Advertisement

ಮೂಳೆ ಬೆಳವಣಿಗೆ ಕುಂಠಿತ  ಮಾಡಬಲ್ಲ ಹೊಸ ರೋಗ ಪತ್ತೆ 

10:55 AM Dec 15, 2018 | |

ಉಡುಪಿ: ಮಣಿಪಾಲದ ಕೆಎಂಸಿ ಮೆಡಿಕಲ್‌ ಜೆನೆಟಿಕ್ಸ್‌ ವಿಭಾಗದ ವೈದ್ಯಕೀಯ ವಿಜ್ಞಾನಿಗಳ ತಂಡ ಮಕ್ಕಳಲ್ಲಿ ಮೂಳೆ ಬೆಳವಣಿಗೆಯನ್ನು ಕುಂಠಿತ ಮಾಡಬಲ್ಲ ಅಪರೂಪದ ರೋಗ ವೊಂದನ್ನು ಮೊದಲ ಬಾರಿಗೆ ಪತ್ತೆ ಮಾಡಿದ್ದಾರೆ.  

Advertisement

ಈ ಸ್ಥಿತಿಯು ಮೂಳೆಗಳ ಅಸಹಜ ಬೆಳವಣಿಗೆ ಯಿಂದ ವ್ಯಕ್ತಿಗಳಲ್ಲಿ  ಕುಬ್ಜತೆಯನ್ನು ಉಂಟು ಮಾಡುತ್ತದೆ. ಇದರ ಜೆನೆಟಿಕ್‌ ಮೂಲವನ್ನೂ ಸಹ ಪತ್ತೆ ಹಚ್ಚುವುದರಲ್ಲಿ ತಂಡವು ಯಶಸ್ವಿಯಾಗಿದೆ ಎಂದು ತಂಡದ ಮುಖ್ಯಸ್ಥರಾದ ಡಾ| ಗಿರೀಶ್‌ ಕಟ್ಟ ತಿಳಿಸಿದ್ದಾರೆ. ಈ ಸಂಶೋಧನೆಯನ್ನು ಹೆಸರಾಂತ ವೈದ್ಯಕೀಯ ಪತ್ರಿಕೆ “ಹ್ಯೂಮನ್‌ ಮ್ಯೂಟೇಶನ್‌’ನ‌ಲ್ಲಿ ಪ್ರಕಟಿಸಲಾಗಿದೆ.

ಎರಡು ಬೇರೆ ಬೇರೆ ಕುಟುಂಬದ ಮಕ್ಕಳನ್ನು ಪರಿಶೀಲಿಸಿದಾಗ ಅವರ ಬೆಳವಣಿಗೆ ಸಾಮಾನ್ಯ ಮಕ್ಕಳಿಗಿಂತ ತುಂಬಾ ಕುಂಠಿತವಾಗಿರುವುದು ಮತ್ತು ಅವರ ಬೆಳವಣಿಗೆ ಬಹಳ ನಿಧಾನಗತಿಯಲ್ಲಿರುವುದನ್ನು ಮಕ್ಕಳ ತಜ್ಞರು ಗಮನಿಸಿ ಮಣಿಪಾಲದ ಜೆನೆಟಿಕ್ಸ್‌ ವೈದ್ಯರ ಸಲಹೆಗಾಗಿ ಶಿಫಾರಸು ಮಾಡಿದರು.

ಡಾ| ಗಿರೀಶ್‌ ಕಟ್ಟ ಮತ್ತು ಡಾ| ಅಂಜು ಶುಕ್ಲಾ ಅವರು ಇದು ಸಾಮಾನ್ಯವಾಗಿ ಕಂಡುಬರುವ ಸ್ಥಿತಿಯಲ್ಲ ಎಂದು ಅರಿತು ಎಕೊಮ್‌ ಸಿಕ್ವೆನ್ಸಿಂಗ್‌ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಯ ಎಲ್ಲ ಆನುವಂಶಿಕ ಧಾತು(ಜೀನ್ಸ್‌)ಗಳನ್ನು ಅಧ್ಯಯನ ನಡೆಸಿದರು. ಈ ವೈದ್ಯಕೀಯ ತಂಡವು ಬಯೋ ಇನ್ಫಮ್ಯಾಟಿಕ್ಸ್‌ ಪರಿಣತರಾದ ಡಾ| ನೀತು ಕೃಷ್ಣ ಕೌಸ್ತುಭಮ್‌ ಮತ್ತು ಡಾ| ಶ್ರೀಲಕ್ಷ್ಮೀ ಭವಾನಿಯವರ ಸಹಾಯದಿಂದ ಈ ರೋಗದ ಕಾರ್ಯವಿಧಾನ ಹಾಗೂ ಲಕ್ಷಣದ ಪರಸ್ಪರ ಸಂಬಂಧವನ್ನು ಪತ್ತೆ ಮಾಡಿತು.

 ಈ ಹೊಸ ಆನುವಂಶಿಕ ಧಾತುವಿನ ಯಶಸ್ವಿ ಆವಿಷ್ಕಾರದ ಅನಂತರ ಜರ್ಮನಿಯ ಡಾ| ಕಸ್ಟಿìನ್‌ ಕುಶೆ ಮತ್ತು ಡಾ| ಲೆಯೊನ್ನಿ ವೊನ್‌ ಎಲ್ಸ°ರ್‌ ವಿಜ್ಞಾನಿಗಳ ಸಹಯೋಗದಲ್ಲಿ ತಂಡವು  ಈ ರೋಗದ ಕುರಿತು ಮತ್ತಿಷ್ಟು ಪ್ರಯೋಗಗಳನ್ನು ನಡೆಸಿತು. ಈ ಸಂಶೋಧನೆಯ ಮೇಲ್ವಿ ಚಾರಣೆಯಲ್ಲಿ ಬೆಲ್ಜಿಯಂನ ಆಂಟೆÌರ್ಪ್‌ ವಿಶ್ವ ವಿದ್ಯಾಲಯದ ಡಾ| ಹರ್ಟ್‌ ಮೊರ್ಟಿಯರ್‌ ಸಹಕರಿಸಿದ್ದರು. ಮಾಹೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿನ ನಮ್ಮ ಬದ್ಧತೆಯನ್ನು ಈ ಕಾರ್ಯವು ವಿವರಿಸುತ್ತಿದೆ ಎಂದು ಸತತ ಮೂರು ವರ್ಷಗಳ  ಯಶಸ್ವಿ ಆವಿಷ್ಕಾರವನ್ನು ಕುಲಪತಿ ಡಾ| ವಿನೋದ್‌ ಭಟ್‌ ಪ್ರಶಂಸಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next