕಥೆಗಳಿಗೆ ಕ್ರಮವಾಗಿ 15 ಸಾವಿರ ರೂ., 10ಸಾವಿರ ರೂ., 5 ಸಾವಿರ ರೂ. ಬಹುಮಾನನೀಡಲಾಗುವುದು. ಐದು ಮೆಚ್ಚಿಗೆಪಡೆದ ಕಥೆಗಳಿಗೆ ತಲಾ 2500 ರೂ.ಗಳುಹಾಗೂ ಸಂಕಲನಕ್ಕೆ 8 ಕಥೆಗಳನ್ನು ಆಯ್ಕೆಮಾಡಿಕೊಡಿದ್ದು, 16 ಕಥೆಗಳನ್ನೊಳಗೊಂಡಕರುನಾಡ ಕಥಾ ಸಂಕಲನ ಬಿಡುಗಡೆಮಾಡಲಾಗುವುದು ಎಂದರು.

ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀಸೋಮನಾಥ ಶಿವಾಚಾರ್ಯರು, ಶ್ರೀವರರುದ್ರಮುನಿ ಮಹಾಸ್ವಾಮಿ ಸಾನ್ನಿಧ್ಯವಹಿಸಲಿದ್ದು, ಲಕ್ಷ್ಮೀದೇವಿ ರುದ್ರಗೌಡಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವಿವಿಯ ಪ್ರಾಧ್ಯಾಪಕ ಡಾ| ಅಮರೇಶನುಗಡೋಣಿ, ಆಕ್ಸ್‌ಫರ್ಡ್‌ ಕಾಲೇಜಿನಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ತಹಶೀಲ್ದಾರ್‌ಮಂಜುನಾಥ ಭೋಗಾವತಿ, ಶಾಶ್ವತಸ್ವಾಮಿಮುಕ್ಕುಂದಿಮಠ, ಸರಸ್ವತಿ ಪಾಟೀಲ್‌,ದೇವೇಂದ್ರಪ್ಪ ಹುಡಾ ಭಾಗವಹಿಸಲಿದ್ದಾರೆಎಂದರು.ಆಕ್ಸ್‌ಫರ್ಡ್‌ ಕಾಲೇಜಿನ ಅಧ್ಯಕ್ಷಸತ್ಯನಾರಾಯಣ ಶೆಟ್ಟಿ, ಸಾಹಿತಿ ಪಂಪಯ್ಯಸಾಲಿಮಠ, ವಿ.ಸಿ. ಪಾಟೀಲ್‌ ಸೇರಿದಂತೆಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next