Advertisement

“ಯುವರತ್ನ’ ಬಳಗದಲ್ಲಿ ಬೊಮ್ಮನ್‌ ಇರಾನಿ?

05:51 AM Mar 12, 2019 | |

ಸದ್ಯ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇನ್ನು ಆರಂಭದಿಂದಲೂ ಈ ಚಿತ್ರದ ಪ್ರಮುಖ ಪಾತ್ರಗಳಿಗೆ ದೊಡ್ಡ ದೊಡ್ಡ ಕಲಾವಿದರ ಹೆಸರುಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ಚಿತ್ರದ ನಾಯಕಿಯಾಗಿ ಸಯೇಷಾ ಸೈಗಲ್‌ ಚಿತ್ರತಂಡವನ್ನು ಸೇರಿಕೊಂಡಿದ್ದರು. ಈಗ ಚಿತ್ರದ ಮತ್ತೂಂದು ಪ್ರಮುಖ ಪಾತ್ರವನ್ನು ಬಾಲಿವುಡ್‌ ನಟ ಬೊಮ್ಮನ್‌ ಇರಾನಿ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Advertisement

ಹೌದು, ಚಿತ್ರದ ಮೂಲಗಳ ಪ್ರಕಾರ, ಬಾಲಿವುಡ್‌ ನಟ ಬೊಮ್ಮನ್‌ ಇರಾನಿ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಬೊಮ್ಮನ್‌ ಇರಾನಿ ಜೊತೆ ಚಿತ್ರತಂಡ ಮಾತುಕತೆ ಕೂಡ ನಡೆಸಿದೆ. ಇನ್ನು ತಮ್ಮ ಪಾತ್ರದ ಬಗ್ಗೆ ಕೇಳಿ ಮೆಚ್ಚಿಕೊಂಡಿರುವ ಇರಾನಿ ಕೂಡ “ಯುವರತ್ನ’ ಚಿತ್ರದಲ್ಲಿ ಅಭಿನಯಿಸುವ ಆಸಕ್ತಿ ತೋರಿದ್ದಾರಂತೆ. ಆದರೆ, ಡೇಟ್ಸ್‌ ಹೊಂದಾಣಿಕೆಯಾದರೆ ಬೊಮ್ಮನ್‌ ಬರಬಹುದು.

Advertisement

Udayavani is now on Telegram. Click here to join our channel and stay updated with the latest news.

Next