Advertisement

ಬಂಡೆಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

04:10 PM Apr 19, 2021 | Team Udayavani |

ಮದ್ದೂರು: ತಾಲೂಕಿನ ಚಾಮನಹಳ್ಳಿಗ್ರಾಮದ ಶ್ರೀ ಬಂಡೆಶನೇಶ್ವರಸ್ವಾಮಿಜಾತ್ರಾ ಮಹೋತ್ಸವ ಭಾನುವಾರವಿಜೃಂಭಣೆಯಿಂದ ನೆರವೇರಿತು.

Advertisement

ಶನಿವಾರ ಬೆಳಗ್ಗೆ 7.30ಕ್ಕೆ ಆರಂಭವಾದಪೂಜಾ ವಿಧಿ ವಿಧಾನದಲ್ಲಿ ಮಹಾಗಣಪತಿಹೋಮ, ರಾಮತಾರಕ ಹೋಮ,ರುದ್ರಹೋಮ, ಶ್ರೀ ಶನೇಶ್ವರಸ್ವಾಮಿಮೂಲ ಮಂತ್ರ ಸೇರಿದಂತೆ ಇನ್ನಿತರೆಪೂಜಾ ಕೈಂಕರ್ಯ ನೆರವೇರಿದವು.ಸಂಜೆ 7 ಗಂಟೆಗೆ ದೇವಾಲಯದಆವರಣದಲ್ಲಿ ಛಾಯಾ ದೇವಿಅಮ್ಮನವರ ಪೂಜಾ ಕುಣಿತಅಮ್ಮನವರಿಗೆ ಮಡಿಲಕ್ಕಿ ತುಂಬುವಜತೆಗೆ ಅಭಿಷೇಕ, ಅಲಂಕಾರ,ಮಹಾಮಂಗಳಾರತಿ ಸೇರಿದಂತೆ ಹಲವುಪೂಜಾ ವಿಧಿ ವಿಧಾನಗಳು ಸರಾಗವಾಗಿನೆರವೇರಿದವು.

ಭಾನುವಾರ ಬೆಳಗ್ಗೆ 4ಕ್ಕೆ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, ಬಂಡೆಶನೇಶ್ವರ ಸ್ವಾಮಿ ಬಸವಪ್ಪ ಉತ್ಸವವುಹೂ-ಹೊಂಬಾಳೆ ಸಹಿತ ಜರುಗಿತಲ್ಲದೇಪೂಜಾ ಪಟದೊಂದಿಗೆ ಚಾಮನಹಳ್ಳಿಗ್ರಾಮದ ಪ್ರಮುಖ ಬೀದಿಗಳಲ್ಲಿತಮಟೆ, ನಗಾರಿ, ಕೀಲು ಕುದುರೆ,ಮೆರವಣಿಗೆ ಬಾಯಿ ಬೀಗ, ತಲೆಮುಡಿಸೇವಾ ಕೈಂಕರ್ಯ ಜರುಗಿದವು.

ಖಾಸಗಿವಾಹಿನಿಯ ಸರಿಗಮ ರನ್ನರ್‌ ಅಪ್‌,ಕಂಬದ ರಂಗಯ್ಯ, ವರ್ಣ ಚೌವ್ಹಾಣ್‌ಹಾಗೂ ಶಿವಾರ ಉಮೇಶ್‌ತಂಡದವರಿಂದ ಭಕ್ತಿಗಾನ ಸಾಂಸ್ಕೃತಿಕಕಾರ್ಯಕ್ರಮ ಆಯೋಜನೆಗೊಂಡಿತ್ತು.ಚಾಮನಹಳ್ಳಿ ಸೇರಿದಂತೆ ಇನ್ನಿತರೆಗ್ರಾಮಗಳಿಂದ ಆಗಮಿಸಿ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next