Advertisement
ಹೌದು, ಪ್ಯಾಕೆಟ್ಸ್ ಆ್ಯಪ್ ಮೂಲಕ ಎಲ್ ಪಿ ಜಿ ಬುಕ್ ಮಾಡಿದರೇ, ಕ್ಯಾಶ್ ಬ್ಯಾಕ್ ನೀಡುತ್ತಿದೆ. 14.2 ಕೆಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೇ, ಗ್ರಾಹಕರಿಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ.
Related Articles
ಪ್ಯಾಕೆಟ್ಸ್ ಆ್ಯಪ್ ಮೂಲಕ 200 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮಾಡಿದರೆ, 10 ಪ್ರತಿಶತದಷ್ಟು ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಈ ಆಫರ್ ಪಡೆಯಲು ಗ್ರಾಹಕರು, ಯಾವುದೇ ಪ್ರೋಮೋಕೋಡ್ ನನ್ನು ನಮೂದಿಸುವ ಅಗತ್ಯವಿಲ್ಲ. ಆದರೆ, ಈ ಕೊಡುಗೆ ಒಂದು ತಿಂಗಳಲ್ಲಿ 3 ಬಿಲ್ ಪೇಮೆಂಟ್ ಮೇಲೆ ಮಾತ್ರ ಮಾನ್ಯವಾಗಿರುತ್ತದೆ.
Advertisement
ಇನ್ನು, ಒಂದು ಗಂಟೆಯಲ್ಲಿ 50 ಬಳಕೆದಾರರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.
ಪ್ಯಾಕೇಟ್ಸ್ ನಲ್ಲಿ ಬುಕ್ಕಿಂಗ್ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ1. ಪಾಕೆಟ್ಸ್ ವಾಲೆಟ್ ಅಪ್ಲಿಕೇಶನ್ ಅನ್ನು ತೆರೆಯಿರಿ.
2. ರೀಚಾರ್ಜ್ ಆ್ಯಂಡ್ ಪೇ ಬಿಲ್ಸ್ ವಿಭಾಗದಲ್ಲಿ ಪೇ ಬಿಲ್ಸ್ ಕ್ಲಿಕ್ ಮಾಡಿ.
3. ಚೂಸ್ ಬಿಲ್ಲರ್ಸ್ (Choose Billers) ನಲ್ಲಿನ ಮೋರ್( More) ಆಯ್ಕೆಯನ್ನು ಕ್ಲಿಕ್ ಮಾಡಿ.
4. ಎಲ್ ಪಿಜಿಯ ಆಯ್ಕೆ ನಿಮ್ಮ ಮುಂದೆ ಕಾಣಿಸುತ್ತದೆ.
5. ನಂತರ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಬುಕಿಂಗ್ ಅಮೌಂಟ್ ನನ್ನು ಸಿಸ್ಟಂ ಮೂಲಕ ತಿಳಿಸಲಾಗುವುದು.
7. ಬುಕಿಂಗ್ ಮೊತ್ತವನ್ನು ಪಾವತಿ ಮಾಡಬೇಕು.
8. ವಹಿವಾಟಿನ ನಂತರ, 10% ದರದಲ್ಲಿ, ನೀವು ಗರಿಷ್ಠ 50 ರೂ ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಈ ಕ್ಯಾಶ್ ಬ್ಯಾಕ್ ನಲ್ಲಿ ಓಪನ್ ಮಾಡಿದ ತಕ್ಷಣ ಪಾಕೆಟ್ಸ್ ವ್ಯಾಲೆಟ್ ಗೆ ಹಣ ಜಮಾ ಆಗುತ್ತದೆ. ಇದನ್ನೂ ಓದಿ : ಭಾರಿ ಮಳೆ, ಗುಡ್ಡ ಕುಸಿತ : ಚಂಡೀಗಡ-ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್