Advertisement

ರಾಷ್ಟ್ರಧ್ವಜಕ್ಕೆ ಅವಮಾನ: ಬೂದಗವಿ ಗ್ರಾಪಂ ಪಿಡಿಓ ಅಮಾನತು

10:11 PM Feb 14, 2023 | Team Udayavani |

ಕೊರಟಗೆರೆ: ರಾಷ್ಟ್ರಧ್ವಜವನ್ನು ಭಾನುವಾರ ಹಾರಿಸುವ ಸರಕಾರದ ಆದೇಶವೇ ಇಲ್ವಂತೆ.. ಬೂದಗವಿ ಗ್ರಾ.ಪಂಯ ಪಿಡಿಓ ಮತ್ತು ಅಧ್ಯಕ್ಷರ ತಂಡಕ್ಕೆ ಈ ವಿಚಾರದ ಬಗ್ಗೆ ಮಾಹಿತಿಯೇ ಇಲ್ವಂತೆ.. ಸ್ಥಳೀಯ ವಾಸಿ ಮತ್ತು ಪಿಡಿಓ ನಡುವಿನ ಸಂಭಾಷಣೆಯ ಧ್ವನಿ ಮತ್ತು ಗ್ರಾ.ಪಂ. ಯ ಪೋಟೊ ಪರಿಶೀಲನೆ ನಡೆಸಿರುವ ಜಿಪಂ ಸಿಇಓ ತಕ್ಷಣ ಪಿಡಿಓ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ಕಚೇರಿ ಆವರಣದ ಧ್ವಜಸ್ತಂಭದಲ್ಲಿ ಫೆ. 12ರ ಭಾನುವಾರ ರಾಷ್ಟ್ರಧ್ವಜ ಹಾರಿಸದೇ ನಿರ್ಲಕ್ಷ ವಹಿಸಿದ್ದಾರೆ ಎಂಬ ದೂರಿನ ಅನ್ವಯ ಗ್ರಾಪಂಯ ಪಿಡಿಓ ಮೇಲಿನ ತನಿಖೆ ಬಾಕಿ ಉಳಿಸಿ ಅಮಾನತು ಮಾಡಿ ಆದೇಶ ಮಾಡಲಾಗಿದೆ. ರಾಷ್ಟ್ರಧ್ವಜದ ಬಗ್ಗೆ ನಿರ್ಲಕ್ಷ ವಹಿಸುವ ಅಧಿಕಾರಿಗಳಿಗೆ ಬಹುಮುಖ್ಯ ಪಾಠವಾಗಿದೆ.

ಬೂದಗವಿ ಗ್ರಾಪಂಯ ಆವರಣದ ಧ್ವಜಸ್ತಂಭದಲ್ಲಿ ಪ್ರತಿನಿತ್ಯ ರಾಷ್ಟ್ರಧ್ವಜ ಹಾರಿಸುವುದು ಮತ್ತು ಸಂಜೆ ಇಳಿಸುವುದು ಜವಾಬ್ದಾರಿ ಗ್ರಾಪಂಯ ಜವಾನ ಸಿದ್ದಗಂಗಪ್ಪನಿಗೆ ವಹಿಸಲಾಗಿದೆ. ಭಾನುವಾರ ರಜೆಯ ದಿನವು ರಾಷ್ಟ್ರಧ್ವಜ ಹಾರಿಸಬೇಕೆಂಬ ಕನಿಷ್ಠ ಜ್ಞಾನವು ಗ್ರಾಪಂಯ ಪಿಡಿಓ, ಅಧ್ಯಕ್ಷರು ಸೇರಿದಂತೆ ಸಿಬ್ಬಂದಿಗಳಿಗೂ ಇಲ್ಲವಾಗಿದೆ. ಗ್ರಾಪಂಯ ಪಿಡಿಓ ಜೊತೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸದಸ್ಯತ್ವ ರದ್ದುಪಡಿಸಿ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂಬು ಸ್ಥಳೀಯರು ಆಗ್ರಹ ಮಾಡಿದ್ದಾರೆ.

ಗ್ರಾಪಂಯ ಅಧ್ಯಕ್ಷರ ಪಾತ್ರವೇನು..?

ರಾಷ್ಟ್ರಧ್ವಜದ ಕರ್ತವ್ಯ ನಿರ್ವಹಣೆಯು ಕೇವಲ ಗ್ರಾಪಂ ಪಿಡಿಓ ಜವಾಬ್ದಾರಿನಾ. ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಪಾತ್ರವಿಲ್ಲವೇ. ಜವಾಬ್ದಾರಿ ಇದ್ದರೇ ಅಧ್ಯಕ್ಷರ ಸದಸ್ಯತ್ವ ರದ್ದಿಗೆ ಕ್ರಮವಿಲ್ಲವೇಕೆ. ಚುನಾಯಿತ ಸದಸ್ಯರು ಪ್ರತಿನಿತ್ಯ ಗ್ರಾಪಂಗೆ ಬರ್ತಾರಾ. ಪರಿಶೀಲನೆ ನಡೆಸಬೇಕಾದ ಸಿಸಿಟಿವಿಯೇ ಗ್ರಾಪಂ ಯಿಂದ ಮಾಯವಾಗಿದೆ. ಸಿದ್ದರಬೆಟ್ಟ ಗ್ರಾಪಂಯ ಅಕ್ರಮದ ಕರ್ಮಕಾಂಡದ ತನಿಖೆಯನ್ನು ಜಿಪಂಯು ೩ತಿಂಗಳು ಮಾಡಿದ್ರು ಮುಗಿಯದ ಕತೆಯಾಗಿ ಉಳಿಯಲಿದೆ.

Advertisement

ಪುನರಾವರ್ತನೆ ಆದ ಆಗಸ್ಟ್ ಘಟನೆ..
75 ನೇ ಅಮೃತ ಮಹೋತ್ಸವ ಪ್ರಯುಕ್ತ ಕೇಂದ್ರ ಸರಕಾರದಿಂದ ಕಡ್ಡಾಯವಾಗಿ ಹರ್‌ಘರ್ ತಿರಂಗದ ಆದೇಶವಿತ್ತು. ಆದರೇ ಕೊರಟಗೆರೆ ತಾಲೂಕಿನ ಬೂದಗವಿ ಗ್ರಾಪಂಯ ಧ್ವಜಸ್ತಂಭದಲ್ಲಿ ರಾಷ್ಟ್ರದ್ವಜವನ್ನು ಆ.13ರಂದು ತಡರಾತ್ರಿ 2 ಗಂಟೆವರೇಗೂ ಹಾಗೇ ಬೀಡಲಾಗಿತ್ತು. ಕರ್ನಾಟಕ ರಣದೀರರ ವೇದಿಕೆಯಿಂದ ತುಮಕೂರು ಜಿಪಂ ಮತ್ತು ತಾಪಂಗೆ ದೂರು ನೀಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಬೂದಗವಿ ಗ್ರಾಪಂಯ ಪಿಡಿಓ ಮತ್ತು ಅಧ್ಯಕ್ಷೆಯನ್ನು ಅಮಾನತ್ತಿಗೆ ಆಗ್ರಹ ಮಾಡಲಾಗಿತ್ತು.

ಬೂದಗವಿ ಗ್ರಾಪಂ ಅಧ್ಯಕ್ಷೆ ವಿನೋಧ ಮತ್ತು ಅಧ್ಯಕ್ಷೆಯ ಗಂಡ ರಾಜಕೀಯ ದುರುದ್ದೇಶವೇ ನನ್ನ ಅಮಾನತಿಗೆ ಕಾರಣ. ಅಭಿವೃದ್ದಿ ಕೆಲಸಗಳಿಗೆ ಅಡ್ಡಿ ಪಡಿಸುವುದೇ ಅಧ್ಯಕ್ಷೆಯ ಪತಿಯ ಪ್ರತಿನಿತ್ಯದ ಕಾಯಕ. 2 ವರ್ಷದಿಂದ ಪೊಲೀಸ್ ಠಾಣೆ ಮತ್ತು ಸರಕಾರಿ ಕಚೇರಿಗಳಿಗೆ ಅಲೆದು ಸಾಕಾಗಿದೆ. ರಾಷ್ಟ್ರಧ್ವಜದ ವಿಚಾರದಲ್ಲಿಯು ಅಧ್ಯಕ್ಷೆಯ ಹಸ್ತಕ್ಷೇಪವಿದ್ದು ಸಮಗ್ರ ತನಿಖೆ ನಡೆಯಬೇಕಿದೆ.

ವಿಜಯಕುಮಾರಿ. ಗ್ರಾಪಂ ಪಿಡಿಓ. ಬೂದಗವಿ

ರಾಷ್ಟ್ರಧ್ವಜದ ವಿಚಾರದಲ್ಲಿ ಪಿಡಿಓ ನಿರ್ಲಕ್ಷದ ದೂರಿನ ಅನ್ವಯ ತನಿಖೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ. ಬೂದಗವಿ ಗ್ರಾಪಂಯ ಧ್ವಜಸ್ತಂಭದ ರಾಷ್ಟ್ರಧ್ವಜ ಅಳವಡಿಕೆಯ ಬಗ್ಗೆ ಗ್ರಾಪಂಯ ಪಿಡಿಓ, ಅಧ್ಯಕ್ಷರು ಸೇರಿದಂತೆ ಸಿಬ್ಬಂದಿಗಳ ಸಮಗ್ರ ತನಿಖೆ ನಡೆಯಲಿದೆ. ಬೂದಗವಿ ಗ್ರಾಪಂಗೆ ಈಗಾಗಲೇ ನೂತನ ಪಿಡಿಓ ವೀರಭದ್ರರಾಧ್ಯ ನೇಮಕ ಮಾಡಲಾಗಿದೆ—

– ಡಾ.ದೊಡ್ಡಸಿದ್ದಯ್ಯ. ಇಓ. ಕೊರಟಗೆರೆ

ಬೂದಗವಿ ಗ್ರಾಪಂಯ ಧ್ವಜ ಸ್ತಂಭದಲ್ಲಿ ರಾತ್ರಿ 2.ಗಂಟೆಯಾದರೂ ಸಹ ರಾಷ್ಟ್ರಧ್ವಜವನ್ನು ಅವರೋಹಣ ಮಾಡದೇ ರಾಷ್ಟ್ರಧ್ವಜ ನೀತಿಸಂಹಿತೆಯನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.ಸದರಿ ನೌಕರರನ್ನು ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯತೆ, ಸರ್ಕಾರಿ ಮಾರ್ಗಸೂಚಿ ಸುತ್ತೋಲೆಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿದೆ.ಗ್ರಾಪಂ ಪಿಡಿಓ ವಿಜಯಕುಮಾರಿರವರನ್ನು ಅಮಾನತ್ತು ಪಡಿಸಿ ಆದೇಶ ನೀಡಲಾಗಿದೆ. ಸರ್ಕಾರಿ ನಿಯಮದ ಪ್ರಕಾರ ರಜಾ ದಿನಗಳಲ್ಲೂ ಸಹ ರಾಷ್ಟ್ರಧ್ವಜವನ್ನು ಗ್ರಾಪಂ ಕಛೇರಿಯಲ್ಲಿ ಧ್ವಜ ಹಾರಿಸಬೇಕೇಂದು ನಿಯಮವಿದೆ. ಅದರೆ ಇದನ್ನು ಸಾರ್ವಜನಿಕ ರು ಪ್ರಶ್ನಿಸಿದಾಗ ಉಡಾಪೇ ಉತ್ತರ ನೀಡುತ್ತಿದ್ದರು ಎನ್ನಲಾಗಿದೆ.

– ಡಾ.ಕೆ ವಿದ್ಯಾಕುಮಾರಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಮಕೂರು.

Advertisement

Udayavani is now on Telegram. Click here to join our channel and stay updated with the latest news.

Next